ಮೊಬೈಲ್ ಆಪ್ ಮೂಲಕ ಮರಳು ಖರೀದಿಸಿ…

ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೊಸ ಪ್ರಯೋಗ

ಜಿಲ್ಲೆಯಲ್ಲಿ ಇನ್ನು ಮುಂದೆ ಮರಳು ಬೇಕಾದಲ್ಲಿ ಸ್ಯಾಂಡ್ ಬಜಾರ್ ಆಪ್ ಡೌನ್‌ಲೋಡ್ ಮಾಡಿ ಅದರಲ್ಲೇ ಬುಕ್ಕಿಂಗ್ ಮಾಡಬಹುದು. ಆಪ್ ತೆರೆದು ಬುಕ್ಕಿಂಗ್ ಆಪ್ಶನ್‌ಗೆ ಹೋಗಿ ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ನೀಡಿದರೆ ನಿಮ್ಮ ಮೊಬೈಲ್‌ಗೆ ಒಟಿಪಿ ಸಂಖ್ಯೆ ಬರಲಿದೆ. ಅದನ್ನು ಎಂಟರ್ ಮಾಡಿ. ಹಣ ಆಲ್‌ಲೈನ್‌ನಲ್ಲೇ ಪಾವತಿಸಿ. ನಿಮ್ಮ ಮನೆ ಬಾಗಿಲಿಗೆ ನೇರವಾಗಿ ಮರಳು ತುಂಬಿದ ಲಾರಿ ಬಂದು ನಿಲ್ಲಲಿದೆ.

ಜಿಲ್ಲೆಯಲ್ಲೇ ಮೊದಲ ಬಾರಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಮಾರ್ಗದರ್ಶನದಲ್ಲಿ ಈ ಆಪ್ ಅಭಿವೃದ್ಧಿಪಡಿಸಲಾಗಿದೆ. ಮರಳು ಸಾಗಾಟದಲ್ಲಿ ನಡೆಯುವ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು, ದರಗಳ ಏರಿಳಿತ ತಡೆಗಟ್ಟಿ ಮರಳು ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ಧೇಶದಿಂದ ಈ ಆಪ್ ಮಾದರಿ ತಯಾರಿಸಲಾಗಿದೆ.
ಫ್ರಮ್ ಶೋರ್ ಟು ಎವ್ರಿ ಡೋರ್ (ನದಿ ದಡದಿಂದ ಮನೆಬಾಗಿಲಿಗೆ) ಎನ್ನುವ ಘೋಷವಾಕ್ಯದೊಂದಿಗೆ ಸ್ಯಾಂಡ್ ಬಝಾರ್ ಏಪ್ ರೂಪಿತವಾಗಿದೆ. ಮರಳು ಬೇಕಾದರೆ ಹಣ ಪಾವತಿ ಇತ್ಯಾಧಿ ವ್ಯವಸ್ಥೆಗೆ ನಿಮ್ಮಗೆ ಅದೇ ಆಪ್ ಮಾರ್ಗದರ್ಶನ ನೀಡುತ್ತದೆ. ಮಾಹಿತಿ ಪಡೆಯಲೂ ಕೂಡ ಆಪ್ ಸಹಕಾರಿಯಾಗಲಿದೆ. ಮರಳು ಬೇಕಾದಲ್ಲಿ ಮಾತ್ರ ಬುಕ್ಕಿಂಗ್ ಮಾಡಿ ಹಣ ಪಾವತಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.