ಮೇ 18: ಗರ್ಡಾಡಿ ಸಂತ ಸೆಬಾಸ್ಟಿಯಾನ್ ಚರ್ಚ್ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

ಗರ್ಡಾಡಿ: ಗರ್ಡಾಡಿ ಚರ್ಚ್ ಬೆಳ್ತಂಗಡಿ-ಮೂಡುಬಿದ್ರೆ ರಸ್ತೆಯ ಬೆಳ್ತಂಗಡಿಯಿಂದ 12 ಕಿ.ಮೀ ದೂರದಲ್ಲಿದೆ. 2013 ರಲ್ಲಿ ಈ ಚರ್ಚ್ ಅಸ್ತಿತ್ವಕ್ಕೆ ಬಂದಿದ್ದು. ಮೊದಲು ಮಡಂತ್ಯಾರು ಚರ್ಚ್‌ನ ಅಧಿನದಲ್ಲಿ ಇಲ್ಲಿ (ಕೊಪೆಲ್) ಸಣ್ಣ ಚರ್ಚ್ ಇತ್ತು. ಆಗಿನ ಮಂಗಳೂರಿನ ಧರ್ಮಾಧ್ಯಕ್ಷರು ರೆ.ಡಾ| ಎಲೋಶಿಯಸ್ ಪಾವ್ಲ್ ಡಿಸೋಜ ಇವರು ಮಡಂತ್ಯಾರು, ಬದ್ಯಾರ್ ಚರ್ಚ್‌ನಿಂದ ವಿಂಗಡಿಸಿ 80  ಕುಟುಂಬಗಳನ್ನು ಹೊಂದಿರುವ ಚರ್ಚ್ ಅಸ್ತಿತ್ವಕ್ಕೆ ತಂದು ಈ ಚರ್ಚ್‌ನ ಆಡಳಿತವನ್ನು ಪವಿತ್ರತ್ರಿತ್ವಕ್ಕೆ ಸಮರ್ಪಿಸಿದ ಕರ್ನಾಟಕ ಕಪುಚಿನ್ ಧರ್ಮಗುರುಗಳ ಮೇಳಕ್ಕೆ ಅರ್ಪಿಸಿದರು. ಇಲ್ಲಿ ಪ್ರಥಮ ಧರ್ಮಗುರುಗಳಾಗಿ ವಂ.ಫಾ| ಮಾರ್ಕ್ ಸಲ್ಡಾನ್ಹ ಇವರು ಆಗಮಿಸಿದರು.
ಚರ್ಚ್ ಬೆಳೆಯುತ್ತಾ ಬಂದಿದ್ದು ಭಕ್ತರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸೇವೆ ಇಲ್ಲಿಯ ಸಂತ ಅಂತೋನಿ ಅನುದಾನಿತ ಶಾಲೆಯಲ್ಲಿಯೇ ನಡೆಯುತ್ತಿತ್ತು. ಇಲ್ಲಿನ ಭಕ್ತರಿಗೆ ಮತ್ತು ಧರ್ಮಗುರುಗಳಿಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸೇವೆಗೆ ಅನಾನುಕೂಲವನ್ನು ಮನಗಂಡು ಇಲ್ಲಿನ ಪಾಲನಾ ಸಮಿತಿ ಮತ್ತು ಸಮಸ್ತ ಕ್ರೈಸ್ತ ಭಕ್ತಾದಿಗಳು ಒಟ್ಟು ಸೇರಿ ನೂತನ ಚರ್ಚ್ ನಿರ್ಮಾಣ ಮಾಡುವ ಬಗ್ಗೆ ಸಮಾಲೋಚಿಸಿ ಸುಮಾರು ರೂ.2 ಕೋಟಿ ವೆಚ್ಚಗಳ ನೂತನ ಚರ್ಚ್, ಘಂಟಾ ಗೋಪುರ ಮತ್ತು ಧರ್ಮಗುರುಗಳ ನಿವಾಸದ ಕೆಲಸಕ್ಕೆ 2016 ರಲ್ಲಿ ಮಂಗಳೂರು ಧರ್ಮಾಪ್ರಾಂತ್ಯದ ಧರ್ಮಾಧ್ಯಕ್ಷರು ರೆ| ಡಾ| ಎಲೋಶಿಯಸ್ ಪಾವ್ಲ್ ಡಿಸೋಜ ಶಿಲಾನ್ಯಾಸ ನೆರವೇರಿಸಿದರು. ಚರ್ಚ್‌ನ ಕುಟುಂಬಗಳು ಕಡು ಬಡವರು ಹಾಗೂ ಕೃಷಿಕರಾಗಿದ್ದು. ಶ್ರಮದಾನ, ನಾಟಕ, ವಿವಿಧ ಚರ್ಚ್‌ಗಳಲ್ಲಿ ಧನ ಸಂಗ್ರಹ ಮಾಡಿ ನೂತನ ಚರ್ಚ್‌ನ ಕಟ್ಟಡವು ನಿರ್ಮಾಣಗೊಂಡು ಇದೇ ಬರುವ ಮೇ. 18 ರಂದು ಉದ್ಘಾಟನೆ ನಡೆಯಲಿದೆ.

ಹೊಲಿ ಟ್ರಿನಿಟಿ ಪ್ರೋವಿನ್ಸ್ ಕರ್ನಾಟಕ ಇದರ ಪ್ರೊವಿನ್ಸಿಯಲ್ ವಂ.ಫಾ| ಆಲ್ವಿನ್ ಡಾಯಸ್ ಉದ್ಘಾಟನೆಯನ್ನು ನೆರವೇರಿಸುವರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ.ಡಾ.ಪೀಟರ್ ಪೌಲ್ ಸಲ್ಡಾನ್ಹ ಆಶೀರ್ವಚನ, ದಿವ್ಯ ಬಲಿ ಪೂಜೆ ಅರ್ಪಿಸುವರು, ನಂತರ ನಡೆಯುವ ಸಭಾ ಕಾರ್ಯಕ್ರಮದ ಅಧಕ್ಷತೆ ವಹಿಸುವರು. ಅತಿಥಿಗಳಾಗಿ ವಂ.ಫಾ| ಬೊನವೆಂಚರ್ ನಜ್ರೆತ್, ಮುಖ್ಯ ಮಂತ್ರಿಗಳ ಅಧಿನ ಕಾರ್ಯದರ್ಶಿ ಐವನ್ ಡಿಸೋಜ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಕೆ. ವಸಂತ ಬಂಗೇರ, ಜಿ.ಪಂ ಸದಸ್ಯ ಶೇಖರ ಕುಕ್ಕೆಡಿ, ಪಡಂಗಡಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ, ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ಭಾಗವಹಿಸುವರು. ಮೇ. 16 ರಂದು ಹೊರೆ ಕಾಣಿಕೆ ಸಂಜೆ 4 ಗಂಟೆಗೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.