ಮಂಜುಶ್ರೀ ಸೀನಿಯರ್ ಚೇಂಬರ್‌ಗೆ ರಾಷ್ಟ್ರೀಯ ನಿರ್ದೇಶಕರ ಭೇಟಿ

3 ಮಂದಿ ಹೊಸ ಸದಸ್ಯರ ಸೇರ್ಪಡೆ

ಬೆಳ್ತಂಗಡಿ: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಇದರ ಸಾರ್ವಜನಿಕ ಚಟುವಟಿಕೆಗಳ ರಾಷ್ಟ್ರೀಯ ನಿರ್ದೇಶಕ ಡಾ. ಅರವಿಂದ ರಾವ್ ಕೇದಗೆ ಅವರು ಇತ್ತೀಚೆಗೆ ಬೆಳ್ತಂಗಡಿ ಘಟಕಕ್ಕೆ ಅಧಿಕೃತ ಭೇಟಿ ನೀಡಿದರು.
ಅವರ ಭೇಟಿಯ ಈ ಸಂದರ್ಭ ಘಟಕಕ್ಕೆ ನೂತನ ಸದಸ್ಯರಾಗಿ ರಾಧಾಕೃಷ್ಣ, ಸಂತೋಷ್ ಹೆಗ್ಡೆ ಮತ್ತು ಭರತ್ ಕುಮಾರ್ ಬಂಗಾಡಿ ಇವರನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆ ಅವರು ನಡೆಸಿಕೊಟ್ಟರು.
ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಪಿ.ಪಿ ಜೋಯ್ ವಹಿಸಿದ್ದರು. ನಿಕಟಪೂರ್ವಾಧ್ಯಕ್ಷ ಡಾ.ಪ್ರಮೋದ್ ಆರ್ ನಾಯಕ್, ಕಾರ್ಯದರ್ಶಿ ಚಂದ್ರಹಾಸ ಕೇದೆ, ಕೋಶಾಧಿಕಾರಿ ಯಶವಂತ ಪಟವರ್ಧನ್, ಉಪಸ್ಥಿತರಿದ್ದರು. ವಾಲ್ಟರ್ ಸಿಕ್ವೇರಾ,ವಿಶ್ವನಾಥ ಕೆ ಹಾಗೂ ಸದಸ್ಯರುಗಳು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.