HomePage_Banner_
HomePage_Banner_
HomePage_Banner_

ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶ  

ಲಾಯಿಲ  : ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿಮೇ .13 ರಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈದಿಕರಿಂದ ಬ್ರಹ್ಮಕಲಶ ಜರುಗಿತು.  ಮಖಾ ನಕ್ಷತ್ರದಲ್ಲಿ ಶ್ರೀ ದುರ್ಗಾ ಪರಮೇಶ್ವರಿಯ ಪುನರ್ ಪ್ರತಿಷ್ಠೆ, ವೀರಭದ್ರ ಸಾನ್ನಿಧ್ಯ ಪ್ರತಿಷ್ಠೆ, ಅಷ್ಟಬಂಧ ಲೇಪನ, ಕುಂಭೇಶ ಕಲಶಾಭಿಷೇಕ, ನಿದ್ರಾ ಕಲಶಾಭಿಷೇಕ, ಜೀವ ಕಲಶಾಭಿಷೇಕ, ಪ್ರಾಣ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಪರಿಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು.

ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ  ಗಣಪತಿ ಹೋಮ, ಅಧಿವಾಸ ಉದ್ಘಾಟನೆ, ಪ್ರಸಾದ ಪ್ರತಿಷ್ಠೆ, ನಪುಂಸಕ ಶಿಲೆಯಲ್ಲಿ ರತ್ನನ್ಯಾಸ, ಪೀಠ ಪ್ರತಿಷ್ಠೆ ನಡೆಯಿತು.  ರಾತ್ರಿ ನಿತ್ಯ ನೈಮಿತ್ಯಾದಿಗಳ ಹಾಗೂ ಪಂಚ ಪರ್ವಾದಿಗಳ ನಿರ್ಣಯ,  ಮಹಾಪೂಜೆ ಮತ್ತು ಶ್ರೀ ಭೂತ ಬಲಿ, ಶ್ರೀ ದೇವಿಯ ಉತ್ಸವ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ನಡೆಯಿತು. ಊರ ಪರವೂರ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.