ಮೇ 18: ಗರ್ಡಾಡಿ ಸೈಂಟ್ ಸೆಬೆಸ್ಟಿಯನ್ ಚರ್ಚ್ ಉದ್ಘಾಟನೆ

ವೇಣೂರು : ಬೆಳ್ತಂಗಡಿ ತಾಲೂಕಿನ ಗರ್ಡಾಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗರ್ಡಾಡಿ ಸೈಂಟ್ ಸೆಬೆಸ್ಟಿಯನ್ ಚರ್ಚ್, ಘಂಟಾ ಗೋಪುರ ಹಾಗೂ ಧರ್ಮಗುರುಗಳ ನಿವಾಸದ ಉದ್ಘಾಟನೆಯು ಮೇ 18 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹ ಅವರ ಉಪಸ್ಥಿತಿಯಲ್ಲಿ ಜರಗಲಿದೆ.
ಉದ್ಘಾಟನೆಯನ್ನು ಕರ್ನಾಟಕ ಪ್ರೊವಿನ್ಸಿಯಲ್ ಒಎಫ್‌ಎಂ ಕ್ಯಾಪ್ ಹೊಲಿಟ್ರಿನಿಟಿ ಪ್ರೊವಿನ್ಸ್ ವಂ| ರೆ| ಫಾ| ಆಲ್ವಿನ್ ಡಾಯಸ್ ನೆರವೇರಿಸಲಿದ್ದು, ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹ ಆಶೀರ್ವಚನ ಮತ್ತು ದಿವ್ಯಬಲಿ ಪೂಜೆ ನೆರವೇರಿಸಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಸಭಾ ಕಾರ್ಯಕ್ರಮ ಜರಗಲಿದ್ದು, ಅಧ್ಯಕ್ಷತೆಯನ್ನು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಕರ್ನಾಟಕ ಪ್ರೊವಿನ್ಸಿಯಲ್ ಒಎಫ್‌ಎಂ ಕ್ಯಾಪ್ ಹೊಲಿಟ್ರಿನಿಟಿ ಪ್ರೊವಿನ್ಸ್ ವಂ| ರೆ| ಫಾ| ಆಲ್ವಿನ್ ಡಾಯಸ್, ಬೆಳ್ತಂಗಡಿ ವಲಯ ವಿಕಾರ್‌ವಾರ್ ವಂ| ಫಾ| ಬೊನವೆಂಚರ್ ನಜ್ರೆತ್, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ, ಅಳದಂಗಡಿ ಜಿಲ್ಲಾ ಪಂ. ಸದಸ್ಯ ಶೇಖರ ಕುಕ್ಕೇಡಿ, ಪಡಂಗಡಿ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ, ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ಭಾಗವಹಿಸಲಿದ್ದಾರೆ ಎಂದು ಗರ್ಡಾಡಿ ಚರ್ಚ್‌ನ ಪಾಲನಾ ಮಂಡಳಿ ಉಪಾಧ್ಯಕ್ಷ ಪ್ರವೀಣ್ ಮೋನಿಸ್ ಹಾಗೂ ಕಾರ್ಯದರ್ಶಿ ಡೆನಿಸ್ ಅಮಾನ್ ಫೆರ್ನಾಂಡಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಮೇ. 16 ರಂದು  ಹೊರೆ ಕಾಣಿಕೆ
ವಿವಿಧ ಆಕರ್ಷಕ ವಾದಕಗಳೊಂದಿಗೆ ಗರ್ಡಾಡಿ ನಂದಿಬೆಟ್ಟದಿಂದ ಸೆಬೆಸ್ಟಿಯನ್ ಚರ್ಚ್‌ಗೆ ಹೊರೆಕಾಣಿಕೆ ಮೆರವಣಿಗೆಯು ಮೇ 16ರಂದು ಸಂಜೆ 4 ಗಂಟೆಗೆ ಜರಗಲಿದೆ.
ಈ ವೇಳೆ ಆಶೀರ್ವಚನವನ್ನು ಬೆಳ್ತಂಗಡಿ ವಲಯ ವಿಕಾರ್‌ವಾರ್ ವಂ| ಫಾ| ಬೊನವೆಂಚರ್ ನಜ್ರೆತ್ ನೀಡಲಿದ್ದು, ಗರ್ಡಾಡಿ ಚರ್ಚ್‌ನ ಧರ್ಮಗುರು ಒಎಫ್‌ಎಂ ಕ್ಯಾಪ್ ವಂ| ಫಾ| ಮಾರ್ಕ್ ಸಲ್ಡಾನ್ಹ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಮಡಂತ್ಯಾರು ಚರ್ಚ್‌ನ ಧರ್ಮಗುರು ವಂ| ಫಾ| ಬೆಸಿಲ್ ವಾಸ್, ಬದ್ಯಾರು ಚರ್ಚ್‌ನ ಧರ್ಮಗುರು ವಂ| ಫಾ| ಮೆಲ್ವಿನ್ ಡಿಸೋಜ ಹಾಗೂ ಒಎಫ್‌ಎಂ ಕ್ಯಾಪ್ ವಂ| ಫಾ| ಅನಿಲ್ ಸಿಲ್ವನೋ ಫೆರ್ನಾಂಡಿಸ್ ಭಾಗವಹಿಸಲಿದ್ದಾರೆ.

ಗರ್ಡಾಡಿ ಚರ್ಚ್, ಘಂಟಾ ಗೋಪುರ ಹಾಗೂ ಧರ್ಮಗುರುಗಳ ನಿವಾಸವನ್ನು ಸುಮಾರು ರೂ. 2.50 ಕೋಟಿ ವೆಚ್ಚದಲ್ಲಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ದೇವಾಲಯದ ಸುತ್ತ ಜನಪ್ರತಿನಿಧಿಗಳ ಸಹಕಾರದಲ್ಲಿ ಇಂಟರ್‌ಲಾಕ್, ಹೈಮಾಸ್ಟ್ ದೀಪ ಹಾಗೂ ದೇವಾಲಯದ ಸಂಪರ್ಕ ರಸ್ತೆಗೆ ಕಾಂಕ್ರಿಟೀಕರಣ ಮಾಡಲಾಗಿದೆ. ದೇವಾಲಯ ನಿರ್ಮಾಣಕ್ಕೆ ಚರ್ಚ್‌ನ ಧರ್ಮಗುರು ವಂ| ಫಾ| ಮಾರ್ಕ್ ಸಲ್ಡಾನ್ಹ, ಪಾಲನ ಮಂಡಳಿ ಉಪಾಧ್ಯಕ್ಷರು ಹಾಗೂ ಸದಸ್ಯರು ಅವಿರತ ಶ್ರಮ ಪಟ್ಟಿದ್ದು, ಧರ್ಮಪ್ರಜೆಗಳ ಶ್ರಮದಾನ ಹಾಗೂ ಆರ್ಥಿಕ ಧನ ಸಹಾಯದಿಂದ ವ್ಯವಸ್ಥಿತವಾಗಿ ನಿರ್ಮಾಣ ಮಾಡಲಾಗಿದ್ದು, ಉದ್ಘಾಟನೆಗೆ ಸಜ್ಜುಗೊಂಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.