ಬೆಳ್ತಂಗಡಿ ಸೋಶಿಯಲ್ ಮೀಡಿಯಾದಲ್ಲಿ ಈ ವಾರ

ಎತ್ತಿನಹೊಳೆ ಯೋಜನೆ ಬೆಂಬಲಿಸಿದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ
ಜಾಲತಾಣಗಳಲ್ಲಿ ಭಾರೀ ಟ್ರೋಲ್‌ಗೊಳಗಾಗುತ್ತಿರುವ ಕರಾವಳಿಯ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಮತ್ತು ಜಿಲ್ಲೆಯ 8 ಶಾಸಕರುಗಳು

ಬಯಲು ಸೀಮೆಯ ಜನರಿಗೆ ಕುಡಿಯುವ ನೀರಿಗಾಗಿ ರೂಪಿತವಾಗಿದೆ ಎನ್ನುತ್ತಿದ್ದ ಸಾವಿರಾರು ಕೋಟಿ ರೂ ಎತ್ತಿನಹೊಳೆ ಯೋಜನೆ ಬೆಂಬಲಿಸಿ, ಕರಾವಳಿ ಭಾಗದ ಜನರಿಗೆ ಕುಡಿಯವ ನೀರಿಗಾಗಿ ಸಂಸ್ಕೃರಿಸಿದ ಚರಂಡಿ ನೀರು ಕುಡಿಯುವ ವಾತಾವರಣ ಸೃಷ್ಟಿಮಾಡಿದ್ದೀರಿ ಎಂದು ಕರಾವಳಿಯ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಡಿವಿ ಸದಾನಂದ ಗೌಡ ಮತ್ತು ಡಾ.ಎಂ ವೀರಪ್ಪ ಮೊಲಿ ಅವರ ಭಾವಚಿತ್ರವಿರುವ ಬ್ಯಾನರ್ ಅಳವಡಿಸಿ ಜನ ಆಕ್ರೋಶ ವ್ಯಕ್ತಪಡಿಸಿದ ಚಿತ್ರ ಈ ವಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದೆ. ಅಲ್ಲದೆ ೧೩ ಸಾವಿರ ಕೋಟಿ ರೂ. ಯೋಜನೆಯ ಕಮಿಷನ್ ಆಸೆಗಾಗಿ ನೀವು ಈ ಜಿಲ್ಲೆಯ ನದಿಯನ್ನು ಸರ್ವನಾಶ ಮಾಡಲು ಮುಂದಾದವರು ಎಂದೂ ಉಲ್ಲೇಖಿಸಲಾಗಿದೆ. ಈ ಬಾರಿಯ ಬಿರುಬಿಸಲಿಗೆ ದ. ಕ ಜಿಲ್ಲೆಯ ಬಹುತೇಕ ಎಲ್ಲಾ ಜೀವನದಿಗಳು, ತೊರೆಗಳು, ಕೆರೆ, ಕಟ್ಟೆ ಬಾವಿಗಳು, ಕೆಲವೆಡೆ ಕೊಳವೆಬಾವಿಗಳೂ ಕೂಡ ಬತ್ತಿಹೋಗಿದ್ದು ಈ ಸ್ಥಿತಿಯನ್ನು ಕಂಡು ಜನಪ್ರತಿನಿಧಿಗಳಿಗೆ ಬ್ಯಾನರ್ ಮೂಲಕ ಜನರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಕರಾವಳಿ ಜಿಲ್ಲೆಯ ಎಂಟೂ ಕ್ಷೇತ್ರಗಳ ಶಾಸಕರುಗಳಾದ ಯು.ಟಿ ಖಾದರ್, ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ರಾಜೇಶ್ ನಾಯ್ಕ್, ಹರೀಶ್ ಪೂಂಜ, ಅಂಗಾರ, ಉಮಾನಾಥ ಕೋಟ್ಯಾನ್ ಮತ್ತು ಭರತ್ ಶೆಟ್ಟಿ ಅವರನ್ನೂ ಕಾಲೆಳೆದಿರುವ ಆಕ್ರೋಶಿಗರು, ನಾವು ನಿಮ್ಮನ್ನು ಚುನಾಯಿಸಿದ್ದು ೪೦ ಲಕ್ಷ ರೂ ಕಾರಲ್ಲಿ ತಿರುಗಾಡುವುದಕ್ಕಲ್ಲ, ಜಿಲ್ಲೆಯ ಜನರಿಗೆ ಕುಡಿಯುವ ನೀರಿಲ್ಲ, ಮೊದಲು ಎತ್ತಿನ ಹೊಳೆ ವಿರೋಧಿಸಿ ವಿಧಾನ ಸೌಧದಲ್ಲಿ ಧರಣಿ ಮಾಡಿ, ಇಲ್ಲವಾದಲ್ಲಿ ರಾಜೀನಾಮೆ ನೀಡಿ ಅಮರಣಾಂತ ಉಪವಾಸ ಕೈಗೊಳ್ಳಿ ಎಂದೂ ಕಿಚಾಯಿಸಿದ್ದಾರೆ.


ಶಾಸಕರ ತಂದೆ ಮುತ್ತಣ್ಣ ಪೂಂಜ ಸರಳತೆಗೆ ನೆಟ್ಟಿಗರ ಸೆಲ್ಯೂಟ್…
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ತಂದೆ ಮುತ್ತಣ್ಣ ಪೂಂಜ ಗರ್ಡಾಡಿ ಗ್ರಾಮದ ಸಾಧಾರಣ ಕೃಷಿಕ ಹಾಗೂ ಹೈನುಗಾರ.
ನಿತ್ಯವೂ ಸೈಕಲ್ ಏರಿ ಅವರು ಮಿಲ್ಕ್ ಸೊಸೈಟಿಗೆ ಸ್ಟೀಲ್ ಕ್ಯಾನ್‌ನಲ್ಲಿ ಹಾಲು ಹಾಕಿ ಬರುವ ದೃಶ ಊರಿನಲ್ಲಿ ಸರ್ವೇ ಸಾಮಾನ್ಯ. ಇದು ವರ್ಷದ ಹಿಂದೆ ಪುತ್ರ ಶಾಸಕನಾದಾಗ ಒಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಪುತ್ರ ಶಾಸಕನಾಗಿ ವರ್ಷ ಕಳೆದರೂ ಮುತ್ತಣ್ಣ ಪೂಂಜ ಮಾತ್ರ ಎಂದಿನಂತೆ ತನ್ನ ಕಾಯಕದಲ್ಲಿ ಎಳ್ಳಷ್ಟೂ ಬದಲಾಯಿಸದೆ ಇರುವ ಅವರ ಈ ಸರಳ ಜೀವನ ಶೈಲಿ ಮತ್ತು ವ್ಯಕ್ತಿತ್ವ ಹಾಗೂ ಕೃಷಿ ಕಾಯಕ ಪ್ರೀತಿ ಇತರರಿಗೆ ಮಾದರಿಯಾಗಿದೆ.
ಹಾಲು ಕೊಂಡೋಗಲು ಆಳುಗಳಿದ್ದರೂ ಮಧ್ಯೆ ಮಧ್ಯೆ ಈಗಲೂ ಮುತ್ತಣ್ಣ ಪೂಂಜ ಅವರೇ ಆ ಕೆಲಸ ಮಾಡುತ್ತಿದ್ದಾರೆ. ಶಾಸಕರ ತಾಯಿ ನಳಿನಿ ಅವರಲ್ಲಿ ವಿಚಾರಿಸಿದರೆ, ಪುತ್ರ ಇದೆಲ್ಲಾ ನೀವು ಮಾಡಬೇಡಿ. ವಿಶ್ರಾಂತಿ ತೆಗೆದುಕೊಳ್ಳಿ ಎನ್ನುತ್ತಾನೆ ಆದರೆ ಪತಿಯ ಖುಷಿಗಾಗಿ ನಾವಿಬ್ಬರೂ ಕೃಷಿಯ ಎಂದಿನ ಬದುಕಿನಲ್ಲೇ ಸಂತೋಷ ಕಾಣುತ್ತಿದ್ದೇವೆ ಎನ್ನುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.