ವಾರಣಾಸಿಯಲ್ಲಿ ನಾಮಪತ್ರ ತಿರಸ್ಕಾರ ಹಿನ್ನೆಲೆ: ಡಾ.ಯು.ಪಿ. ಶಿವಾನಂದರಿಂದ ಸುಪ್ರೀಂಕೋರ್ಟ್ ನ್ಯಾಯವಾದಿಗಳೊಂದಿಗೆ ಚರ್ಚೆ

Advt_NewsUnder_1
Advt_NewsUnder_1
Advt_NewsUnder_1

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕ ಡಾ| ಯು.ಪಿ. ಶಿವಾನಂದರವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ಪರ್ಧಿಸುತ್ತಿರುವ ವಾರಣಾಸಿ ಲೋಕ ಸಭಾ ಕ್ಷೇತ್ರದಲ್ಲಿ ತನ್ನ ನಾಮ ಪತ್ರವನ್ನು ತಿರಸ್ಕೃತಗೊಳಿಸಿರುವ ಚುನಾವಣಾಧಿಕಾರಿಯ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಕುರಿತಾಗಿ ದೆಹಲಿಯಲ್ಲಿ ಖ್ಯಾತ ನ್ಯಾಯವಾದಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಸುಪ್ರೀಂಕೋರ್ಟ್‌ನ ಖ್ಯಾತ ನ್ಯಾಯವಾದಿ ಪ್ರಶಾಂತ್ ಭೂಷಣ್, ಕರ್ನಾಟಕದ ಪ್ರಖ್ಯಾತ ನ್ಯಾಯವಾದಿಯಾಗಿರುವ ರವಿವರ್ಮ ಕುಮಾರ್‌ರವರ ಸಹೋದರ ಸುಪ್ರೀಂಕೋರ್ಟ್ ನ್ಯಾಯವಾದಿ ವಿದ್ಯಾಸಾಗರ್, ಸುಪ್ರೀಂಕೋರ್ಟಿನಲ್ಲಿ ನ್ಯಾಯವಾದಿಯಾಗಿರುವ ಬೆಳ್ತಂಗಡಿ ತಾಲೂಕಿನ ಅನಂತನಾರಾಯಣ ಭಟ್, ಯುವ ನ್ಯಾಯವಾದಿ ಅಭಿತ್ ಚಿಮ್ಣಿ ಮತ್ತಿತರರೊಂದಿಗೆ ಶಿವಾನಂದರವರು ಚರ್ಚಿಸಿದರು. ಡಾ. ಶಿವಾನಂದರವರ ಪುತ್ರಿ ಕು.ಸಿಂಚನಾ ಊರುಬೈಲು ಮತ್ತು ಸುಳ್ಯ ಸುದ್ದಿ ಬಿಡುಗಡೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ಜತೆಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.