ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಬ್ರಹ್ಮಕಲಶೋತ್ಸವ: ಹಸಿರುವಾಣಿ ಹೊರೆಕಾಣಿಕೆ

ಬೆಳಾಲು: ಇಲ್ಲಿಯ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ದೇವರ ನೂತನ ಬಿಂಬ ಪ್ರತಿಷ್ಠಾಷ್ಟಬಂದ ಬ್ರಹ್ಮಕಲಶೋತ್ಸವ ಮೇ.11 ರಿಂದ ಮೇ. 20 ರವರೆಗೆ ನಡೆಯಲಿದ್ದು, ಮೇ.11ರಂದು ಭಕ್ತರಿಂದ ಭಾರೀ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಬೆಳಾಲು, ಮಾಯ, ಕೊಲ್ಪಾಡಿ, ಸುರುಳಿ ಪ್ರದೇಶದ ಸಮಸ್ತ ಭಕಾಧಿಗಳಿಂದ ಹಸಿರುವಾಣಿ ಹೊರೆಕಾಣಿಕೆ ಭವ್ಯ ಮೆರವಣಿಗೆ ಸಾಗಿತು.
ಈ ಸಂದರ್ಭದಲ್ಲಿ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಆಡಳಿತ ಮೊಕ್ತೇಸರ ಜೀವಂಧರ ಕುಮಾರ್ ಜೈನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ, ಕಾರ್ಯದರ್ಶಿ ಸತೀಶ್ ಗೌಡ ಎಳ್ಳುಗದ್ದೆ, ಪ್ರಧಾನ ಕಾರ್ಯದಶಿ ದುರ್ಗಾಪ್ರಸಾದ ಕೆರ್ಮುಣ್ಣಾಯ, ಕೋಶಾಧಿಕಾರಿ ಕೆ.ಶಿವಪ್ರಸಾದ್, ಬ್ರಹ್ಮಕಲಶೊತ್ಸವ ಸಮಿತಿ ಕಾರ್ಯದರ್ಶಿ ಜತ್ತಣ್ಣ ಗೌಡ ಯನ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪಿ.ತಿಮ್ಮಪ್ಪ ಗೌಡ, ಲೆಕ್ಕ ಪರಿಶೋಧಕ ನಾರಾಯಣ ಗೌಡ ಎ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಆನಂದ ಆಚಾರ್ಯ, ಬ್ರಹ್ಮಕಲಶೊತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಅಸ್ರಣ್ಣ ಗಿರೀಶ್ ಬಾರಿತ್ತಾಯ, ಉದಿತ್ ಕುಮಾರ್ ಜೈನ್, ಶ್ರೀನಿವಾಸ ಗೌಡ ಗಣಪನ ಗುತ್ತು, ಸದಾಶಿವ ಒಡಿಪ್ರೊಟ್ಟು, ಯಶೋಧರ ಗೌಡ ಅನಂತೊಡಿ, ಹರೀಶ್ ಗೌಡ ಮುಂಡೆತ್ಯಾರ್, ಜೀರ್ಣೊಧ್ಧಾರ ಸಮಿತಿ, ಬ್ರಹ್ಮಕಲಶೊತ್ಸವ ಸಮಿತಿ, ಆಡಳಿತ ಮಂಡಳಿ, ಭಜನಾ ಮಂಡಳಿಯ ಪದಾಧಿಕಾರಿಗಳು, ಊರ ಪರವೂರ ಭಕ್ತಾಧಿಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.