HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಪೇರಿ ಅಂಗನವಾಡಿ ಶಿಕ್ಷಕಿ ಸುಕನ್ಯಾ ಎಸ್. ರಾವ್‌ಗೆ ಸನ್ಮಾನ

ವೇಣೂರು: ರಾಜ್ಯದ ಮಾದರಿ ಅಂಗನವಾಡಿಗಳಲ್ಲಿ ಒಂದಾಗಿರುವ ಹೊಸಂಗಡಿ ಪೇರಿ ಅಂಗನವಾಡಿಯ ಶಿಕ್ಷಕಿ ಸುಕನ್ಯಾ ಎಸ್. ರಾವ್ ಅವರನ್ನು ಅಜೆಕಾರಿನ ಶ್ರೀ ರಾಮಮಂದಿರದಲ್ಲಿ ನಡೆದ ಕುರ್ಸುಕಟ್ಟೆ ಅಂಗನವಾಡಿ ಉತ್ಸವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಚಟುವಟಿಕೆಗಳಿಗೆ ಪೂರಕ ವಾತಾವರಣ ಕಲ್ಪಿಸಿ, ಮಕ್ಕಳನ್ನು ವಿವಿಧ ಕಾರ್ಯಕ್ರಮಗಳಿಗೆ ತೊಡಗಿಸಿಕೊಂಡಿರುವ ಸಾಧನೆಯನ್ನು ಗುರುತಿಸಿ ಅವರನ್ನು ಗೌರವಿಸಲಾಯಿತು. ಉತ್ತಮ ಗಾಯಕಿಯೂ ಆಗಿರುವ ಇವರು ಮಕ್ಕಳಿಗೆ ಹಾಡು, ನೃತ್ಯವನ್ನು ಕಲಿಸುತ್ತಿದ್ದಾರೆ. ಎಂ. ಚಂದ್ರಹಾಸ ದೇವಾಡಿಗ, ಡಾ| ಸಂತೋಷ್ ಕುಮಾರ್, ಶ್ರೀನಿವಾಸ ನಾಯಕ್, ಥಾಮಸ್ ಲೂಕಸ್, ಸುನೀತಾ ಶೆಟ್ಟಿ, ಶಕುಂತಳ, ಥೆರಸಾ ತಾವ್ರೊ, ಕಾರ್ಯಕ್ರಮದ ಸಂಯೋಜಕ ಡಾ| ಶೇಖರ ಅಜೆಕಾರು ಮೊದಲಾದವರು ಉಪಸ್ಥಿತರಿದ್ದರು. ಈ ವೇಳೆ ಪೇರಿ ಅಂಗನವಾಡಿಯ ಪುಟಾಣಿಗಳು ನಡೆಸಿದ ನೃತ್ಯ ನೆರೆದಿದ್ದವರ ಗಮನ ಸೆಳೆಯಿತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.