HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ವೇಣೂರು ಕಲ್ಸಂಕ ಬಳಿ ರಿಕ್ಷಾ-ಬಸ್ ಡಿಕ್ಕಿ

ವೇಣೂರು: ಹೆದ್ದಾರಿಯಲ್ಲಿ ಯುಟರ್ನ್ ತೆಗೆಯುತ್ತಿದ್ದ ಬಸ್‌ಗೆ ಅಟೋ ರಿಕ್ಷಾ ಡಿಕ್ಕಿಯೊಡೆದ ಪರಿಣಾಮ ರಿಕ್ಷಾ ಚಾಲಕ ಸಹಿತ ಪ್ರಯಾಣಿಕರು ಗಾಯಗೊಂಡ ಘಟನೆ ವೇಣೂರು ಕಲ್ಸಂಕ ಬಳಿ ಮೇ.14ರಂದು ನಡೆದಿದೆ.
ರಿಕ್ಷಾ ಚಾಲಕ ತಮ್ಮಯ್ಯ ಮೂಲ್ಯ ನಡ್ಯಟ್ಟ, ಪ್ರಯಾಣಿಕರಾದ ವೇಣೂರು ಶಿವಾಜಿನಗರದ ಮಮತಾ, ಕಮಲ ಹಾಗೂ ಅಶೋಕ್ ಅವರಿಗೆ ಗಾಯಗಳಾಗಿವೆ. ಹೆದ್ದಾರಿಯಲ್ಲಿ ತೆರಳುತ್ತಿದ್ದ ಬಸ್ ಕಲ್ಸಂಕ ದಾಟಿ ಏಕಾಏಕಿ ಬಸ್ ಚಾಲಕ ಬಸ್ಸನ್ನು ತಿರುಗಿಸಿದ ವೇಳೆ ಹಿಂದಿನಿಂದ ಬರುತ್ತಿದ್ದ ರಿಕ್ಷಾ ಬಸ್‌ಗೆ ಡಿಕ್ಕಿಯೊಡೆದಿದೆ. ಪರಿಣಾಮ ರಿಕ್ಷಾ ಜಖಂಗೊಂಡಿದ್ದು, ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಸಿರೋಡ್ ಹಾಗೂ ಸಿದ್ದಕಟ್ಟೆಯಿಂದ ವೇಣೂರಿಗೆ ಬರುವ ಬಸ್‌ಗಳು ವೇಣೂರು ಮಹಾವೀರ ನಗರಕ್ಕೆ ತೆರಳಿ ವಾಪಸಾಗಬೇಕೆಂಬ ನಿಯಮ ಆರ್‌ಟಿಒದಿಂದ ಬಹಳ ಹಿಂದಿನಿಂದಲೇ ಜಾರಿಯಲ್ಲಿದೆ. ಕೆಲವು ಬಸ್ ಚಾಲಕರು ಈ ನಿಯಮವನ್ನು ಪಾಲಿಸುತ್ತಿದ್ದರೆ ಹೆಚ್ಚಿನ ಬಸ್ ಚಾಲಕರು ಮಹಾವೀರ ನಗರಕ್ಕೆ ಬರುವುದೇ ಇಲ್ಲ. ಅದರಲ್ಲೂ ಕೆಲವು ಬಸ್‌ಗಳು ಕಲ್ಸಂಕದವರೆಗೆ ಬಂದು ತಿರುಗಿಸಿ ವಾಪಸಾಗುತ್ತಿದ್ದು, ಇದು ಇಂತಹ ರಸ್ತೆ ಅಪಘಾತಗಳಿಗೆ ಕಾರಣ ವಾಗುತ್ತಿವೆ. ಪೊಲೀಸರು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಮಾತು ಸಾರ್ವಜನಿಕರಿಂದ ಕೇಳಿ ಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.