ಕೊಕ್ಕಡ ಪಂಚಾಯತ್ ಲಂಚ ಪ್ರಕರಣ: ವಿ.ಜೆ ಸೆಬಾಸ್ಟಿನ್ ಅಧ್ಯಕ್ಷತೆ ರದ್ದು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ: ಲಂಚ ಪ್ರಕರಣದ ಹಿನ್ನಲೆಯಲ್ಲಿ ಕೊಕ್ಕಡ ಗ್ರಾ.ಪಂ ಅಧ್ಯಕ್ಷ ವಿ.ಜೆ ಸೆಬಾಸ್ಟಿಯನ್ ರವರ ಅಧ್ಯಕ್ಷ ಸ್ಥಾನ ಮತ್ತು ಸದಸ್ಯತ್ವವನ್ನು ರದ್ದುಗೊಳಿಸಿ ಸರಕಾರ ಮಹತ್ವದ ಆದೇಶ ಹೊರಡಿಸಿದೆ.
2017-18 ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ನಡೆಸಿರುವ ವಿವಿಧ ಕಾಮಗಾರಿಗಳಲ್ಲಿ, ಕೆಲಸ ಮುಗಿದ ಕಾಮಗಾರಿಗಳ ಹಣ ಮಂಜೂರು ಮಾಡಲು ರೂ.50 ಸಾವಿರ ಹಣ ನೀಡುವಂತೆ ಬೇಡಿಕೆ ಇಟ್ಟಿರುವುದಾಗಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ಉಮ್ಮರ್  ಅವರು ನ್ಯಾಯಾಲಯಕ್ಕೆ ದೂರು ನೀಡಿದ್ದರು.
ಬೇಡಿಕೆಯಂತೆ ರೂ.20 ಸಾವಿರ ಹಣವನ್ನು ಅಧ್ಯಕ್ಷರಿಗೆ ನೀಡಿದ್ದು, ಉಳಿದ 35 ಸಾವಿರ ಲಂಚದ ಹಣವನ್ನು ಅಧ್ಯಕ್ಷರ ಸೂಚನೆಯಂತೆ ಗುತ್ತಿಗೆದಾರ ಉಮ್ಮರ್ ರವರು ಗ್ರಾ.ಪಂ ಪಿಡಿಒ ಪುರುಷೋತ್ತಮ ಅವರಿಗೆ ನೀಡಿದ್ದು, ಈ ಹಣವನ್ನು ಸ್ವೀಕರಿಸುವ ವೇಳೆ ಲಂಚದ ಹಣದೊಂದಿಗೆ ಎಸಿಬಿ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದರು. ಈ ಸಂಬಂಧ ಅಧ್ಯಕ್ಷರು ಹಾಗೂ ಪಿಡಿಒ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಳಿಕ ಅವರಿಬ್ಬರೂ ಜಾಮೀನಿನ ಮೇಲೆ  ಬಿಡುಗಡೆ ಹೊಂದಿದ್ದರು.

ಆಪಾದಿತ ಚುನಾಯಿತ ಪ್ರತಿನಿಧಿ ವಿ.ಜೆ ಸೆಬಾಸ್ಟಿಯನ್ ಅವರನ್ನು ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಸಿದಲ್ಲಿ ದಾಖಲಾತಿಗಳನ್ನು ನಾಶಪಡಿಸುವ ಹಾಗೂ ತನಿಖೆಯ ದಿಕ್ಕನ್ನು ತಪ್ಪಿಸುವ ಸಾಧ್ಯತೆಗಳಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಭೃಷ್ಟಾಚಾರ ನಿಗ್ರಹದಳ ಪ್ರಸ್ತಾವಣೆ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಸದ್ರಿ ವರದಿಯನ್ನು ಸರ್ಕಾರವು ಪರಿಶೀಲಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಚುನಾಯಿತ ಪ್ರತಿನಿಧಿ ವಿ.ಜೆ ಸೆಬಾಸ್ಟಿಯನ್ ರವರಿಗೆ 25/04/2018 ರಂದು ತಮ್ಮ ಅಹವಾಲನ್ನು ಸಲ್ಲಿಸಲು ಸರಕಾರದಿಂದ ಶೋಕಾಸು ನೋಟೀಸು ಜಾರಿ ಮಾಡಲಾಗಿತ್ತು. ಅಂತೆಯೇ ಅವರು ತಮ್ಮ ವಕೀಲರ ಮೂಲಕ, ಸದ್ರಿ ಪ್ರಕರಣದಲ್ಲಿ ತಾನು ನಿರಪರಾಧಿ. ತನ್ನ ಮೇಲೆ ನನಗೆ ಆಗದ ಕೆಲವು ವೈರಿಗಳು ಈ ಷಡ್ಯಂತ್ರವನ್ನು ಮಾಡಿರುತ್ತಾರೆ. ನಾನು ಕಾನೂನು ಮೀರಿ ಯಾವುದೇ ಕೆಲಸಗಳನ್ನು ಮಾಡಿರುವುದಿಲ್ಲ. ಇದು ರಾಜಕೀಯ ವ್ಯಕ್ತಿಗಳನ್ನು ಬಳಸಿಕೊಂಡು ನನ್ನ ಮೇಲೆ ಮಾಡಿದ ಸುಳ್ಳು ಪ್ರಕರಣ ಎಂದು ವಾದಿಸಿದ್ದರು. ಆದಾಗ್ಯೂ 2019ರ ಜನವರಿ 16 ಮತ್ತು 29 ರಂದು ಸೆಬಾಸ್ಟಿಯನ್ ರವರ ಮೌಖಿಕ ವಿಚಾರಣೆ ನಡೆದು ಅದರಲ್ಲೂ ಅವರು ಈ ಹೇಳಿಕೆ ನೀಡಿದ್ದರು. ಈ ಸಂದರ್ಭ ಸೆಬಾಸ್ಟಿಯನ್ ಪರವಾಗಿ ಸುಜಿತ್ ಜೋಸ್, ಜಿ.ಪಂ ಸಹಾಯಕ ಯೋಜನಾಧಿಕಾರಿ, ಸಚಿನ್ ಕುಮಾರ್, ತಾ.ಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಮತ್ತು ತಾ.ಪಂ ಅಧಿಕಾರಿ ಗಣೇಶ್ ಪೂಜಾರಿ ಹಾಜರಿದ್ದರು.

ಸದ್ರಿ ಪ್ರಕರಣದಲ್ಲಿ ವಾದ ವಿವಾದ ಆಲಿಸಿದ ಪ್ರಾಧಿಕಾರ ಕೊನೆಗೆ ಒಂದು ನಿರ್ಧಾರಕ್ಕೆ ಬಂದು,  ಆಪಾದಿತ ಅಧ್ಯಕ್ಷರು ಲಂಚದ ಹಣ ಸ್ವೀಕರಿಸಿರುವ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಖಚಿತಪಡಿಸಿಕೊಂಡು ಇದನ್ನು ದುರ್ನಡತೆ ಎಂದು ಪರಿಗಣಿಸಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43 ಎ1(i))ಮತ್ತು 48(4)ರಂತೆ ಇದೀಗ ಅವರ ಅಧ್ಯಕ್ಷ ಸ್ಥಾನ ಮತ್ತು ಗ್ರಾ.ಪಂ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಪಾಲರ ಆದೇಶಾನುಸಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪದನಿಮಿತ್ತ ಸರಕಾರದ ಅಧೀನ ಕಾರ್ಯದರ್ಶಿ ಹಾಗೂ ಉಪನಿರ್ದೇಶಕ ಮುಬಾರಕ್ ಅಹ್ಮದ್ ರವರು ಎ.12 ರಂದು ಈ ಆದೇಶ ಜಾರಿಗೊಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.