ಕಳಿಯ ಎಚ್.ಪಿ.ಸಿ.ಎಲ್ ಕಾವಲುಗಾರರ ವಜಾ: ಸಾರ್ವಜನಿಕರಿಂದ ಪ್ರತಿಭಟನೆ

ಕಳಿಯ: ಗೇರುಕಟ್ಟೆ ಕಳಿಯ ಎಚ್.ಪಿ.ಸಿ.ಎಲ್ ಪೈಪ್‌ಲೈನ್ ಸ್ಟೇಷನ್ ಸಿಬ್ಬಂದಿಯನ್ನು ಏಕಾಏಕಿ ವಜಾಗೊಳಿಸುವ ಪ್ರಕ್ರಿಯೆ ನಡೆದಿದೆ ಎಂದು ಆಪಾದಿಸಿ, ಮತ್ತು ಘಟಕಕ್ಕೆ ನೂತನ ಸಿಬ್ಬಂದಿಗಳನ್ನು ನೇಮಕಮಾಡಿಕೊಂಡಿರುವ ಕಂಪೆನಿಯ ಕ್ರಮವನ್ನು ಖಂಡಿಸಿ ಊರವರು, ಸ್ಟೇಷನ್ ಸಿಬ್ಬಂದಿಗಳು ಮೇ. ಮೇ.5 ರಂದು ಪ್ರತಿಭಟನೆ ನಡೆಸಿದ ವಿದ್ಯಮಾನ ನಡೆದಿದೆ. ಹೋರಾಟಗಾರರಿಗೆ ಶಾಸಕ ಹರೀಶ್ ಪೂಂಜ ಅವರೂ ಸಾಥ್ ನೀಡಿದ ಪ್ರಸಂಗವೂ ನಡೆಯಿತು.
ಘಟನೆಯ ಸ್ಥಳದಲ್ಲಿ ಶಾಸಕರ ಜೊತೆ ಕಳಿಯ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು, ನಿರ್ದೇಶಕ ರಾಜ್‌ಪ್ರಕಾಶ್ ಶೆಟ್ಟಿ, ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಸದಸ್ಯರಾದ ದಿವಾಕರ ಯಂ, ಸುಧಾಕರ ಮಜಲು, ವಿಜಯ ಹೆಚ್. ಪ್ರಸಾದ್, ತಾ. ಪಂ ಮಾಜಿ ಉಪಾಧ್ಯಕ್ಷೆ ಗೀತಾ ರಾಮಣ್ಣ ಗೌಡ ಕೊಯ್ಯೂರು, ಹಾಲಿ ಸದಸ್ಯ ಕೃಷ್ಣಯ್ಯ ಆಚಾರ್, ದಿನೇಶ್ ಕಂಡಿಗ, ಬಂದಾರು ಪಂ. ಅಧ್ಯಕ್ಷ ಉದಯ ಕುಮಾರ್, ಕೊಯ್ಯೂರು ಪಂ. ಮಾಜಿ ಅಧ್ಯಕ್ಷ ದಾಮೋದರ ಬೆರ್ಕೆ, ಪಂ. ಸದಸ್ಯರಾದ ತಾರನಾಥ್ ಗೌಡ, ರಾಮಣ್ಣ ಗೌಡ, ಗೇರುಕಟ್ಟೆ ಮಿಲ್ಕ್ ಸೊಸೈಟಿ ಅಧ್ಯಕ್ಷ ಜನಾರ್ದನ ಗೌಡ ಕಲಾಯಿ, ರಾಜಕೇಸರಿ ತಾ| ಅಧ್ಯಕ್ಷರು- ಸದಸ್ಯರು, ಮಹಿಳಾ ಘಟಕದ ಅಧ್ಯಕ್ಷೆ, ಬಿಜೆಪಿ ಪಕ್ಷದ ಪ್ರಮುಖ ಕಾರ್ಯಕರ್ತರಾದ ರಾಜೇಶ್ ಪೆರ್ಬುಡ, ಬಾಲಕೃಷ್ಣ ಗೌಡ ಬಿರ್ಮೊಟ್ಟು, ವಿಜಯ ಗೌಡ ನ್ಯಾಯತರ್ಪು, ಪ್ರಕಾಶ್ ಮೇರ್ಲ, ಕೂಸಪ್ಪ ಗೌಡ ಹೀರ್ಯ, ಉದ್ಯಮಿ ಎ.ಕೆ ಅಹಮ್ಮದ್, ಸದಾಶಿವ ನಾಯ್ಕ್ ಹೀರ್ಯ ಹಾಗೂ ಊರಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಸ್ಥಳಕ್ಕೆ ಭೇಟಿ ನೀಡಿದ ಎಎಸ್‌ಪಿ:
ಪ್ರತಿಭಟನೆ ಕಾವು ಏರುತ್ತಿದ್ದಂತೆ ಬಂಟ್ವಾಳ ಎ.ಎಸ್.ಪಿ ಡಾ| ಸೈದುಲ್ ಅಡಾವತ್, ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ, ಎಸ್‌ಐ ರವಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಂಡರು.
ಬಳಿಕ ಕಂಪೆನಿಯ ಅಧಿಕಾರಿಗಳು ಆಗಮಿಸಿದಾಗ, ಶಾಸಕ ಹರೀಶ್ ಪೂಂಜ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯದಂತೆ ಸೂಚಿಸಿದರು.

4 ಸ್ಟೇಷನ್‌ಗಳಲ್ಲಿ 22 ಮಂದಿ ಕೆಲಸಗಾರರು:
ತಾಲೂಕಿನ ಮೂಲಕ ಗ್ಯಾಸ್ ಪೈಫ್‌ಲೈನ್ ಹಾದು ಹೋಗಲು ಅಂದು ಅದೆಷ್ಟೋ ಜನ ಕೃಷಿ ಭೂಮಿಯನ್ನು ಕಂಪೆನಿ ನಿಯಮಾನುಸಾರ ನೀಡಿತ್ತು. ಈ ವೇಳೆ ಬಹುತೇಕ ಕೃಷಿ ಕಳೆದುಕೊಂಡಿರು ಜಾಗದ ಮಾಲಕರಿಗೆ ಪರಿಹಾರದ ಮೊತ್ತದ ಜೊತೆಗೆ ಉದ್ಯೋಗದ ಭರವಸೆ ನೀಡಲಾಗಿತ್ತು.ಅಂತೆಯೇ ಪ್ರಾರಂಭಿಕ ವರ್ಷಗಳಲ್ಲಿ ಕಂಪೆನಿ ನೀಡಿದ ಭರವಸೆಯಂತೆ ಅಲ್ಲಿನವರಿಗೆ ಸೆಕ್ಯೂರಿಟಿ ಕೆಲಸವನ್ನು ಗುತ್ತಿಗೆ ಆಧಾರದಲ್ಲಿ ನೀಡಿ ಕೈತೊಳೆದುಕೊಂಡಿತ್ತು. ಇದೀಗ ಅವಧಿ ಮುಗಿಯುವ ವೇಳೆ ಬೇರೆ ಕಂಪೆನಿ ಬೇರೆಯವರನ್ನು ನಿಯೋಜನೆಗೆ ಪ್ರಯತ್ನಿಸುತ್ತಿದೆ. ತಾಲೂಕಿನಲ್ಲಿ ಕಂಪೆನಿಯ 4 ಸ್ಟೇಷನ್‌ಗಳಲ್ಲಿ ಸ್ಥಳೀಯ 22 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸದಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೇರೆ ಉದ್ಯೋಗ ಅಥವಾ ಇದೇ ಕೆಲಸದಲ್ಲಿ ಮುಂದುವರಿಸುವ ಕುರಿತಾಗಿ ಮುಂದಕ್ಕೆ ಸಂಸದರೂ ಒಳಗೊಂಡಂತೆ ಎಚ್.ಪಿ.ಸಿ.ಎಲ್ ಅಧಿಕಾರಿಗಳೊಂದಿಗೆ ಮಂಗಳೂರು ಮಟ್ಟದಲ್ಲಿ ಸಭೆ ನಡೆಸಿ ಯಾರಿಗೂ ತೊಂದರೆಯಾಗಂತೆ ಕ್ರಮಕೈಗೊಳ್ಳಲಾಗುವುದು.
ಹರೀಶ್ ಪೂಂಜ. ಶಾಸಕರು ಬೆಳ್ತಂಗಡಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.