ಉಜಿರೆ ಭಾರತ್ ಅಟೋ ಕಾರ್‍ಸ್‌ನಲ್ಲಿ ನ್ಯೂ ಆಲ್ಟೋ ಕಾರು ಬಿಡುಗಡೆ

ಉಜಿರೆ: ಮಾರುತಿ ಸುಜುಕಿ ಕಂಪೆನಿಯ ನ್ಯೂ ಆಲ್ಟೋ ಕಾರಿನ ಬಿಡುಗಡೆ ಕಾರ್ಯಕ್ರಮವು ಮೇ 6 ರಂದು ಉಜಿರೆ ಭಾರತ್ ಅಟೋ ಕಾರ್‍ಸ್‌ನ ಔಟ್‌ಲೇಟ್ ಮಳಿಗೆಯಲ್ಲಿ ಜರುಗಿತು.
ಉಜಿರೆ ಶ್ರೀ ಧ.ಮಂ.ಎಂ.ಎಲ್.ಟಿ.ಸಿ ಪ್ರಾಂಶುಪಾಲರಾದ ಅಶೋಕ್ ಕುಮಾರ್, ನಿಡ್ಲೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಿನಾಯಕ ಜೋಷಿ ಹಾಗೂ ಇನ್ಸೂರೆನ್ಸ್ ಕಂಪೆನಿಯ ಸರ್ವೆಯರ್ ವಿಷ್ಣು ಮರಾಠೆಯವರು ನ್ಯೂ ಆಲ್ಟೋ ಕಾರನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಭಾರತ್ ಆಟೋ ಕಾರ್‍ಸ್‌ನ ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಪ್ರದೀಪ್ ಕುಮಾರ್ ಶೆಟ್ಟಿ, ಬಾಡಿಶಾಪ್ ಮ್ಯಾನೇಜರ್ ಜಗದೀಶ್, ಟೀಮ್ ಲೀಡರ್ ಮಹಮ್ಮದ್ ಆಸಿಫ್, ಶೈಲೇಶ್, ಅಜಿತ್, ಚೈತ್ರಾ, ಮತ್ತಿತರರು ಉಪಸ್ಥಿತರಿದ್ದರು.

ಕಾರಿನ ವೈಶಿಷ್ಟ್ಯತೆಗಳು
ನೂತನ ಆಲ್ಟೋ ಕಾರು ಚಲ್ತೇ ರಹೋ ಶಾನ್ ಸೆ ಎನ್ನುವ ವಾಕ್ಯೋಕ್ತಿಯಿಂದ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಈ ನೂತನ ಕಾರಿಗೆ ಮೊತ್ತಮೊದಲ ಬಾರಿಗೆ ಬಿಎಸ್ ೬ ಶ್ರೇಣಿಯ ಎಂಜಿನನ್ನು ಅಳವಡಿಸಲಾಗಿದ್ದು, ಇದರಿಂದ ವಾತಾವರಣಕ್ಕೆ ಶೇ. 25 ರಷ್ಟು ನೈಟ್ರೋಜನ್ ಆಕ್ಸೈಡ್ ಬಿಡುಗಡೆ ಕಡಿಮೆಯಾಗುತ್ತದೆ. ಅತ್ಯಾಕರ್ಷಕ ವಿನ್ಯಾಸ, ವಿನೂತನ ತಂತ್ರಜ್ಞಾನ ಹೊಂದಿದೆ. ಎಲೆಕ್ಟ್ರಾನಿಕ್ಸ್ ಥ್ರೋಟ್ಲ್ ಬಾಡಿಯೊಂದಿಗೆ ಹೈ ಥರ್ಮಲ್ ಎಫೀಶಿಯನ್ಸಿ ಗ್ಯಾಸೋಲಿನ್ ಎಂಜಿನ್ ಹೊಂದಿದ್ದು ಚಾಲಕರಿಗೆ ಸುಲಲಿತವಾದ ಚಾಲನೆಯ ಅನುಭವ ನೀಡುತ್ತದೆ.
ಅತ್ಯಂತ ಸುರಕ್ಷೆಗೆ ಎಬಿಎಸ್ ಮತ್ತು ಇಬಿಡಿಯೋಂದಿಗೆ ಡ್ಯುಯಲ್ ಏರ್‌ಬ್ಯಾಗ್ಸ್ ಹೊಂದಿದೆ. ಸ್ಪೀಡ್ ಎಲರ್ಟ್ ಸೆನ್ಸರ್, ಆಕರ್ಷಕ ಫ್ರಂಟ್‌ಗ್ರಿಲ್ ಮತ್ತು ಬಂಪರ್, ಡ್ಯುಯಲ್ ಟೋನ್ ಇಂಟೀರಿಯರ್ಸ್, ರಿವರ್ಸ್ ಸೆನ್ಸರ್,ಸ್ಪೀಡ್ ಅಲರ್ಟ್ ಸಿಸ್ಟಮ್, ಇತ್ಯಾದಿ ವೈಶಿಷ್ಟಗಳನ್ನು ಹೊಂದಿದೆ. ಕಾರು 6 ವಿವಿಧ ಬಣ್ಣಗಳಲ್ಲಿ ಲಭ್ಯವಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.