ಶ್ರೀ ವನದುರ್ಗಾ ಪರಮೆಶ್ವರೀ ದೇವಸ್ಥಾನ ಮಿಯ್ಯಾರು: ವಾರ್ಷಿಕ ಪ್ರತಿಷ್ಠೆ

ರಂಗಪೂಜೆ-ಸತ್ಯನಾರಾಯಣ ಪೂಜೆ

ಪುದುವೆಟ್ಟು : ಶ್ರೀ ವನದುರ್ಗಾಪರಮೇಶ್ವರೀ ದೇವಸ್ಥಾನ ಮಿಯ್ಯಾರು, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಪುದುವೆಟ್ಟು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪುದುವೆಟ್ಟು ವಿಭಾಗ,ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ರಂಗಪೂಜೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣಪೂಜೆಯು ಮೇ 11 ಮತ್ತು 12 ರಂದು ನೀಲೇಶ್ವರ ಆಲಂಪಾಡಿ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಮುಖ್ಯ ಅತಿಥಿ ಬರೋಡ ತುಳು ಸಂಘದ ಅಧ್ಯಕ್ಷ ಬಿ.ಶಶಿಧರ್ ಶೆಟ್ಟಿ ಮಾತನಾಡಿ ತುಳು ಸಂಸ್ಕೃತಿಗಳು ಉಳಿದಿದ್ದರೆ ಅದು ತುಳು ನಾಡಿನಲ್ಲಿ ಮಾತ್ರ. ಪೇಟೆ, ಪಟ್ಟಣಗಳಲ್ಲಿ ಕಾಣಲು ಸಾಧ್ಯವಿಲ್ಲ. ಮಿಯ್ಯಾರಿಗೆ ಬಂದಾಗ ಅತಿಥಿ ಸತ್ಕಾರ ನೋಡಿ ಸಂತೋಷ ಪಟ್ಟು ನನ್ನಿಂದಾಗುವ ಸಹಕಾರ ನೀಡಲು ಸಿದ್ಧನಿದ್ಧೆನೆ ಎಂದರು. ಇನ್ನೋರ್ವ ಅತಿಥಿ ಮೂಲ್ಕಿಯ ಉದ್ಯಮಿ ಕಿಶೋರ್ ಶೆಟ್ಟಿ ಮಾತನಾಡಿ ಯಾವುದೇ ಊರು ಹಣದಿಂದ ಮಾತ್ರ ಅಭಿವೃದ್ದಿ ಆಗುವುದಿಲ್ಲ. ದೇವಸ್ಥಾನಗಳು ಜೀರ್ಣೋದ್ಧಾರ ಆದ ಮೇಲೆ ಮುಂದೆ ಕ್ಷೇತ್ರಕ್ಕೆ ಬರುವ ಪದ್ಧತಿ ಹಾಗೆಯೇ ದೇವಸ್ಥಾನಕ್ಕೆ ಭಕ್ತರು ಬರುವುದು ಕಡಿಮೆ ಆದರೆ ಕ್ಷೇತ್ರದ ಶಕ್ತಿ ಕಡಿಮೆ ಆಗುತ್ತದೆ. ಎಂದು ಹೇಳಿ ನಾವುಗಳು ದೇವಸ್ಥಾನಕ್ಕೆ ನಿತ್ಯ ಬರಬೇಕು ಎಂದರು.

ವೇದಿಕೆಯಲ್ಲಿ ಶ್ರೀ ವನದುರ್ಗಾ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಪತಿ ಹೆಬ್ಬಾರ್ ದೇವಸ್ಥಾನದ ಅಧ್ಯಕ್ಷ ಎಟ್ಯೋಡ್ ನಿತ್ಯಾನಂದ ಗೌಡ, ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ, ಪೆಲತ್ತೇರಿ ರಂಗನಾಥ ಎನ್.ಪಿ ಉಪಸ್ಥಿತರಿದ್ದರು. ವಾರಿಜ ಪ್ರಾರ್ಥನೆ ಹಾಡಿದರು ದಾಮೋದರ ಗೌಡ ಸ್ವಾಗತಿಸಿ,ಅಧ್ಯಾಪಕ ಸುರೇಶ್ ನಿರೂಪಿಸಿದರು. ಉಪನ್ಯಾಸಕ ನಂದಕುಮಾರ್ ಧನ್ಯವಾದವಿತ್ತರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಭಿವೃದ್ಧಿ ಸಮಿತಿ ಬೈಲುವಾರು ಅಧ್ಯಕ್ಷರು/ಕಾರ್ಯದರ್ಶಿಗಳು ಅಧ್ಯಕ್ಷರು ಪ್ರಗತಿಬಂಧು ಮತ್ತು ಸರ್ವಸದಸದಸ್ಯರು ಮಿಯ್ಯಾರು, ಕೆಮ್ಮಟೆ, ಬೊಳ್ಮನಾರು,ಗ್ರಾಮಾಭಿವೃದ್ದಿಯ ಆನಂದ ಗೌಡ ಸಮಿತಿಯ ಎಲ್ಲಾ ಸದಸ್ಯರು, ಊರ-ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ದೇವಸ್ಥಾನದ ಗೌರವಾಧ್ಯಕ್ಷ ಯು.ರಮೇಶ ಪ್ರಭು ವಹಿಸಿ, ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ವನದುರ್ಗಾ ಪರಮೆಶ್ವರೀ ದೇವಸ್ಥಾನದ ಎರಡನೇ ವರ್ಷದ ಪ್ರತಿಷ್ಠಾ ಕಾರ್ಯಕ್ರಮದಲ್ಲಿದ್ದೇವೆ. ದೇವಸ್ಥಾನದ ಜೀರ್ಣೋದ್ಧಾರ ಸಮಯದಲ್ಲಿ ಸುಂದರವಾದ ವಿನ್ಯಾಸವನ್ನು ಡಾ||ಡಿ.ವೀರೇಂದ್ರ ಹೆಗ್ಗಡೆಯವರು ಮಾಡಿಕೊಟ್ಟರು. ಎರಡು ವರ್ಷಗಳಲ್ಲಿ ಜೀರ್ಣೋದ್ಧಾರ ಮುಗಿಸುವ ಎಂದಾಗ ಮಾಂಜೀಲು ಶ್ರೀಪತಿ ಹೆಬ್ಬಾರ್ ಒಂದೇ ವರ್ಷದಲ್ಲಿ ಪೂರ್ಣಗೊಳಿಸಬೇಕು. ಎಂದು ಹೇಳಿ ಹೆಚ್ಚಿನ ಹಣವನ್ನು ನೀಡಿರುತ್ತಾರೆ. ಊರ-ಪರಊರ ದಾನಿಗಳನ್ನು ಜೀರ್ಣೋದ್ದಾರದಲ್ಲಿ ಸಹಕಾರ ನೀಡಿದ ಎಲ್ಲರನ್ನು ಸ್ಮರಿಸಿದರು. ಸಮಾಜ ಏನು ಮಾಡಿದೆ. ಎನ್ನುವುದಕ್ಕಿಂತ ಸಮಾಜಕ್ಕೆ ನಾನು ಏನು ಕೊಟ್ಟಿದ್ದೇನೆ ಎಂದು ತಿಳಿದುಕೊಂಡಾಗ ಎಲ್ಲವೂ ಸುಲಭದಲ್ಲಿ ಆಗುತ್ತದೆ. ಎಂದರು.

ಮೇ 11 ರಂದು ಕ್ಷೇತ್ರದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮೇ 12 ರಂದು ಪ್ರತಿಷ್ಠಾ ಕಾರ್ಯಕ್ರಮಗಳು, ರಂಗಪೂಜೆ ಕಲಾ ಸಾರಥಿ ಟೋನ್ಸ್ ಪುಸ್ಕಲ್ ಕುಮಾರ್ ಮತ್ತು ಬಳಗ,ಮಂಗಳೂರು ಇವರಿಂದ ಭಕ್ತಿ ರಸಮಂಜರಿ ಮತ್ತು ನಗೆಹಬ್ಬ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.

ದೇವಸ್ಥಾನಗಳು ಹಿಂದೂ ಸಮಾಜದ ಶಕ್ತಿ ಕೇಂದ್ರ : ಧರ್ಮೇಂದ್ರ ಕುಮಾರ್
ಮೇ 12 ರಂದು ರಾತ್ರಿ ಧಾರ್ಮಿಕ ಉಪನ್ಯಾಸ ಎಸ್.ಡಿ.ಎಂ.ಸಿ, ಎನ್, ವೈ, ಎಸ್ ಉಜಿರೆಯ ಪಿ.ಡಿ ಧರ್ಮೇಂದ್ರಕುಮಾರ್ ಅವರು ಭಾರತ ದೇಶವು ಋಷಿ ಮುನಿಗಳಿಂದ ಕೂಡಿದ ದೇಶ ಹಿಮಾಲಯದಲ್ಲಿ ತಪಸ್ಸು ಮಾಡಿ ಶಕ್ತಿ ಪಡೆದು ಅವರದ್ದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಇಂದು ದೇವಸ್ಥಾನಗಳಲ್ಲಿ ಶಕ್ತಿ ಕೇಂದ್ರದ ಮೂಲಕ ಕಾಣುತ್ತಿದ್ದೇವೆ. ಪವಿತ್ರ ಕ್ಷೇತ್ರಕ್ಕೆ ಬರುವಾಗ ಹಣ್ಣು ಕಾಯಿ ತಂದು ದೇವರಿಗೆ ಅರ್ಪಿಸಿ ನಂತರ ಪ್ರಸಾದ ಎಂಬ ರೀತಿಯಲ್ಲಿ ಪಡೆಯುತ್ತೇವೆ. ಸಾವಿರಾರು ವರ್ಷಗಳ ಇತಿಹಾಸವಿರುವ ದೇವರ ಮೂರ್ತಿಯನ್ನು ಬೆಳಕಿಗೆ ತಂದು ಪ್ರತಿಷ್ಠೆ ಮಾಡುತ್ತೇವೆ.
ನಂತರ ಕಾಲಕಾಲಕ್ಕೆ ದೇವರ ಆರಾಧನೆ ಮಾಡಿಕೊಂಡು ಬರುತ್ತೇವೆ. ಮಕ್ಕಳನ್ನು ಮೊಬೈಲ್.ಟಿ.ವಿ ಧಾರಾವಾಹಿಗಳಿಂದ ದೂರ ಇಡಬೇಕು. ಹಾಗೆ ದೇಶದ ಗಡಿ ಕಾಯುತ್ತಿರುವ ಸೈನಿಕರಿಗೆ ನಮಿಸಬೇಕು. ಎಂಬ ಭಾವನೆ ವ್ಯಕ್ತಪಡಿಸಬೇಕು. ಸೂರ್ಯ ಉದಯ,ಸೂರ್ಯ ಅಸ್ತಮದ ಸಮಯದಲ್ಲಿ ದೇವರ ಸ್ಮರಣೆ ಮಾಡಿದರೆ ಒಳ್ಳೆಯದು. ಹಾಗೆಯೇ ಆ ಹೊತ್ತುಗಳಲ್ಲಿ ಮನೆ ಬಾಗಿಲುಗಳನ್ನು ಮುಚ್ಚಬಾರದು ಎಂಬ ಸಲಹೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.