ಇದು ಮನೆಯಲ್ಲ ಅರಮನೆ

ಮಿತ್ತಬಾಗಿಲು ಗ್ರಾಮದ ಕುಕ್ಕಾವು ಎಂಬಲ್ಲಿ ಅರಮನೆ ಹೋಲುವ ಮನೆಯೊಂದು ರೂಪುತಳೆದಿದ್ದು. ಮೇ 16 ರಂದು ಇದರ ಗೃಹಪ್ರವೇಶ. ಕರ್ನಾಟಕ, ರಾಜಸ್ಥಾನ ಮತ್ತು ಅರೆಬಿಯನ್ ಮಾದರಿಗಳನ್ನು ಸಂಯೋಜಿಸಿ ಅಪ್ಪಟ ಸಿನಿಮಾ ಸೆಟ್ ರೂಪ ತಾಳುವ ವಿಶಿಷ್ಟ ಶೈಲಿಯಲ್ಲಿ ಈ ಮನೆ ನಿರ್ಮಾಣವಾಗಿದೆ.
ಮೂಲತಃ ಕೇರಳದವರಾಗಿದ್ದು ಕರ್ನಾಟಕಕ್ಕೆ ಕಾಲಿಡುತ್ತಲೇ ಕೊಲ್ಲೂರು ಶ್ರೀ ಮೂಕಾಂಬಿಕೆಯ ನಾಡಿನಲ್ಲಿ ನೆಲೆಸಿದ ಕೃಷಿಕ ಕುಟುಂಬ, ದೇವಸ್ಯ ಮತ್ತು ಸೆಲಿನ್ ದಂಪತಿ ಇದೀಗ ಮಿತ್ತಬಾಗಿಲು ಗ್ರಾಮದ ಕುಕ್ಕಾವಿನಲ್ಲಿ ಕೃಷಿ ಭೂಮಿ ಖರೀದಿಸಿ ಇಲ್ಲೇ ನೆಲೆಸಿದ್ದಾರೆ. ದಂಪತಿ ನಿರ್ಮಿಸಿದ ವೈಭವೋಪೇತ ಮನೆಯ ಹಿಂದಿನ ಪರಿಕಲ್ಪನೆ ಅವರ ಪುತ್ರ, ಬಹುಭಾಷಾ ಚಲನಚಿತ್ರ ನಟ, ಹಲವು ಪ್ರಶಸ್ತಿಗಳ ಸರದಾರ, ಅಪ್ಪಟ ಕೃಷಿ ಆಸಕ್ತ ಡಾ. ಅರುಣ್ ದೇವಸ್ಯ ಅವರದ್ದು.

ಯುಎಸ್‌ಎ ಯುನಿರ್ವಸಿಟಿಯಿಂದ ಗೌರವ ಡಾಕ್ಟರೇಟ್
ಕೃಷಿ ಕ್ಷೇತ್ರದ ಆಸಕ್ತ, ಅಂತಾರಾಷ್ಟ್ರೀಯ ಯಶಸ್ವಿ ಉದ್ಯಮಿ, ಚಲನಚಿತ್ರ ಬಹುಭಾಷಾ ನಟ, ಹೈನುಗಾರ, ಸಂಘ ಸಂಸ್ಥೆಗಳ ಮೂಲಕ ಅಂತಾರಾಷ್ಟ್ರೀಯ ಸೇವಾ ಚಟುವಟಿಕೆಗಳನ್ನು ನಡೆಸುತ್ತಿರುವ ಅರುಣ್ ದೇವಸ್ಯ ಅವರಿಗೆ ಯುಎಸ್‌ಎ ಇಂಟರ್‌ನ್ಯಾಷನಲ್ ತಮಿಳು ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ.

ಹಳೆಮನೆಯನ್ನು ಹಾಗೆಯೇ ಉಳಿಸಿ ಭವ್ಯ ಹೊಸಮನೆ ನಿರ್ಮಾಣ
ಕೃಷಿ ಭೂಮಿ ಖರೀದಿಸಿ ಇಲ್ಲಿ ನೆಲೆಸಿರುವ ದೇವಸ್ಯ ಅವರ ಪುತ್ರ ತಮ್ಮದೇ ಆಸಕ್ತಿಯ ಕ್ಷೇತ್ರವಾದ ಚಲನಚಿತ್ರದ ಶೈಲಿಯಲ್ಲಿ, ಚಿತ್ರ ತಾರೆಗಳು ಮತ್ತು ನಿರ್ಮಾಪಕರ ಬೇಡಿಕೆಗೆ ಪೂರಕವಾಗುವಂತೆ ತಮ್ಮ ಹಳೆ ಮನೆಯನ್ನು ಹಾಗೆಯೇ ಉಳಿಸಿ ಭವ್ಯವಾಗಿ ಹೊಸಮನೆ ನಿರ್ಮಾಣ ಮಾಡಿದ್ದಾರೆ.
ಈ ಮನೆಯಲ್ಲಿ ಏನಿಲ್ಲ ಏನಿದೆ ಎಂದು ಈಗ ಕೇಳಬೇಡಿ. ಒಮ್ಮೆ ಭೇಟಿ ನೀಡಿ ನೋಡಲೇಬೇಕು ಎನ್ನುವಷ್ಟು ಸುಂದರವಾಗಿ ಮೂಡಿಬಂದಿದೆ.
ಸಾಮಾನ್ಯವೆಂಬಂತೆ ಕೊಠಡಿಗಳೆಲ್ಲವೂ ಹವಾನಿಯಂತ್ರಿತ ವಾಗಿದ್ದು ವಿಶಾಲವಾಗಿದೆ. ಹಾಗೂ ಟಬ್ ಬಾತ್ ರೂಂಗಳು ಇದೆ. ಚಿತ್ರ ನಟರುಗಳು ಉಪಯೋಗಿಸುವ ಶೈಲಿಯ ಮೇಕಪ್ ಏರಿಯಾ ಸಹಿತ ಅತ್ಯಾಧುನಿಕ ಲೈಟಿಂಗ್ ಸೌಕರ್ಯಗಳಿವೆ.

ಕೇರಳ ಶಿಲ್ಪಿಗಳಿಂದ ಗೋಡೆಯಲ್ಲಿ ಉಬ್ಬು ಚಿತ್ರ:
ಒಂದು ವರ್ಷ ಶ್ರಮಪಟ್ಟು ಕೇರಳದ ತಿರುವನಂತಪುರಂ ಟೆಂಪಲ್ ಆರ್ಟ್ ಕಲಾವಿದರು ದೇವಸ್ಯ ಅವರ ಮನೆಯಲ್ಲಿ ನವಿಲು, ಆನೆ, ಸಿಂಹ ಇತ್ಯಾಧಿ ಉಬ್ಬುಚಿತ್ರಗಳನ್ನು ಗೋಡೆಗಳ ಮೇಲೆ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಅಲ್ಲದೆ ಅಷ್ಟೇ ಸುಂದರವಾಗಿ ಅದಕ್ಕೆ ತೈಲವರ್ಣ ಪೈಂಟಿಂಗ್ ಮಾಡಲಾಗಿದೆ.
ವಿಶಾಲ ಅಂಗಣ, ಈಜುಕೊಳ, ಮನೆಯ ಎದುರಿಗೆ ಹಚ್ಚಹಸಿರಿನ ಹುಲ್ಲುಗಾವಲು ಮಧ್ಯದಲ್ಲಿ ಕಲ್ಲು ಕಂಬಗಳ ಮೇಲೆ ಲೈಟಿಂಗ್, ಕಲ್ಲು ಚಪ್ಪಡಿ, ಇಂಟರ್‌ಲಾಕ್ ಮತ್ತು ಪಾಲಿಶ್ ಮಾಡಲಾದ ಕೆಂಪು ಕಲ್ಲಿನ ನೆಲ ಹಾಸು ಮಾಡಿಸಿದ್ದಾರೆ. ಅಂಗಳದಲ್ಲಿರುವ ಬಾವಿಗೆ ಕಟ್ಟೆಯ ಬದಲು 2 ಕುದುರೆಗಳು ಸಾರೋಟ್ ಓಡಿಸಿದಂತೆ ಕಾಣುವ ರೀತಿಯಲ್ಲಿ ಕಲಾಕೃತಿ ನಿರ್ಮಿಸಿದ್ದಾರೆ. ಕಲ್ಲಿನ ಕಂಬಗಳ ನಿರ್ಮಾಣ, ಅಂಗಳದಲ್ಲಿ ಒಂದು ಕಡೆ ಪಿರಂಗಿ ಮಾದರಿ ಜೋಡಣೆ, ಇನ್ನೊಂದು ಕಡೆ ಎತ್ತಿನ ಗಾಡಿ ನಿಲ್ಲಿಸಿ ಪ್ರಾಕೃತಿಕ ಸೌಂದರ್ಯ ತಂದಿದ್ದಾರೆ. ಆವರಣಗೋಡೆಯ ಹೊರಗೂ ಸ್ವಲ್ಪ ಜಾಗ ಗಾರ್ಡನ್‌ಗೆ ಮೀಸಲಿಟ್ಟಿದ್ದಾರೆ.
ಮನೆ ಒಳಗೆ ಬೇಸಿಗೆಯಲ್ಲೂ ಮಳೆ ಬರುವ ಅನುಭವ
ಜಗಲಿಯಲ್ಲಿ ಕುಳಿತುಕೊಂಡು ಎದುರಿನ ಬಾಗಿಲು ಮುಚ್ಚಿದರೆ ಒಂದು ಕಡೆ ಮಳೆಬಂದಂತೆ ಅನುಭವವಾಗುವ ರೀತಿಯಲ್ಲಿ ಮೇಲಿನಿಂದ ನೀರು ಸ್ಪ್ರೇ ಆಗುವ ಸ್ಪಿಂಕ್ಲರ್ ಅಳವಡಿಸಿದ್ದಾರೆ. ನಾಲ್ಕು ಕಡೆ ಸಣ್ಣ ಹೆಂಚಿನ ಮೇಲ್ಚಾವಣಿ ನಿರ್ಮಿಸಿದ್ದು ಅದರ ಮೇಲೆ ಬೀಳುವ ನೀರು ಮಳೆ ನೀರಿನಂತೆ ನೆಲಕ್ಕೆ ಹರಿದುಬೀಳುತ್ತದೆ. ನೀರು ನೆಲಕ್ಕೆ ಬೀಳುವಲ್ಲಿಗೆ ಬಿಳಿ-ನೀಲಿ ಮಿಶ್ರಿತ ಟೈಲ್ಸ್‌ಗಳ ಮೇಲೆ ಬೀಳುವಂತೆ ಮಾಡಲಾಗಿದ್ದು ಅಲ್ಲಿಗೆ ಅಳವಡಿಸಲಾಗಿರುವ ಟೈಲ್ಸ್‌ಗಳ ಮೇಲೆ ಹರಿದುಹೋಗುವಂತೆ ಒಂಥರಾ ಖುಷಿ ಕೊಡುವ ರೀತಿಯಲ್ಲಿ ಜೋಡಿಸಿಕೊಳ್ಳಲಾಗಿದೆ.

ಸ್ಥಳೀಯರಿಗೆ ಕೆಲಸ:
ವಿಶೇಷ ಕೆಲಸಗಳು ಹೊರತುಪಡಿಸಿ ಉಳಿದ ಎಲ್ಲ ಕೆಲಸಗಳಿಗೂ ಅವರು ಸ್ಥಳೀಯ ಮೇಸ್ತ್ರಿಗಳು ಮತ್ತು ಕಾರ್ಮಿಕರನ್ನೇ ಬಳಸಿಕೊಂಡಿದ್ದಾರೆ. ಈ ಸುಂದರ ನಿರ್ಮಾಣದ ಪರಿಕಲ್ಪನೆ ಪೂರ್ಣವಾಗಿ ಡಾ| ಅರುಣ್ ದೇವಸ್ಯ ಅವರದ್ದೇ. ಅವರೇ ಇದರ ಇಂಜಿನಿಯರ್ ಮತ್ತು ಆರ್ಕಿಟೆಕ್ಟ್. ಎಲ್ಲ ಕೆಲಸಗಳನ್ನೂ ಅಚ್ಚುಕಟ್ಟಾಗಿ ರೂಪಬರುವಂತೆ ಅವರು ಮಾಡಿಸಿದ್ದಾರೆ. ಮನೆಯ ಗೋಡೆಯ ಸುತ್ತೆಲ್ಲಾ ಕಲಾಕೃತಿಗಳು ಒಂದೆಡೆಯಾದರೆ ಬಾಕಿ ಉಳಿದಿರುವ ಜಾಗಗಳಲ್ಲಿ ಸಂಗೀತ ಉಪಕರಣ ಮಾದರಿಗಳನ್ನು ಅಳವಡಿಸಿ ಇನ್ನಷ್ಟು ಮೆರಗು ಬರುವಂತೆ ಮಾಡಿದ್ದಾರೆ. ಮೇಲಂತಸ್ತಿನಲ್ಲಿ ಸಣ್ಣ ಪಾರ್ಟಿ ಹಾಲ್, ಡ್ರಿಂಕ್ಸ್ ಕೌಂಟರ್, ಸಣ್ಣ ವೇದಿಕೆ ವ್ಯವಸ್ಥೆಗೊಳಿಸಲಾಗಿದ್ದು ಇದೊಂಥರಾ ಕಲಾವಿದನ ಮನಸ್ಸನ್ನು ತೆರೆದುಕೊಳ್ಳುವಂತೆ ಮಾಡುತ್ತಿದೆ.

ನೀರಾಶ್ರಯಕ್ಕೆ ಕೆರೆ ಬಾವಿಗೆ ಆದ್ಯತೆ:
ತಮ್ಮ ಜಾಗದಲ್ಲಿ ಮನೆ ಬಳಕೆ ಮತ್ತು ಕೃಷಿ ಚಟುವಟಿಕೆಗಾಗಿ ಅವರು 3 ಕೆರೆ, 2 ಬಾವಿ ನೀರು ಆಶ್ರಯಿಸಿದ್ದಾರೆ. ಕೊಳವೆ ಬಾವಿ ಕೂಡ ಇದೆ. ಕೃಷಿಯನ್ನು ಮಾದರಿಯಾಗಿ ಬೆಳೆದಿರುವ ಅವರು ಬೇರೆ ಬೇರೆ ಜಾತಿಯ ಹಣ್ಣುಗಳ ಗಿಡಗಳನ್ನೂ ಬೆಳೆಸಿದ್ದಾರೆ. ಕೆಲಸದವರಿಗೆ ಇವರ ಜಾಗದಲ್ಲೇ ಮನೆ ನಿರ್ಮಿಸಿಕೊಟ್ಟು ಅವರ ಮುಖದಲ್ಲೂ ಸಂತೋಷ ತಂದಿದ್ದಾರೆ.

32 ಜಾನುವಾರು ಸಾಕುವ ಮನೆ
ಹೈನುಗಾರಿಕೆಯನ್ನು ನಿಯತ್ತಾಗಿ ನಡೆಸುತ್ತಾ ಬರುತ್ತಿರುವ ಅರುಣ್ ದೇವಸ್ಯ ಮನೆಯಲ್ಲಿ 32 ವಿವಿಧ ತಳಿಯ ಜಾನುವಾರುಗಳಿವೆ. ಅದಕ್ಕಾಗಿ ಮನೆಯ ಮುಖ್ಯ ದ್ವಾರದ ಒಳಗೆ ಪ್ರತ್ಯೇಕ ಬರುವಂತೆ ಹಟ್ಟಿ ಕಟ್ಟಿಕೊಟ್ಟಿದ್ದಾರೆ. ಅವುಗಳ ಆರೈಕೆಗೆಂದೇ ಪ್ರತ್ಯೇಕ ಜನ ಇದ್ದಾರೆ. ಜಾನುವಾರುಗಳಿಗೆ ನೀರಿನ ಸ್ಪಿಂಕ್ಲರ್ ಮಾದರಿಯಲ್ಲಿ ಸ್ಪ್ರೇ ಆಗುವ ವಿಧಾನ, ಹಟ್ಟಿಯಲ್ಲಿ ದೇವರ ಹಾಡುಗಳು ಮೆಲುದನಿಯಲ್ಲಿ ಜಾನುವಾರುಗಳಿಗೆ ಕೇಳಿಸುವಂತೆ ವ್ಯವಸ್ಥೆ, ಹಾಗೂ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ದಿನಕ್ಕೆ 150 ಲೀಟರ್ ಮತ್ತು ಅದಕ್ಕಿಂತ ಹೆಚ್ಚು ಅವರು ಹಾಲು ಉತ್ಪಾದನೆ ಗೈಯ್ಯುತ್ತಿದ್ದು, ಸ್ಥಳೀಯ ಮಿಲ್ಕ್ ಸೊಸೈಟಿ ಸದಸ್ಯರಾದ ಇವರೇ ಅಲ್ಲಿ ಅತೀ ಹೆಚ್ಚು ಹಾಲು ಹಾಕುವ ಸಂಘದ ಪ್ರಥಮ ಸದಸ್ಯರಾಗಿದ್ದಾರೆ.

ಸಾಕುಪ್ರಾಣಿಗಳಿಗೆ ಇಲ್ಲಿ ಸ್ವರ್ಗ
ಜಾನುವಾರು ಮಾತ್ರವಲ್ಲದೆ ಸಾಕು ಪ್ರಾಣಿಗಳಾದ ಆಡು, ಮೊಲ, ಬಾತುಕೋಳಿ, ನಾಟಿ ಕೋಳಿ, ಹಂಸ, ನಾಯಿಗಳು ಕೂಡ ಇಲ್ಲಿ ಸಾಕಲ್ಪಡುತ್ತಿದ್ದು ಅವುಗಳ ಪಾಲಿಗೆ ಇದೇ ಸ್ವರ್ಗ. ಸಮಯಕ್ಕೆ ಸರಿಯಾಗಿ ಆಹಾರ, ನೀರು ಪೂರೈಕೆ ವ್ಯವಸ್ಥೆಯನ್ನು ಆಳುಗಳು ನೋಡಿಕೊಳ್ಳುತ್ತಿದ್ದಾರೆ.

ಅಂತಾರಾಷ್ಟ್ರೀಯ ಉದ್ಯಮಿ…ಅಪ್ಪಟ ಕೃಷಿಕ ಕೂಡ….!
ಡಾ. ಅರುಣ್ ದೇವಸ್ಯ ಅವರು ಓದಿದ್ದು ಹೊಟೇಲ್ ಮೆನೇಜ್‌ಮೆಂಟ್ ಮತ್ತು ಮೆಡಿಕಲ್ ರೇಡಿಯೋ ಥೆರಫಿ ಕ್ಷೇತ್ರ. ಆದರೆ ವೃತ್ತಿ ಬದುಕಿನಲ್ಲಿ ಆಯ್ದುಕೊಂಡದ್ದು ಮಾತ್ರ ಬೇರೆಯೇ ಆಯ್ಕೆ. ಪ್ರಸ್ತುತ ಅವರು ಬೆಂಗಳೂರಿನಲ್ಲಿ ಟ್ರಾನ್ಸ್‌ವೇವ್ಸ್ ಗ್ರೂಪ್ ಆಫ್ ಕಂಪೆನಿ ನಡೆಸುತ್ತಿದ್ದಾರೆ. ಬೆಂಗಳೂರು ಸಿನೆಮಾ ಫ್ಯಾಕ್ಟರೀಸ್ ಕಂಪೆನಿ, ಸಾಯಿರಾಮ್ ಪಿಕ್ಚರ್‍ಸ್, ಸಹಿತ ಸಾಫ್ಟ್‌ವೇರ್ ಕಂಪೆನಿ ನಡೆಸುತ್ತಿದ್ದಾರೆ ತಮ್ಮ ವ್ಯವಹಾರ ಉದ್ಧೇಶಕ್ಕಾಗಿ ಅವರು ಸಿಂಗಾಪುರ, ಮಲೇಶಿಯಾ, ದುಬಾಯಿ, ಅಬುದಾಬಿ ಮೊದಲಾದ ಕಡೆಗೆ ಪ್ರವಾಸ ಕೈಗೊಂಡಿದ್ದಾರೆ. ಆದರೆ ಇತ್ತ ತಿಂಗಳಿಗೆ 2-3 ಬಾರಿ ಊರಿಗೆ ಬರುವ ಅವರು ಅಪ್ಪಟ ಕೃಷಿಕರಂತೆ ವರ್ತಿಸುತ್ತಾರೆ. ಮಾದರಿ ಹೈನುಗಾರನಂತೆ ಜಾನುವಾರುಗಳ ಜೊತೆ ಮಾತನಾಡುತ್ತಾರೆ. ತಂದೆ ಬೆಳೆಸಿದ ಕೃಷಿ ಅಡಿಕೆ,ತೆಂಗು, ರಬ್ಬರ್, ಭತ್ತ ಎಲ್ಲ ಕೃಷಿಯ ಬಗ್ಗೆಯೂ ಅಪಾರ ಕಾಳಜಿ ವಹಿಸುತ್ತಾರೆ.
ಮಿತ್ತಬಾಗಿಲು ಗ್ರಾಮದ ಕುಕ್ಕಾವು ಎಂಬಲ್ಲಿ ಅರಮನೆ ಹೋಲುವ ಮನೆಯೊಂದು ರೂಪುತಳೆದಿದ್ದು. ಮೇ ೧೬ ರಂದು ಇದರ ಗೃಹಪ್ರವೇಶ. ಕರ್ನಾಟಕ, ರಾಜಸ್ಥಾನ ಮತ್ತು ಅರೆಬಿಯನ್ ಮಾದರಿಗಳನ್ನು ಸಂಯೋಜಿಸಿ ಅಪ್ಪಟ ಸಿನಿಮಾ ಸೆಟ್ ರೂಪ ತಾಳುವ ವಿಶಿಷ್ಟ ಶೈಲಿಯಲ್ಲಿ ಈ ಮನೆ ನಿರ್ಮಾಣವಾಗಿದೆ.
ಮೂಲತಃ ಕೇರಳದವರಾಗಿದ್ದು ಕರ್ನಾಟಕಕ್ಕೆ ಕಾಲಿಡುತ್ತಲೇ ಕೊಲ್ಲೂರು ಶ್ರೀ ಮೂಕಾಂಬಿಕೆಯ ನಾಡಿನಲ್ಲಿ ನೆಲೆಸಿದ ಕೃಷಿಕ ಕುಟುಂಬ, ದೇವಸ್ಯ ಮತ್ತು ಸೆಲಿನ್ ದಂಪತಿ ಇದೀಗ ಮಿತ್ತಬಾಗಿಲು ಗ್ರಾಮದ ಕುಕ್ಕಾವಿನಲ್ಲಿ ಕೃಷಿ ಭೂಮಿ ಖರೀದಿಸಿ ಇಲ್ಲೇ ನೆಲೆಸಿದ್ದಾರೆ. ದಂಪತಿ ನಿರ್ಮಿಸಿದ ವೈಭವೋಪೇತ ಮನೆಯ ಹಿಂದಿನ ಪರಿಕಲ್ಪನೆ ಅವರ ಪುತ್ರ, ಬಹುಭಾಷಾ ಚಲನಚಿತ್ರ ನಟ, ಹಲವು ಪ್ರಶಸ್ತಿಗಳ ಸರದಾರ, ಅಪ್ಪಟ ಕೃಷಿ ಆಸಕ್ತ ಡಾ. ಅರುಣ್ ದೇವಸ್ಯ ಅವರದ್ದು.

ಸಂಘ ಸಂಸ್ಥೆಗೂ ಸೈ…ಕೃಷಿ ಉದ್ಯಮಕ್ಕೂ ಜೈ…
ಡಾ| ಅರುಣ್ ದೇವಸ್ಯ ಅವರು ಈಗಾಗಲೇ ಹ್ಯೂಮನ್ ರೈಟ್ಸ್ ಅಸೋಸಿಯೆಶನ್ ಇದರ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಇಂಟರ್‌ನ್ಯಾಷನಲ್ ಪ್ರೆಸ್ ಏಂಡ್ ಮೀಡಿಯಾ ಛೇಂಬರ್ ಸದಸ್ಯರಾಗಿದ್ದಾರೆ. ರೈಫಲ್ ಅಸೋಸಿಯೇಶನ್ ಶೂಟಿಂಗ್ ಕ್ಲಬ್ ಇದರ ಪೋಷಕ ಸದಸ್ಯರಾಗಿದ್ದಾರೆ. ಟೆಲಿವಿಶನ್ ಅಸೋಸಿಯೇಶನ್ ನಿರ್ದೇಶಕರಾಗಿದ್ದಾರೆ. ಪ್ರೊಡ್ಯೂಸರ್‍ಸ್ ಅಸೋಸಿಯೇಶನ್, ಫಿಲಂ ಛೇಂಬರ್ ಇದರಲ್ಲೆಲ್ಲಾ ಸದಸ್ಯರಾಗಿ ತೊಡಗಿಸಿಕೊಂಡಿದ್ದಾರೆ.

ಕನ್ನಡ ಚಿತ್ರಕ್ಕಾಗಿ ರಾಜ್ಯಮಟ್ಟದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ:
ಚಿತ್ರದುರ್ಗ, ಚಳ್ಳಕೆರೆ, ನಾಯಕನಹಳ್ಳಿ ಭಾಗದಲ್ಲಿ ಚಿತ್ರೀಕರಣಗೊಂಡಿರುವ ನಾಯಕನಹಳ್ಳಿ ತಿಪ್ಪೇ ರುದ್ರಸ್ವಾಮಿ ಚಿತ್ರದಲ್ಲಿ ಡಾ. ಅರುಣ್ ದೇವಸ್ಯ ಅವರದ್ದು ಹೀರೋ ಪಾತ್ರ. 400 ವರ್ಷಗಳ ಹಳೆ ಕಾಲದ ಧಾರ್ಮಿಕ ಶ್ರದ್ಧಾಕೇಂದ್ರವೊಂದರ ಚರಿತ್ರೆ ಆಧಾರಿತ ಚಿತ್ರದಲ್ಲಿ ಅವರ ಮನೋಜ್ಞ ಅಭಿನಯ ಮೆಚ್ಚಿ ಆಗಿನ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅತ್ಯುತ್ತಮ ಪೋಷಕನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ಚಲನಚಿತ್ರ ಮಾತ್ರವಲ್ಲದೆ ಸಂಘ ಸಂಸ್ಥೆ ಮೂಲಕ ಅವರು ಕೈಗೊಂಡಿರುವ ಸೇವೆಗಳಿಗಾಗಿ ಅವರಿಗೆ ಈಗಾಗಲೇ ಭಾರತ್ ಜ್ಯೋತಿ ಪ್ರಶಸ್ತಿ, ರಾಜೀವ ಗಾಂಧಿ ಎಕ್ಸಲೆನ್ಸ್ ಪ್ರಶಸ್ತಿ, ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ಎಕ್ಸಲೆನ್ಸ್ ಪ್ರಶಸ್ತಿ, ಸಹಿತ 7-8 ಪ್ರಶಸ್ತಿಗಳನ್ನು ಈಗಾಗಲೇ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಬಹುಭಾಷೆಗಳ 17 ಸಿನಿಮಾಗಳಲ್ಲಿ ನಟಿಸಿರುವ ಡಾ| ಅರುಣ್ ದೇವಸ್ಯ:
ಈ ಸುಂದರ ಪರಿಕಲ್ಪನೆಯ ತರುಣ ಬೆಂಗಳೂರಿನಲ್ಲೇ ನೆಲೆಸಿರುವ ಅರುಣ್ ದೇವಸ್ಯ ಅವರು ಬುಹುಭಾಷಾ ಚಿತ್ರನಟ. ಈಗಾಗಲೇ ಕನ್ನಡ, ಮಲೆಯಾಳಂ ಮತ್ತು ತೆಲುಗು ಸೇರಿ ಒಟ್ಟು 17 ಚಿತ್ರಗಳಲ್ಲಿ ವಿಲನ್ ಹಾಗೂ ಹೀರೂ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಶತ್ರು, ನಾಯಕನಹಳ್ಳಿ ತಿಪ್ಪೇ ರುದ್ರ ಸ್ವಾಮಿ ಅಲ್ಲದೆ ಮಲೆಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ಚಿತ್ರಕ್ಕೆ ಜೀವತುಂಬುವ ಪಾತ್ರ ನಿರ್ವಹಿಸಿದ್ದಾರೆ. ಮಲೆಯಾಳಂನಲ್ಲಿ ಅವರ ಇನ್ನೊಂದು ಚಿತ್ರ ಸದ್ಯದಲ್ಲೇ ಹೊರಬರಲಿದ್ದು ಸೆನ್ಸಾರ್ ಬೋರ್ಡ್ ಅನುಮತಿ ಲಭಿಸಿದೆ. ಕನ್ನಡದ ಖ್ಯಾತ ನಟಿ ಪೂಜಾ ಗಾಂಧಿ ಹೀರೋಯಿನ್ ಆಗಿರುವ ಚಿತ್ರದಲ್ಲಿ ಮೂರು ಮಂದಿ ವಿಲನ್‌ಗಳು ಮಾತ್ರ ಇರುವ ದೃಷ್ಯಗಳಲ್ಲಿ ಹಿಂದಿ ಭಾಷಾ ಖ್ಯಾತ ಖಳನಾಯಕ ನಟ ರಾಹುಲ್‌ದೇವ್, ಹಾರಿ ಜೋಸ್ ಜೊತೆ ಡಾ. ಅರುಣ್ ದೇವಸ್ಯ ಅವರು ಕೂಡ ಒಬ್ಬರಾಗಿ ಪಾತ್ರ ನಿರ್ವಹಿಸಿದ್ದಾರೆ. ಚಿತ್ರ ಸದ್ಯದಲ್ಲೇ ತೆರೆಕಾಣಲಿದೆ.

                                                                                                                                                                                                                                                                              ವಿಶೇಷ ಸಂದರ್ಶನ ಅಚ್ಚು, ಮುಂಡಾಜೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.