ನ್ಯಾಯತರ್ಪು: ರವಿ ಹಗ್ಡೆಯವರಿಗೆ ನುಡಿನಮನ

Advt_NewsUnder_1
Advt_NewsUnder_1
Advt_NewsUnder_1

ನ್ಯಾಯತರ್ಪು: ನ್ಯಾಯತರ್ಪು ಪ್ರಗತಿ ಬಂಧು ಒಕ್ಕೂಟದ ತ್ರೈಮಾಸಿಕ ಸಭೆಯು ನ್ಯಾಯತರ್ಪು ಒಕ್ಕೂಟದ ಅಧ್ಯಕ್ಷೆ ಸುಮಿತ್ರ ರವರ ಅಧ್ಯಕ್ಷತೆಯಲ್ಲಿ ಮೇ.12.ರಂದು ಜರುಗಿತು.
ಈ ಹಿಂದೆ ಸಂಘದ ಅಧ್ಯಕ್ಷರಾಗಿ, ಸದಸ್ಯರಾಗಿ ಸೇವೆ ಸಲ್ಲಿಸಿದ ಬಟ್ಟೆಮಾರು ರವಿ ಹೆಗ್ಡೆ ಯವರು ಮೇ.7 ರಂದು ನಿಧನರಾಗಿದ್ದು, ಈ ಸಂದರ್ಭದಲ್ಲಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಲಾಯಿತು.
ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದಂಜ ಮೃತರ ಬಗ್ಗೆ ನುಡಿನಮನ ಸಲ್ಲಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ವಲಯದ ಲೆಕ್ಕ ಪರಿಶೋಧಕಿ ಮಮತ, ಸತ್ಯನಾರಾಯಣ ಪೂಜಾ ಸಮಿತಿ ಮಾಜಿ ಅಧ್ಯಕ್ಷ ಜನಾರ್ದನ ಗೌಡ ಕುಳಾಯಿ, ಶಶಿಕಲಾ ನಾಳ, ಕುಶಾಲಪ್ಪ ಗೌಡ ಹಾಕೋಟೆ, ಶಿವರಾಮ ಮಡಿವಾಳ ಕರತ್ತೂರು, ಭವ್ಯ ಮತ್ತಿತರ ಗಣ್ಯರು, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.