HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಧರ್ಮಸ್ಥಳ: ನದಿ ನೀರಿನಲ್ಲಿ ಮುಳುಗಿ ಅರಸೀಕೆರೆ ಯುವಕ ಸಾವು

ಧರ್ಮಸ್ಥಳ: ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಬಾಳೆಹಳ್ಳಿಯ ಯುವಕ, ಕೂಲಿ ಕಾರ್ಮಿಕ ಸಂತೋಷ್ (27 ವ.) ಅವರು ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮೇ. 13 ರಂದು ಬೆಳಗ್ಗೆ ನಡೆದಿದೆ.
ನಾಲ್ವರ ಮಿತ್ರರೊಡಗೂಡಿ ಬೈಕಿನಲ್ಲಿ ತೀರ್ಥಕ್ಷೇತ್ರ ಸಂದರ್ಶನಕ್ಕಾಗಿ ಬಂದಿದ್ದ ಇವರು ನೇತ್ರಾವತಿ ಸೇತುವೆ ಕೆಳಗೆ ಹೊಳೆಯ ಗುಂಡಿಯಲ್ಲಿ ಸ್ನಾನಕ್ಕಾಗಿ ಇಳಿದಿದ್ದ ಸಂದರ್ಭ ಇವರು ಮುಳಗು ಮೃತಪಟ್ಟಿರುವುದಾಗಿ ಸಂಗಡಿಗಳು ಧರ್ಮಸ್ಥಳ ಠಾಣೆಯಲ್ಲಿ ಹೇಳಿಕೆ ನೀಡಿದ್ದಾರೆ.
ಸಂತೋಷ್ ಅವರು ಕೂಲಿ ಕೆಲಸದ ಜೊತೆಗೆ ತೆಂಗಿನ ಕಾಯಿ ಕೀಳುವ ಕಾಯಕದಲ್ಲಿ ಪರಿಣತಿಹೊಂದಿದ್ದವರಾಗಿದ್ದರು. ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಲಾಗಿದ್ದು ಎಸ್‌ಡಿಪಿಐ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಅವರ ಸಹಾಯದಿಂದ ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ತಂದಿರಿಸಲಾಗಿದೆ.

Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.