HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮರಕ್ಕೆ ಕಾರು ಡಿಕ್ಕಿ : ಚಾಲಕ ರಮೇಶ್ ಪೂಜಾರಿ ಕಾಲಿಗೆ ಗಂಭೀರ ಏಟು- ಮಗು ಸೇರಿ 6 ಮಂದಿಗೆ ಗಾಯ

* ಸೌತಡ್ಕಕ್ಕೆ ಹೋಗಿ ಬರುತ್ತಿರುವ ಕುಟುಂಬ
* ಪುದುವೆಟ್ಟು ಕ್ರಾಸ್ ಬಳಿ ನಡೆದ ಘಟನೆ
* ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ
* ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು

ಧರ್ಮಸ್ಥಳ: ಮಾರುತಿ-800 ಕಾರು ನಿಯಂತ್ರಣ ತಪ್ಪಿ ಧರ್ಮಸ್ಥಳ ಕೊಕ್ಕಡ ರಸ್ತೆ ಬದಿಯ ಪುದುವೆಟ್ಟು ಕ್ರಾಸ್ ಬಳಿ ಮರಕ್ಕೆ ಡಿಕ್ಕಿಹೊಡೆದ ಪರಿಣಾಮ ಮಗು ಸಹಿತ ಒಟ್ಟು 6  ಮಂದಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಶಿರ್ಲಾಲು ಗ್ರಾಮದ ಆಚಾರಿಬೆಟ್ಟು ಗುಡ್ಡೆಮನೆ ನಿವಾಸಿ, ಎಲ್‌ಐಸಿ ಪ್ರತಿನಿಧಿ ರಮೇಶ್ ಪೂಜಾರಿ (45ವ.), ಅವರ ಅಕ್ಕ ಶಾಲಿನಿ, ತಂಗಿ ವಿಶಾಲಾ, ತಂಗಿಯ ಗಂಡ ಮನೋಜ್, ವಿಶಾಲ್ ಅವರ ಸಣ್ಣ ಮಗು ವಿಯಾಶಿ, ಶಾಲಿನಿ ಅವರ ಪುತ್ರ ಮನನ್ ಈ ಅಪಘಾತದಲ್ಲಿ ಗಾಯಗೊಂಡವರಾಗಿದ್ದಾರೆ.
ಈ ಪೈಕಿ ರಮೇಶ್ ಪೂಜಾರಿ ಅವರ ಕಾಲಿನ ಮೂಳೆಮುರಿತಕ್ಕೊಳಗಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.

 

ಸೌತಡ್ಕ ದೇವಸ್ಥಾನಕ್ಕೆ ಹೋಗಿ ಮರಳುತ್ತಿದ್ದರು:
ಮೇ.15 ರಂದು ಬೆಳಿಗ್ಗೆ ಸೌತಡ್ಕ ದೇವಸ್ಥಾನಕ್ಕೆ ರಮೇಶ್ ಪೂಜಾರಿ ಹಾಗೂ ಅವರ ಮನೆಯವರು ಪೂಜೆಗೆಂದು ತೆರಳಿದ್ದರು. ಅಲ್ಲಿ ಪೂಜೆಯಾಗಿ ಸಂಜೆ ಮನೆಗೆ ಬರುತ್ತಿರುವ ಸಂದರ್ಭದಲ್ಲಿ ಪುದುವೆಟ್ಟು ಕ್ರಾಸ್ ಬಳಿ ಚಾಲಕ ರಮೇಶ್ ಅವರ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದ್ದು, ಕಾರಿನೊಳಗಿದ್ದ ಚಾಲಕ ರಮೇಶ್ ಅವರ ಬಲದ ಕಾಲಿಗೆ ಗಂಭೀರ ಏಟು ತಲಿದೆ. ಅಲ್ಲದೆ ತಲೆ ಹಾಗೂ ಇತರ ಕಡೆ ಗಾಯವಾಗಿದೆ. ಕಾರಿನಲ್ಲಿದ್ದ ಇತರ ಐದು ಮಂದಿಗೆ ಕೈ, ಕಾಲು ಹಾಗೂ ಇತರ ಕಡೆಗಳಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಸ್ಥಳೀಯರ ಸಹಕಾರದಲ್ಲಿ ಅಳದಂಗಡಿಯ ಉಮೇಶ್ ಸುವರ್ಣ, ಚಿದಾನಂದ ಬಂಗೇರ, ವಿಶ್ವನಾಥ ಬಂಗೇರ, ಸದಾಶಿವ, ಅರುಣಾ ಮೊದಲಾದವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಹಾಗೂ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಳ್ತಂಗಡಿ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.