HomePage_Banner_
HomePage_Banner_
HomePage_Banner_

ಸುಳ್ಯ ಎನ್.ಎಂ.ಸಿ ಗೌರವ ಸಂದರ್ಶಕ ಪ್ರಾಧ್ಯಾಪಕರಾಗಿ ಡಾ. ಪ್ರಭಾಕರ ಶಿಶಿಲ

ಬೆಳ್ತಂಗಡಿ: ಅಕಾಡಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ಪ್ರಥಮ ವಿದ್ಯಾ ಸಂಸ್ಥೆಯಾಗಿರುವ ಸುಳ್ಯ ನೆಹರು ಮೊಮೋರಿಯಲ್ ಕಾಲೇಜಿನಲ್ಲಿ ಗೌರವ ಸಂದರ್ಶಕ ಪ್ರಾಧ್ಯಾಪಕರಾಗಿ ಖ್ಯಾತ ಅರ್ಥಶಾಸ್ತ್ರಜ್ಞ, ನಿವೃತ ಪ್ರಾಚಾರ್ಯ, ಸಾಹಿತಿ, ವಾಗ್ಮಿ ಡಾ. ಪ್ರಭಾಕರ ಶಿಶಿಲ ಅವರನ್ನು ನೇಮಕವಾಗಿದೆ.
ಅರ್ಥಶಾಸ್ತ್ರದಲ್ಲಿ 100 ಕ್ಕೂ ಅಧಿಕ ಕನ್ನಡ ಮತ್ತು ಆಂಗ್ಲ ಭಾಷಾ ಕೃತಿಗಳು ಹಾಗೂ 40 ಕ್ಕೂ ಅಧಿಕ ಸಾಹಿತ್ಯ ಕೃತಿಗಳನ್ನು ರಚಿಸಿರುವ ಹೆಗ್ಗಳಿಕೆ ಇವರದು. ಅವರ ಕಾದಂಬರಿ ಪುಂಶ್ರೀ 13 ಭಾಷೆಗಳಿಗೆ ಭಾಷಾಂತರವಾಗಿ ಕನ್ನಡ ಸಾಹಿತ್ಯ ಲೋಕದಲ್ಲೇ ಅಪೂರ್ವ ದಾಖಲೆ ನಿರ್ಮಾಣಕ್ಕೂ ಕಾರಣವಾಗಿದೆ. ಬಹುಮುಖ ಪ್ರತಿಭಾಶಾಲಿಯಾದ ಇವರು ಸಾಹಿತಿ, ಯಕ್ಷಗಾನ ಕಲಾವಿದರಾಗಿಯೂ ಹೆಸರುವಾಸಿಯಾಗಿದ್ದಾರೆ. 2007 ರಲ್ಲಿ ಅವರಿಗೆ ಅತ್ಯುತ್ತಮ ಪ್ರಾಧ್ಯಾಪಕ ರಾಜ್ಯ ಪ್ರಶಸ್ತಿಯೂ ಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.