ಬೆಳಾಲು ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

ದೇವರ ಪ್ರೇರಣೆಯಿಂದ ಭಕ್ತರ ಸಹಕಾರದಿಂದ ದೇವಸ್ಥಾನ ನಿರ್ಮಾಣ: ಶ್ರೀಧರ ಗೋರೆ

ಬೆಳಾಲು : ದೇವರ ಪ್ರೇರಣೆಯಿಂದ ಊರ ಭಕ್ತರ ಇಚ್ಚಾ ಶಕ್ತಿ ಸಹಕಾರದಿಂದ ದೇವಸ್ಥಾನ ನೀರ್ಮಾಣವಾಗಲು ಸಾಧ್ಯ ಎಂದು ಖ್ಯಾತ ದೈವಜ್ಞರಾದ ನೆಲ್ಯಾಡಿ ಶ್ರೀಧರ್‌ಗೋರೆ  ಹೇಳಿದರು. ಅವರು ಮೇ 11 ರಂದು ಬೆಳಾಲು ಅನಂತ್ತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವಪ್ರಾರಂಭ ದಿನದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಕೃಷಿ ವಿಭಾಗದ ಮ್ಯಾನೇಜರ್ ಬಾಲಕೃಷ್ಣ ಪೂಜಾರಿ ಬಜೆ ಮಾತನಾಡುತ್ತಾ ಸುಂದರ ದೇವಾಲಯ ನೀರ್ಮಾಣ ಊರವರ ಸಹಕಾರದಿಂದ ಹಳೆಯ ದೇವಸ್ಥಾನ ಅಭಿವೃದ್ಧಿಯಾಗಿದೆ. ಮುಂದಕ್ಕೆ ಯಾವುದೇ ಗೊಂದಲವಿಲ್ಲದೆ ಒಂದೇ ಮನಸ್ಸಿನಿಂದ ನಡೆಸಲು ಊರವರು ಸಹಕಾರ ನೀಡಬೇಕು ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಧಾನ ಅರ್ಚಕ ರಾಮಕೃಷ್ಣ ಕಲ್ಲೂರಾಯ ಮಾತನಾಡುತ್ತಾ ಭಜನೆಯಿಂದಲೇ ಈ ದೇವರ ಕ್ಷೇತ್ರ ಸ್ಥಾಪನೆಯಾಗಿದೆ. ಇದರ ಪ್ರತಿಫಲ ಎಲ್ಲರಿಗೂ ಲಭಿಸಲಿ ಎಂದರು. ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮೋಕ್ತೇಸರ ರಾಜಾರಾಮ ಶರ್ಮ ಕೊಲ್ಪಾಡಿ ಮಾತನಾಡಿ ಈ ಪರಿಸರದ ಜನತೆಯ ಕನಸು ನನಸಾಗಿಸಿದ ಕಾರಣೀಕರ್ತರಿಗೆ ಕೃತಜ್ಞತೆ ಸಲ್ಲಿಸಿ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿ ವಿಧಾನದ ಬಗ್ಗೆ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ತಾ.ಪಂ ಮಾಜಿ ಅಧ್ಯಕ್ಷ ಎನ್.ಜತ್ತನ್ನಗೌಡ ಮಾತನಾಡುತ್ತಾ ಊರವರ ಶ್ರಮದಿಂದ ನೀರ್ಮಾಣ ಮಾಡಿದ ಈ ದೇವಸ್ಥಾನ ಮುಂದೆ ಯಶಸ್ವಿಯಾಗಿ ಮುನ್ನಡೆಸುವ ಭರವಸೆ ನೀಡಿದರು.

ತಾ.ಪಂ ಸದಸ್ಯ ಲಕ್ಷ್ಮೀ ನಾರಾಯಣ ಬೆಳಾಲು, ಗ್ರಾ.ಪಂ ಅಧ್ಯಕ್ಷ ದಿನೇಶ್ ಕೋಟ್ಯಾನ್, ಬೆಳ್ತಂಗಡಿ ಎ.ಪಿಎಂ.ಸಿ ಅಧ್ಯಕ್ಷ ಕೇಶವ.ಪಿ.ಬೆಳಾಲು ಮಾತನಾಡಿ ಶುಭ ಹಾರೈಸಿದರು. ಲಾಯಿಲ ಸುಹಾನ ಐಸ್‌ಕ್ರೀಮ್ ಮಾಲಕ ಸುರೇಶ್ ಗೌಡ, ಬೆಳಾಲು ಗ್ರಾ.ಪಂ ಉಪಾಧ್ಯಕ್ಷೆ ಜಯಲಕ್ಷ್ಮೀ ಸದಸ್ಯರುಗಳಾದ ಸುರೇಂದ್ರ ಗೌಡ ಸುರುಳಿ, ಕುಸುಮಾವತಿ, ವಿಮಲ ಅಶೋಕ, ದಯಾನಂದ.ಪಿ, ಪ್ರೇಮಾ ಗೌರವ ಉಪಸ್ಥಿತಿರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾಯೋಜಕರಾದ ಲಲಿತಾ ಕೆರ್ಮಣ್ಣಾಯ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಆನಂದ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಪಿ.ತಿಮ್ಮಪ್ಪಗೌಡ, ಪ್ರಮುಖರಾದ ದೇಜಪ್ಪ ಗೌಡ ಎಳ್ಳುಗದ್ದೆ, ಬಾಬು ಗೌಡ ಅಳಕೆದಡ್ಡ, ಲಿಂಗಪ್ಪ ಪೂಜಾರಿ ಬನಂದೂರು, ದಿನೇಶ್ ಪೂಜಾರಿ ಉಪ್ಪಾರು, ಶ್ರೀನಿವಾಸ ಗೌಡ ಗಣಪಣ ಗುತ್ತು, ನಾರಾಯಣ ಗೌಡ ಎಳ್ಳುಗದ್ದೆ, ಶಿವಪ್ರಸಾದ್.ಕೆ, ಹರೀಶ್ ಮುಂಡೆತ್ಯಾರಡ್ಡ, ಭಜನಾ ಮಂಡಳಿಯ ಅಧ್ಯಕ್ಷ ಯಶೋಧರ ಗೌಡ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸತೀಶ್ ಎಳ್ಳುಗದ್ದೆ, ಸ್ವಾಗತಿಸಿ ಇನ್ನೋರ್ವ ಕಾರ್ಯದರ್ಶಿ ಸದಾಶಿವ ಒಡಿಪ್ರೊಟ್ಟು ವಂದಿಸಿದರು. ಸೀತಾರಾಮ ಕಾವಟೆ ಮತ್ತು ಬೆಳ್ಳಿಯಪ್ಪ ಕೆರೆಕೋಡಿ ನಿರೂಪಿಸಿದರು. ವಿಮಲ ದುಗ್ಗಣ್ಣ ಎಂ.ಕೆ ಇವರ ಗೀತರಚನೆ ಇದೇ ಸಂದರ್ಭದಲ್ಲಿ ಕ್ಷೇತ್ರದ ದೇವರ ಹಾಡುಗಳ ಧ್ವನಿ ಸುರುಳಿ ಬಿಡುಗಡೆಗೊಳಿಸಲಾಯಿತು.

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.