HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮೂಡುಕೋಡಿ: ಕ್ಯಾನ್ಸರ್ ರೋಗಿಯನ್ನು ತನ್ನ ವಾಹನದಲ್ಲೇ ಆಸ್ಪತ್ರೆಗೆ ರವಾಣಿಸಿದ ಮಾಜಿ ಶಾಸಕ ಬಂಗೇರ

ವೇಣೂರು: ಮಾರಕ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಮೂಡುಕೋಡಿ ಗ್ರಾಮದ ಪರಾರಿ ದಿ| ಚಂದಪ್ಪ ಪೂಜಾರಿಯವರ ಪುತ್ರ ಪ್ರಮೋದ್ ಪೂಜಾರಿ (40.ವ ) ಅವರ ಮನೆಗೆ ಭೇಟಿ ನೀಡಿದ ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ರೋಗಿಯನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.
ಮಾಜಿ ಶಾಸಕ ವಸಂತ ಬಂಗೇರ ಅವರ ವಾಹನದಲ್ಲೇ ರೋಗಿಯನ್ನು ಮೇ 13ರಂದು ಬೆಳಿಗ್ಗೆಯೇ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಮೇ 12 ರಂದು ಪ್ರಮೋದ್ ಮನೆಗೆ ಭೇಟಿ ನೀಡಿದ್ದ ಬಂಗೇರರು ಸ್ಥಳದಿಂದಲೇ ಮಂಗಳೂರು ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ ಡಾ| ರಾಜೇಶ್ವರಿ ಜತೆ ಫೋನ್ ಮೂಲಕ ಮಾತನಾಡಿ, ಬಡ ಕುಟುಂಬದಲ್ಲಿರುವ ಪ್ರಮೋದ್ ಅವರಿಗೆ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಈ ವೇಳೆ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಹಾಗೂ ತನ್ನ ವೈಯುಕ್ತಿಕ ನೆರವು ರೂ.10 ಸಾವಿರ ಮೊತ್ತವನ್ನು ನೀಡಿ ಮನೆಯವರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಪ್ರ. ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷ ನವೀನ್ ಪೂಜಾರಿ ಪಚ್ಚೇರಿ, ಉಪಾಧ್ಯಕ್ಷ ಅರುಣ್ ಕೋಟ್ಯಾನ್, ನಿರ್ದೇಶಕರಾದ ಸತೀಶ್ ಪಿ.ಎನ್., ಸತೀಶ್ ಉಜಿರಡ್ದ, ವಿಶ್ವನಾಥ ದಡ್ಡಲ್‌ಪಲ್ಕೆ, ಕರಿಮಣೇಲು ಯುವವಾಹಿನಿ ಅಧ್ಯಕ್ಷ ಪ್ರಶಾಂತ್ ಪೂಜಾರಿ, ವೇಣೂರು ಶ್ರೀ ಗು.ನಾ.ಸ್ವಾ.ಸೇ. ಸಂಘದ ನಿರ್ದೇಶಕರುಗಳಾದ ರವೀಂದ್ರ ಪೂಜಾರಿ ಪಾಲ್ದಲ್ಕೆ, ಶೇಖರ ಪೂಜಾರಿ ಪರದ್ಯಾರು ಬಜಿರೆ, ಶ್ರೀಧರ ಪೂಜಾರಿ ಹುಲ್ಲೋಡಿ, ಚಿದಾನಂದ ಪೂಜಾರಿ ಹುಲ್ಲೋಡಿ, ಲಕ್ಷ್ಮಣ ಪೂಜಾರಿ ಹುಲ್ಲೋಡಿ, ಶ್ರೀಧರ ಆಚಾರ್ಯ ಕಡಂಬಿಲ, ಪ್ರಮುಖರಾದ ಅನೂಪ್ ಜೆ. ಪಾಯಸ್, ಹನೀಫ್ ಬೆದ್ರಡ್ಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.