ಬೆಳಾಲು: ಇಲ್ಲಿಯ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದ ಧಾರ್ಮಿಕ ಸಭೆಯಲ್ಲಿ ವಿಮಲ ದುಗ್ಗಣ್ಣ ಎಂ.ಕೆ ಇವರ ಸಾಹಿತ್ಯ ಕ್ಷೇತ್ರದ ದೇವರ ಹಾಡುಗಳ ಧ್ವನಿಸುರುಳಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಧಾನ ಅರ್ಚಕರಾದ ರಾಮಕೃಷ್ಣ ಕಲ್ಲೂರಾಯ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಬಾಲಕೃಷ್ಣ ಪೂಜಾರಿ ಬಜೆ, ರಾಜಾರಾಮ ಶರ್ಮ ಕೊಲ್ಪಾಡಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎನ್ ಜತ್ತನ್ನ ಗೌಡ, ಅಧ್ಯಕ್ಷ ಆನಂದ ಆಚಾರ್ಯ, ತಾ.ಪಂ ಸದಸ್ಯ ಲಕ್ಷ್ಮೀನಾರಾಯಣ, ಬೆಳಾಲು ಗ್ರಾ.ಪಂ ಅಧ್ಯಕ್ಷ ದಿನೇಶ ಕೋಟ್ಯಾನ್, ಎ.ಪಿ.ಎಂ.ಸಿ ಅಧ್ಯಕ್ಷ ಕೇಶವ ಗೌಡ ಪಿ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಲಲಿತಾ ಕೆರ್ಮುಣ್ಣಾಯ, ಸತೀಶ್ ಗೌಡ ಸುಹಾನ ಐಸ್ಕ್ರೀಂ, ಪಿ.ತಿಮ್ಮಪ್ಪಗೌಡ ಬನಂದೂರು, ದೇಜಪ್ಪ ಗೌಡ ಎಳ್ಳುಗದ್ದೆ, ಬಾಬು ಗೌಡ ಅಲಕೆದಡ್ಡ, ದಿನೇಶ್ ಪೂಜಾರಿ ಉಪ್ಪಾರು, ನೋಟರಿ ವಕೀಲ ಶ್ರೀನಿವಾಸ ಗೌಡ, ಶ್ರೀಮತಿ ವಿದ್ಯಾ ಶ್ರೀನಿವಾಸ, ಗ್ರಾ.ಪಂ ಸದಸ್ಯರುಗಳು, ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.