ಅಪಘಾತ ಪೀಡಿತ ಶಿಕ್ಷಕಿ ಭಾರತಿಗೆ ಬಿರುವೆರ್ ಕುಡ್ಲದಿಂದ ಆರ್ಥಿಕ ನೆರವು

ಶಿಕ್ಷಕಿ ಕೈಯಿಂದಲೇ 32 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಗೇರುಕಟ್ಟೆ: ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ ಮತ್ತೊಂದು ವಿಶಿಷ್ಟ ರೀತಿಯ ಸೇವಾ ಕಾರ್ಯ ನಡೆಸುವ ಮೂಲಕ ಎಲ್ಲರ ಮನದಲ್ಲಿ ಸಮಾಜಿಕ ಕಳಕಳಿಯ ಹೊಸ ಭಾವನೆ ಮೂಡಿಸಿದೆ. ಈ ಬಾರಿ ಸಂಘಟನೆ ಆಯ್ದುಕೊಂಡಿರುವ ಸೇವಾ ಕಾರ್ಯವೆಂದರೆ, ಅಪಘಾತದಿಂದ ಸೊಂಟದ ಕೆಳಗೆ ಸ್ಪರ್ಷಜ್ಞಾನ ಕಳೆದುಕೊಂಡು ಕಳೆದ 10 ವರ್ಷದಿಂದ ಹಾಸಿಗೆ ಹಿಡಿದು ಮಲಗಿರುವ ಶಿಕ್ಷಕಿ, ಗೇರುಕಟ್ಟೆ ಸನಿಹದ ಕುಮಾರಿ ಭಾರತಿ ಅವರಿಗೆ ಅವರ ಮನೆಗೇ ತೆರಳಿ 15 ಸಾವಿರ ರೂ. ಆರ್ಥಿಕ ನೆರವು ಹಸ್ತಾಂತರಿಸಿರುವುದು.

ಅವರ ಕೈಯಿಂದಲೇ 32 ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ಹಸ್ತಾಂತರ:
ಜೊತೆಗೆ ಭಾರತಿಯವರು ಶಿಕ್ಷಕಿಯಾಗಿರುವ ಹಿನ್ನೆಲೆಯಲ್ಲಿ ಅವರ ಕೈಯಿಂದಲೇ ತಾಲೂಕಿನ ಆಯ್ದ 32  ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಶೈಕ್ಷಣಿಕ ಪುಸ್ತಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಕಾರ್ಯದರ್ಶಿ ಅರುಣ್ ಪೂಜಾರಿ, ಕೋಶಾಧಿಕಾರಿ ಹರ್ಷ ಕೋಟ್ಯಾನ್ ಮದ್ದಡ್ಕ, ಗೌರವ ಸಲಹೆಗಾರರಾದ ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂಪತ್ ಬಿ ಸುವರ್ಣ, ಸುರೇಂದ್ರ ಕೋಟ್ಯಾನ್, ವಿನಯ್ ಕುಮಾರ್, ವಿನೋದ್ ಚಾರ್ಮಾಡಿ, ಯೋಗೀಶ್ ಗೇರುಕಟ್ಟೆ, ಉದಯ್ ಬಂಗೇರ, ದೀಕ್ಷಿತ್ ಕೋಯ್ಯೂರು, ಮಧುಕರ್ ಪುರಿಯ, ಸುಧೀರ್ ಪೆರ್ಲ, ಸುನಿಲ್ ಅರಳಿ, ಪ್ರವೀಣ್, ಸಂತೋಷ್ ಪೂಜಾರಿ, ರಘುನಾಥ್ ಪೂಜಾರಿ, ಕೌಶಿಕ್, ಸುಕೇಶ್ ಓಡಿಲು, ಪ್ರಶಾಂತ್ ಕಿನ್ನಿಗೋಳಿ ಮೊದಲಾವರು ಉಪಸ್ಥಿತರಿದ್ದರು.

ನನ್ನಲ್ಲಿ ಇನ್ನಷ್ಟು ಆತ್ಮವಿಶ್ವಾಸ ಮೂಡಿಸಿದೆ:
ಬಿರುವೆರ್ ಕುಡ್ಲ ಸಂಘಟನೆಯವರು ನನ್ನ ಮನೆಗೇ ಬಂದು ನೆರವು ನೀಡಿರುವ ಈ ಕಾರ್ಯದಿಂದ ನನ್ನಲ್ಲಿ ಇನ್ನಷ್ಟು ಆತ್ಮವಿಶ್ವಾಸ ಮೂಡಿಸಿದೆ. ಇದಕ್ಕಾಗಿ ರೇಗೋ ಮೇಡಂ, ಆಶಾ ಭಾಸ್ಕರ್ ಮತ್ತು ನಾಗರಾಜ್ ಹಾಗೂ ಈ ಸಂಘಟನೆಯ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ.
ಶಿಕ್ಷಕಿ ಭಾರತಿ. ಗೇರುಕಟ್ಟೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.