ಚಂದ್ಕೂರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಾವು ಮಾಡುವ ಪುಣ್ಯ ಕಾರ್ಯಗಳಿಂದ ಮೋಕ್ಷ ಪ್ರಾಪ್ತಿ: ಸ್ವಾಮೀಜಿ

ಲಾಯಿಲ : ಮಾನವ ಜನ್ಮ ಅನೇಕ ಜನ್ಮಗಳ ಪುಣ್ಯ ಫಲಗಳಿಂದ ಬರುತ್ತದೆ. ಈ ಜನ್ಮದಲ್ಲಿ ನಾವು ಮಾಡುವ ಸತ್ಕಾರ್ಯಗಳು, ದೇವಾಲಯ ನಿರ್ಮಾಣದಂತಹ ಪುಣ್ಯ ಕಾರ್ಯಗಳಿಂದ ನಮಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಶ್ರೀ ರಾಮ ಕ್ಷೇತ್ರ ನಿತ್ಯಾನಂದ ನಗರ ಕನ್ಯಾಡಿ-ಧರ್ಮಸ್ಥಳದ ಪರಮಪೂಜ್ಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಅವರು ಮೇ 7 ರಂದು ಲಾಯಿಲ ಗ್ರಾಮದ ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠೆ, ಅಷ್ಟಬಂಧ- ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ಪಂಚಭೂತಗಳಿಂದ ಆವೃತ್ತವಾದ ಈ ಶರೀರಕ್ಕೆ ಸುಖ ದೊರೆಯಲು ನಾವು ಅನೇಕ ಪ್ರಯತ್ನಗಳನ್ನು ಮಾಡುತ್ತೇವೆ. ಆದರೆ ಇದು ನಿಜವಾದ ಸುಖವಲ್ಲ. ಅಂತರಿಕ ಸುಖ ಯಾವಾಗಲೂ ಶಾಶ್ವತವಾಗಿದೆ. ಪ್ರಕೃತಿಯನ್ನು ಮೀರಿ ಯಾರೂ ಬದುಕಲು ಸಾಧ್ಯವಿಲ್ಲ. ಸನಾತನ ಹಿಂದೂ ಧರ್ಮದಲ್ಲಿ ಮಾನವ ಜೀವನದ ಉನ್ನತಿಗೆ ಬೇಕಾದ ಎಲ್ಲಾ ಮಾರ್ಗದರ್ಶನವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೈಲುವಾರು ಸಮಿತಿಯ ಪುರುಷ ವಿಭಾಗದ ಸಂಚಾಲಕ ಹಾಗೂ ಸಹ ಸಂಚಾಲಕರನ್ನು ಸ್ವಾಮೀಜಿಯವರು ಗೌರವಿಸಿದರು. ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಶಾಸಕರಾದ ಹರೀಶ್ ಪೂಂಜ, ಆಡಳಿತ ಮೊಕ್ತೇಸರ ಎನ್. ಧನಂಜಯ ಅಜ್ರಿ ನಡಗುತ್ತು, ಪ್ರಧಾನ ಕಾರ್ಯದರ್ಶಿ ಬಿ.ಕೆ ಧನಂಜಯ ರಾವ್, ಕಾರ್ಯಾರ್ಧಕ್ಷ ಬಿ. ವಿಠಲ ಶೆಟ್ಟಿ ಲಾಯಿಲ, ಪ್ರಧಾನ ಕಾರ್ಯದರ್ಶಿ ಗಿರೀಶ್ ಡೋಂಗ್ರೆ, ಕೋಶಾಧಿಕಾರಿ ಸುಬ್ರಾಯ ಡೋಂಗ್ರೆ, ಕಾರ್ಯದರ್ಶಿಗಳಾದ ವಸಂತ ಸುವರ್ಣ, ರಾಜೇಶ್ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ಸುರೇಶ್ ಶೆಟ್ಟಿ ಹಾಗೂ ಬೈಲುವಾರು ಪುರುಷರ ವಿಭಾಗದ ಸಂಚಾಲಕರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಪ್ರಾರ್ಥಿಸಿದರು. ಜಯರಾಜ್ ಜೈನ್ ಸ್ವಾಗತಿಸಿದರು. ರುಕ್ಮಯ ಕನ್ಮಾಜೆ ಕಾರ್ಯಕ್ರಮ ನಿರೂಪಿಸಿ, ಜಗದೀಶ್ ಕನ್ನಾಜೆ ವಂದಿಸಿದರು.

ಧಾರ್ಮಿಕ ಕಾರ್ಯಕ್ರಮಗಳು: ಬೆಳಿಗ್ಗೆ ಗಣಹೋಮ, ಉಗ್ರಾಣ ಮುಹೂರ್ತ, ನಡ ಮತ್ತು ಲಾಯಿಲ ಗ್ರಾಮಸ್ಥರಿಂದ ಹೊರಕಾಣಿಕೆ ಸಮರ್ಪಣೆ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ತಂತ್ರಿಗಳಿಗೆ ಸ್ವಾಗತ, ಪ್ರಸಾದ ಪರಿಗ್ರಹ, ಪ್ರಸಾದ ಶುದ್ಧಿ, ಅಂಕುರಾರ್ಪಣೆ, ವಾಸ್ತು ರಾಕ್ಷೆಘ್ನ ಹೋಮ, ವಾಸ್ತು ಬಲಿ, ಅಸ್ತ್ರ ಕಲಶಾಧಿವಾಸ ಮೊದಲಾದ ಕಾರ್ಯಕ್ರಮ ಜರುಗಿತು.
ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ 6 ರಿಂದ ಲಾಯಿಲ ಮತ್ತು ನಡ ಅಂಗನವಾಡಿ ಕೇಂದ್ರದ ಹಾಗೂ ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಮತ್ತು ನಿರಂಜನ್ ಜೈನ್ ಪುದ್ದೊಟ್ಟು ಇವರಿಂದ ಕಾರ್ಯಕ್ರಮ ವೈವಿಧ್ಯ ಸಂಜೆ7 ರಿಂದ ಶ್ರೀ ಲಲಿತೆ ಕಲಾವಿದರು ಮಂಗಳೂರು ಇವರಿಂದ ಕಟೀಲ್ದಪ್ಪೆ ಉಳ್ಳಾಲ್ದಿ ತುಳು ಪೌರಣಿಕ ನಾಟಕ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.