ಯಂಗ್‌ಚಾಲೆಂಜರ್‍ಸ್‌ನಿಂದ ಪ್ರತಿಭಾ ಪುರಸ್ಕಾರ

ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನಿಧಿ ಹಸ್ತಾಂತರ

ಮುಂಡಾಜೆ: ಯಂಗ್‌ಚಾಲೆಂಜರ್‍ಸ್ ಕ್ರೀಡಾ ಸಂಘ ಮುಂಡಾಜೆ ಇದರ ವತಿಯಿಂದ 25 ನೇ ವರ್ಷದ ಪ್ರತಿಭಾ ಪುರಸ್ಕಾರ, ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನಿಧಿ ಹಸ್ತಾಂತರ ಕಾರ್ಯಕ್ರಮ ಮೇ. 12 ರಂದು ಸಂಘದ ಸಭಾಭವನದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ವಹಿಸಿದ್ದರು.
ಕಾರ್ಯಕ್ರಮದ ಪ್ರಾಯೋಜನಕತ್ವವನ್ನು ಸುಜಿತ್ ಭಿಡೆ ಭಿಡೆ ಮೆಡಿಕಲ್ಸ್ ಕಕ್ಕಿಂಜೆ ಮತ್ತು ಸೋಮಂತಡ್ಕ, ಅರೆಕ್ಕಲ್ ರಾಮಚಂದ್ರ ಭಟ್, ಶ್ರೀ ಅನಂತ ಫಡ್ಕೆ ಮೆಮೋರಿಯಲ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಮುಂಡಾಜೆ, ದಿ. ಎಂ ಶಂಕರನಾರಾಯಣ ಮಾಸ್ಟರ್ ಅವರ ಮಕ್ಕಳು ಮತ್ತು ಅಳಿಯ, ದಿ. ಬಿ ರಮಾನಾಥ ರಾವ್ ಮುಂಡಾಜೆ ಅವರ ಮಕ್ಕಳು ಇವರು ವಹಿಸಿದ್ದರು.
ಅನಂತ ಫಡ್ಕೆ ಟ್ರಸ್ಟ್ ಸಂಚಾಲಕ ಪ್ರಹ್ಲಾದ್ ಫಡಕೆ ಮುಂಡಾಜೆ, ಡಾ. ಶಿವಾನಂದ ಸ್ವಾಮಿ, ಯಂಗ್ ಚಾಲೆಂಜರ್‍ಸ್ ಸಲಹೆಗಾರ ಬಾಬು ಪೂಜಾರಿ ಕೂಳೂರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಯಂಗ್ ಚಾಲೆಂಜರ್‍ಸ್ ಸಂಚಾಲಕ ನಾಮದೇವ ರಾವ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಾಂತಪ್ಪ ವಂದಿಸಿದರು.

ಕಾರ್ಯಕ್ರಮದಲ್ಲಿ ಮುಂಡಾಜೆ ಸರಸ್ವತಿ ಆಂ. ಮಾಧ್ಯಮ ಶಾಲೆ ಮತ್ತು ಅನುದಾನಿಕ ಕನ್ನಡ ಮಾಧ್ಯಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ, ಪ. ಪೂ ಕಾಲೇಜು ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ, ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನಿಯಾಗಿರುವ ಮುಂಡಾಜೆ ಗ್ರಾಮದ ಜ್ಯೋತಿಕಾ ಎನ್ ಪೂಜಾರಿ ಅವರಿಗೆ ನಗದು ಸ್ಮರಣಿಕೆಯೊಂದಿಗೆ ಪುರಸ್ಕಾರ ನಡೆಯಿತು. ಹೈಸ್ಕೂಲ್ ಮತ್ತು ಕಾಲೇಜಿಗೆ ತೆರಳುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನಿಧಿ ಹಸ್ತಾಂತರಿಸಲಾಯಿತು.
ರಂಜಿನಿ ಪ್ರಾರ್ಥನೆ ಹಾಡಿದರು. ಪದಾಧಿಕಾರಿಗಳಾದ ವಿಜಯ ಕುಮಾರ್, ಶೀನಪ್ಪ ಗೌಡ, ಶಶಿಧರ ಠೋಸರ್, ಸುಶೀಲಾ ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.