ಉಜಿರೆ:135ನೇ ವಿಶೇಷ ಮದ್ಯವರ್ಜನ ಶಿಬಿರ

ಮದ್ಯವರ್ಜನೆಯೆಂಬ ಅದೃಷ್ಟ ಒಳ್ಳೆ ಗಳಿಗೆಯಲ್ಲಿ ಬಂದಿದೆ. – ಡಾ| ಡಿ. ವೀರೇಂದ್ರ ಹೆಗ್ಗಡೆ 

ಉಜಿರೆ : ಜೀವನದಲ್ಲಿ ಪ್ರತಿಯೊಬ್ಬನಿಗೂ ಒಳ್ಳೆಯ ಗಳಿಗೆ, ಕೆಟ್ಟ ಗಳಿಗೆಗಳು ಬರುತ್ತದೆ. ಈ ಗಳಿಗೆಗಳು ಬಹಳ ಕ್ಷಣಿಕವಾಗಿದ್ದು, ಇದು ವ್ಯಕ್ತಿ ಅಥವಾ ಕುಟುಂಬಕ್ಕೆ ಅದರ ಅರಿವಿಲ್ಲದಂತೆ ನಡೆದು ಹೋಗುತ್ತದೆ. ಮೃತ್ಯು, ಸಂಕಷ್ಟ, ಸೋಲು, ಕಷ್ಟ ನಷ್ಟಗಳು ಕೆಟ್ಟ ಗಳಿಗೆಯಲ್ಲಿ ಬಂದರೆ ಅವಕಾಶ, ಅದೃಷ್ಟ, ಶ್ರೀಮಂತಿಕೆ, ಪರಿವರ್ತನೆಗಳು ಒಳ್ಳೆಯ ಗಳಿಗೆಯಲ್ಲಿ ಬರುತ್ತದೆ. ಮದ್ಯವರ್ಜನ ಶಿಬಿರ ನಿಮ್ಮ ಬದುಕಿನಲ್ಲಿ ಒಳ್ಳೆಯ ಗಳಿಗೆಗೆ ಬಂದಿದೆ.  ಶಿಬಿರದಲ್ಲಿ ನಿಮ್ಮ ಒಳ್ಳೆಯ ಅದೃಷ್ಟದ ಜೀವನಕ್ಕೆ ನಾಂದಿ ಹಾಕುವುದೇ ಆಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ದುಶ್ಚಟದಿಂದ ಬಿಡುಗಡೆಯಾಗಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.

ಅವರು 135 ನೇ ವಿಶೇಷ ಮದ್ಯವರ್ಜನ ಶಿಬಿರದ 7ನೇ ದಿನದಂದು ಆಗಮಿಸಿ ರಾಜ್ಯದ 19 ಜಿಲ್ಲೆಗಳಿಂದ ಬಂದಿರುವ 81 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ  ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ  ಅಧ್ಯಕ್ಷೆ  ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಉಪಸ್ಥಿತರಿದ್ದರು.

ಈ ಶಿಬಿರದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಶಿಬಿರಾರ್ಥಿಗಳು ಪೂಜ್ಯ ಹೆಗ್ಗಡೆಯವರೊಂದಿಗೆ ಮುಕ್ತ ಸಮಾಲೋಚನೆ ನಡೆಸಿದರು. ಈ ಶಿಬಿರಕ್ಕೆ ಸ್ವಪ್ರೇರಣೆಯಿಂದ 75  ಮಂದಿ, ಮನೆಯವರ ಪ್ರೇರಣೆಯಿಂದ 6 ಮಂದಿ ಆಗಮಿಸಿದ್ದು, ಹೆಚ್ಚಿನ ಶಿಬಿರಾರ್ಥಿಗಳು ಯುವ ವಯಸ್ಸಿನವರಾಗಿದ್ದರು. 7 ಮಂದಿ ಶಿಬಿರಾರ್ಥಿಗಳು ಸರಕಾರಿ ಉದ್ಯೋಗದಲ್ಲಿಯೂ, 30 ಮಂದಿ ಸ್ವ ಉದ್ಯೋಗಿಗಳೂ, 35 ಮಂದಿ ಕೃಷಿಕರಾಗಿದ್ದು, 72 ಮಂದಿ ವಿವಾಹವಾದರು ಈ ಶಿಬಿರದಲ್ಲಿದ್ದರು. ಶಿಬಿರಕ್ಕೆ ಈ ಹಿಂದೆ ಪಾನಮುಕ್ತರ ಪ್ರೇರಣೆಯಿಂದ ಬಂದ 31 ಮಂದಿ ಆಗಮಿಸಿದ್ದು, ಈ 8 ದಿನದ ಕಾರ್ಯಕ್ರಮದಲ್ಲಿ ಉಪಯುಕ್ತ ಮಾಹಿತಿ, ಗುಂಪು ಸಲಹೆ, ವೈಯಕ್ತಿಕ ಸಲಹೆ, ಮನೋ ವೈದ್ಯಕೀಯ ಚಿಕಿತ್ಸೆ, ಆಧ್ಯಾತ್ಮಿಕ ಚಿಂತನೆ, ಯೋಗ, ಇನ್ನಿತರ ಚಟುವಟಿಕೆಗಳೊಂದಿಗೆ ಶಿಬಿರ ನಡೆಸಲಾಗಿದೆ. ವರದಿ ವರ್ಷದಲ್ಲಿ ರಾಜ್ಯಾದ್ಯಂತ 161 ಮದ್ಯವರ್ಜನ ಶಿಬಿರಗಳನ್ನು ನಡೆಸುವ ಗುರಿ ಇಡಲಾಗಿದ್ದು, 10 ಸಾವಿರಕ್ಕೂ ಮಿಕ್ಕಿದ ವ್ಯಸನಿಗಳನ್ನು ಶಿಬಿರಕ್ಕೆ ಒಳಪಡಿಸಿ ಪರಿವರ್ತನೆ ಮಾಡಲಾಗುವುದೆಂದು ಅಖಿಲ ಕರ್ನಾಟಕ ಜನಜಾಗೃತಿ ನಿರ್ದೇಶಕ  ವಿವೇಕ್ ವಿ. ಪಾಸ್ ರವರು ಪ್ರಾಸ್ತಾವಿಕವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಪಿ. ಚೆನ್ನಪ್ಪ ಗೌಡ, ಶಿಬಿರಾಧಿಕಾರಿಗಳಾದ ಶ್ರೀ ನಂದಕುಮಾರ್,   ನಾಗೇಶ್ ಎನ್.ಪಿ, ಆರೋಗ್ಯ ಸಹಾಯಕರಾದ ಶ್ರೀಮತಿ ಫಿಲೋಮಿನಾ,   ವೆಂಕಟೇಶ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.