ಮೂಡುಕೋಡಿ: 94ಸಿ ಸಂತ್ರಸ್ತರ ಸಮಸ್ಯೆಗೆ ತಕ್ಷಣ ಸ್ಪಂಧಿಸಿದ ಮಾಜಿ ಶಾಸಕ ಬಂಗೇರ

Advt_NewsUnder_1
Advt_NewsUnder_1
Advt_NewsUnder_1

ಫಲಾನುಭವಿ ಗ್ರಾಮಸ್ಥರೊಂದಿಗೆ ಕಾಲ್ನಡಿಗೆಯಲ್ಲೇ ತಾ| ಕಚೇರಿಗೆ ಭೇಟಿ

ವೇಣೂರು: ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ 94ಸಿ ಯೋಜನೆಯ ಹಕ್ಕುಪತ್ರದಲ್ಲಿ ಸರ್ವೇನಂಬರ್ ತಪ್ಪಾಗಿ ಮುದ್ರಿತವಾಗಿದ್ದ ಘಟನೆಗೆ ಸಂಬಂಧಿಸಿ ಮೇ.13 ರಂದು ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಫಲಾನುಭವಿ ಗ್ರಾಮಸ್ಥರ ನಿಯೋಗದೊಂದಿಗೆ ಬೆಳ್ತಂಗಡಿ ತಹಶೀಲ್ದಾರರನ್ನು ಭೇಟಿ ಮಾಡಿದರು.
ವೇಣೂರು ಹೋಬಳಿಯ ಮೂಡುಕೋಡಿ ಗ್ರಾಮದ ಸುಮಾರು 20 ಮಂದಿ 94ಸಿ ಫಲಾನುಭವಿ ಗ್ರಾಮಸ್ಥರಿಗೆ 2017 ರ ಅಕ್ಟೋಬರ್‌ನಲ್ಲಿ ನೀಡಿದ್ದ ಹಕ್ಕುಪತ್ರದಲ್ಲಿ 99/8ಎಪಿ8 ಎಂಬುವುದರ ಬದಲಾಗಿ 99/2ಪಿಎ1 ಎಂದು ನಮೂದಿಸಲಾಗಿದ್ದು, ಇದರಿಂದ ಆರ್‌ಟಿಸಿ ದೊರೆಯದೆ ಸರಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದರು.
ಮೇ 13 ರಂದು ಮೂಡುಕೋಡಿ ಗ್ರಾಮದ ಅನೂಪ್ ಜೆ. ಪಾಯಸ್ ಅವರ ನೇತೃತ್ವದಲ್ಲಿ ಫಲಾನುಭವಿ ಗ್ರಾಮಸ್ಥರ ನಿಯೋಗವು ಕೆ. ವಸಂತ ಬಂಗೇರ ಅವರನ್ನು ಭೇಟಿ ಮಾಡಿದರು. ಈ ಬಗ್ಗೆ ಫಲಾನುಭವಿಗಳಿಂದ ಮಾಹಿತಿ ಪಡೆದ ಮಾಜಿ ಶಾಸಕರು ತನ್ನ ಕಚೇರಿಯಿಂದ ಫಲಾನುಭವಿಗಳೊಂದಿಗೆ ತಾಲೂಕು ಕಚೇರಿಗೆ ಕಾಲ್ನಡಿಗೆಯಲ್ಲೇ ತೆರಳಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರನ್ನು ಭೇಟಿಯಾಗಿ ಸಮಸ್ಯೆಯನ್ನು ವಿವರಿಸಿದರು.
ಲಂಚದ ಬೇಡಿಕೆ: ಆರೋಪ
ಈ ವೇಳೆ ಫಲಾನುಭವಿ ಗ್ರಾಮಸ್ಥರು 94ಸಿ ಹಕ್ಕುಪತ್ರಕ್ಕಾಗಿ ಕೇಸ್‌ವರ್ಕರ್ ಹರೀಶ್ ಕೆ. ಅವರು ರೂ. 12 ಸಾವಿರ ಲಂಚದ ಬೇಡಿಕೆ ಇಟ್ಟಿರುವುದಾಗಿ ತಹಶೀಲ್ದಾರರಲ್ಲಿ ನೇರವಾಗಿ ಆರೋಪಿಸಿದರು. ತಕ್ಷಣ ಹರೀಶ್ ಕೆ. ಅವರನ್ನು ತನ್ನ ಕೊಠಡಿಗೆ ಕರೆಯಿಸಿಕೊಂಡು ಪ್ರಶ್ನಿಸಿದ್ದು, ಆದರೆ ಆರೋಪವನ್ನು ಹರೀಶ್ ನಿರಾಕರಿಸಿದರು. ತಾಲೂಕು ಕಚೇರಿಯ ಪ್ರತೀ ವಿಭಾಗದ ಕೊಠಡಿಗೆ ಸಿಸಿ ಕೆಮರಾ ಅವರನ್ನು ಅಳವಡಿಸಲಾಗಿದೆ. ಲಂಚದ ಬೇಡಿಕೆಯ ಕಾಲ್ ಅಥವಾ ವೀಡಿಯೋ ದಾಖಲೆಗಳನ್ನು ಸಂಗ್ರಹಿಸಿ ನೀಡಿದರೆ ಸಿಬ್ಬಂದಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆಂದರು. ಸಂತ್ರಸ್ತರಾದ ಬಶೀರ್ ಕೊಪ್ಪದಬಾಕಿಮಾರು, ಜಯಂತಿ ವಾಸು ಪೂಜಾರಿ, ವಿಮಲ, ಹನೀಫ್ ಬೆದ್ರಡ್ಡ, ಆಝ್ರಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಜೂ.13ರೊಳಗೆ ಆರ್‌ಟಿಸಿ
ಸರ್ವೇನಂಬರ್ ಬದಲಾಗಿ ಸರಕಾರಿ ಸೌಲಭ್ಯದಿಂದ ಸಂತ್ರಸ್ತರಾಗಿದ್ದ ಮೂಡುಕೋಡಿ ಗ್ರಾಮದ 27 ಮಂದಿ ಫಲಾನುಭವಿಗಳಿಗೆ ಜೂ. 13ರ ಒಳಗೆ ಸರ್ವೇ ನಂಬರ್ ಸರಿಪಡಿಸಿ ಆರ್‌ಟಿಸಿ ದೊರಕಿಸಿಕೊಡುವುದಾಗಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರು ಭರವಸೆ ನೀಡಿದರು.

ತಾ| ಕಚೇರಿಯಲ್ಲಿ ತಿಮಿಂಗಿಲಗಳು!
ಹಳೆಕಟ್ಟಡದಿಂದ ಮಿನಿವಿಧಾನ ಸೌಧಕ್ಕೆ ಕಚೇರಿ ಸ್ಥಳಾಂತರಗೊಂಡಾಗ ಸಾಮಾನ್ಯರಿಗೆ ಇಲಿ, ಹೆಗ್ಗಣಗಳಿಂದ (ಭ್ರಷ್ಟಾಚಾರ ಸಿಬ್ಬಂದಿ) ಮುಕ್ತಿ ದೊರೆಯುತ್ತದೆ ಎಂದು ಕೊಂಡಿದ್ದೆ. ಆದರೆ ಇದೀಗ ಹೊಸ ಕಟ್ಟಡದಲ್ಲೂ ದೊಡ್ಡ ದೊಡ್ಡ ತಿಮಿಂಗಿಲಗಳೇ ಇವೆ. ಅವುಗಳನ್ನು ಮಟ್ಟಹಾಕುಲು ಇದೇ ರೀತಿ ಆಗಾಗ್ಗೆ ತಾ. ಕಚೇರಿಗೆ ಭೇಟಿ ನೀಡಿ ಸಂತ್ರಸ್ತರಿಗೆ ನ್ಯಾಯ ಒದಗಿಸುತ್ತೇನೆ.
ಕೆ. ವಸಂತ ಬಂಗೇರ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.