HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕರ್ನಾಟಕ ಪ್ರದೇಶ ಕಾರ್ಮಿಕ ಸಂಯೋಜಿತ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್‌ರಹಿಮಾನ್ ಪಡ್ಪು

ಬೆಳ್ತಂಗಡಿ: ಕರ್ನಾಟಕ ಪ್ರದೇಶ ಕಾರ್ಮಿಕ ಸಂಯೋಜಿತ ಸಮಿತಿ(ರಿ) ಕಾರ್ಮಿಕ ಶಾಖೆ ಬೆಂಗಳೂರು(ಕೆಪಿಎಲ್‌ಸಿಸಿ) ಇದರ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್‌ರಹಿಮಾನ್ ಪಡ್ಪು ಮಡಂತ್ಯಾರು ಅವರು ನೇಮಕಗೊಂಡಿದ್ದಾರೆ.
ಸಮಿತಿಯ ರಾಜ್ಯ ಅಧ್ಯಕ್ಷ ಡಾ| ವೈಯಪ್ಪನ ಹಳ್ಳಿ ರಮೇಶ್ ಅವರು ಈ ನೇಮಕವನ್ನು ಮಾಡಿ ಆದೇಶ ಹೊರಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರಾಗಿರುವ ಅಬ್ದುಲ್‌ರಹಿಮಾನ್ ಪಡ್ಪು ಅವರು ಮಡಂತ್ಯಾರು ಗ್ರಾ.ಪಂ ಮಾಜಿ ಅಧ್ಯಕ್ಷರಾಗಿ, ಹಾಲಿ ಸದಸ್ಯರಾಗಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ದ.ಕ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ, ರಾಜ್ಯ ಯುವ ಕಾಂಗ್ರೆಸ್‌ನ ಮಾಜಿ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ತಾಲೂಕು ಸಮಿತಿಯ ಉಪಾಧ್ಯಕ್ಷರಾಗಿ, ಮಡಂತ್ಯಾರು ವಲಯದ ಅಧ್ಯಕ್ಷರಾಗಿರುವ ಇವರು ಸೌಹಾರ್ದ ಫ್ರೆಂಡ್ಸ್ ಪಾರೆಂಕಿ ಮಡಂತ್ಯಾರು ಇದರ ಅಧ್ಯಕ್ಷರಾಗಿ, ಮಾಲಾಡಿ ಹಿ.ಪ್ರಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಕೊಲ್ಪೆದಬೈಲು ಮುಹೀದ್ದಿನ್ ಜುಮ್ಮಾ ಮಸೀದಿಯ ಉಪಾಧ್ಯಕ್ಷರಾಗಿ, ತಾಲೂಕು ಮುಸ್ಲಿಂ ಉರ್ದು ಡೆವೆಲಫ್‌ಮೆಂಟ್ ಕಮಿಟಿಯ ಅಧ್ಯಕ್ಷರಾಗಿ, ತಾಲೂಕು ಜಮ್ಯೀಯತುಲ್ ಫಲಾಹ್ ಕಮಿಟಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರೀಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.