HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಪೆರಿಂಜೆ: ಕರಿಂಜೆ ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಉದ್ಘಾಟನೆ

ಸಹಕಾರಿ ಸಂಸ್ಥೆಗಳಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ: ಮಾಣಿಲ ಶ್ರೀ

ವೇಣೂರು: ಸಮಾಜಕಟ್ಟುವ ಕಾಯಕದಲ್ಲಿ ಸಹಕಾರಿ ಸಂಸ್ಥೆಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಆರ್ಥಿಕತೆಯಲ್ಲಿ ಸ್ವಾಭಿಮಾನದ ಜೀವನಕ್ಕೆ ಸಹಕಾರಿ ಸಂಸ್ಥೆಗಳು ಸಹಕಾರಿಯಾಗಿದೆ. ಗ್ರಾಮೀಣ ಭಾಗದ ಜನತೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಸಹಕಾರಿ ಸಂಸ್ಥೆಗಳು ಮಹತ್ವರ ಪಾತ್ರ ವಹಿಸಿವೆ ಎಂದು ಬಂಟ್ವಾಳ ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಹೊಸಂಗಡಿ ಗ್ರಾಮದ ಪೆರಿಂಜೆ ಹರಿ ಓಂ ಕಾಂಪ್ಲೆಕ್ಸ್‌ನಲ್ಲಿ ಮೇ 12 ರಂದು ಜರಗಿದ ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಇದರ ಉದ್ಘಾಟನಾ ಸಮಾರಂಭದಲ್ಲಿ ದ್ವೀಪ ಪ್ರಜ್ವಲಿಸಿ ಆಶೀರ್ವಚನ ನೀಡಿ, ಮನುಷ್ಯನ ಬುದ್ದಿ, ಮನಸ್ಸು, ಯೋಚನಾ ಶಕ್ತಿ ಇಂದು ಬದಲಾಗಿದೆ. ಆಧ್ಯಾತ್ಮದ ಕಡೆಗೆ ಒಲವು ತೋರಿಸಬೇಕಿದೆ. ದ್ವೇಷ ಭಾವನೆ ಬಿಟ್ಟು ಎಲ್ಲರನ್ನು ಪ್ರೀತಿಯಿಂದ ಕಂಡಾಗ ಸಾಮಾರಸ್ಯ ನೆಲೆಯಾಗಲು ಸಾಧ್ಯ ಎಂದರು.
ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಶಿರ್ವ ನಡಿಬೆಟ್ಟುವಿನ ನಿತ್ಯಾನಂದ ಹೆಗ್ಡೆ ನೂತನ ಕಚೇರಿಯನ್ನು ಉದ್ಘಾಟಿಸಿದರು. ಶ್ರೀ ಕ್ಷೇತ್ರ ಕರಿಂಜೆಯ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜೆ. ಸುಧೀರ್ ಹೆಗ್ಡೆ ಬೈಲೂರು ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಹೊಸಂಗಡಿ ಅರಮನೆಯ ಸುಕುಮಾರ್ ಶೆಟ್ಟಿ, ಬರೋಡಾದ ಉದ್ಯಮಿ ಶಶಿಧರ ಶೆಟ್ಟಿ, ಪೆರಿಂಜೆ ಬಡಕೋಡಿಗುತ್ತುವಿನ ಡಾ| ಕೆ.ಆರ್. ಪ್ರಸಾದ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಇದರ ನಿರ್ದೇಶಕ ಮಂಜುನಾಥ್ ಎಸ್.ಕೆ., ಮಂಗಳೂರು ಶ್ರೀ ಮಾತೃಭೂಮಿ ಸೌಹಾರ್ದ ಸಹಕಾರಿ ಇದರ ಆಡಳಿತ ನಿರ್ದೇಶಕ ಕೃಷ್ಣ ಕೊಂಪದವು, ಕಾಪುವಿನ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ವೇಣೂರು ಸಿಎ ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ, ಹೊಸಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ಲಲಿತಾ ಟಿ. ಹೆಗ್ಡೆ, ಕರಿಂಜೆ ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಲಾ ಹಾಗೂ ನಿರ್ದೇಶಕರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಠೇವಣಿ ಪತ್ರ ಬಿಡುಗಡೆ ಹಾಗೂ ಷೇರುಪ್ರಮಾಣ ಪತ್ರವನ್ನು ನೀಡಲಾಯಿತು.
ಶ್ರೀ ಕ್ಷೇತ್ರ ಕರಿಂಜೆಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ, ಮೂಲ್ಕಿ-ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಆಗಮಿಸಿದ್ದರು.
ಕರಿಂಜೆ ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಇದರ ಉಪಾಧ್ಯಕ್ಷ ಸುಧಾಕರ ನೂಯಿ ಪ್ರಾಸ್ತಾವಿಸಿ, ಸ್ವಾಗತಿಸಿದರು. ಸಂತೋಷ್ ಕುಲಾಲ್ ಸಿದ್ದಕಟ್ಟೆ ನಿರೂಪಿಸಿ, ಸುಲೋಚನ ವಂದಿಸಿದರು. ನಿರ್ದೇಶಕರುಗಳಾದ ಪ್ರಕಾಶ್ ಬಿ.ಎನ್., ಪ್ರಮೋದರ, ರಕ್ಷಿತ್, ಕೆ.ಜಿ. ರವಿಶಂಕರ್, ವಿಶ್ವನಾಥ ಶೆಟ್ಟಿ, ಸೀತಾರಾಮ ಮಡಿವಾಳ, ಸುದರ್ಶನ ಸಾಲ್ಯಾನ್, ಮೋಹನ ಎ., ಶ್ಯಾಮ ಎಂ., ಶ್ರೀಮತಿ ಜಾನಕಿ, ಶ್ರೀಮತಿ ಸುಹಾಶಿನಿ, ಡೀಕಯ್ಯ, ಗಂಗಾಧರ ನಾಯ್ಕ ಸಹಕರಿಸಿದರು.

ಗ್ರಾಮೀಣ ಭಾಗದ ಬಡ ಜನತೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ದೃಷ್ಟಿಯಿಂದ ಸಹಕಾರಿ ಸಂಘವನ್ನು ನಿರ್ಮಿಸಲಾಗಿದೆ. ಅಲ್ಲಲ್ಲಿ ಸ್ವಸಹಾಯ ಸಂಘಗಳನ್ನು ಜಾರಿಗೆ ತರಲಾಗುತ್ತಿದ್ದು, ವಿಸ್ತರಿಸುವ ಯೋಜನೆ ಇದೆ.
– ಕರಿಂಜೆ ಶ್ರೀ

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.