HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಎರಡು ಗ್ರಾ.ಪಂ.ಗಳ 3 ಸ್ಥಾನಕ್ಕೆ ಉಪಚುನಾವಣೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಉಜಿರೆ ಹಾಗೂ ಕೊಯ್ಯೂರು ಗ್ರಾಮ ಪಂಚಾಯತುಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ 3 ಸ್ಥಾನಗಳಿಗೆ ಉಪಚುನಾವಣೆಯು ಮೇ 29 ರಂದು ಪೂರ್ವಾಹ್ನ 7 ರಿಂದ ಸಂಜೆ 5 ರವೆಗೆ ನಡೆಯಲಿದೆ.
ಉಜಿರೆ ಗ್ರಾ.ಪಂನ ಕ್ಷೇತ್ರ-4 ಮತ್ತು 11 ಹಾಗೂ ಕೊಯ್ಯೂರು ಗ್ರಾ.ಪಂನ ಕ್ಷೇತ್ರ-2 ಕ್ಕೆ ಉಪಚುನಾವಣೆ ನಡೆಯಲಿದೆ. ಉಜಿರೆ ಕ್ಷೇತ್ರ 4ರ ಸದಸ್ಯೆ ಗೀತಾ ರಾಜೀನಾಮೆ, ಕ್ಷೇತ್ರ-11ರ ಸದಸ್ಯ ವೆಂಕಪ್ಪ ನಾಯ್ಕ ನಿಧನ ಹಾಗೂ ಕೊಯ್ಯೂರು ಕ್ಷೇತ್ರ 2ರ ಸದಸ್ಯ ವಿಠಲ ನಿಧನರಾದ್ದರಿಂದ ಈ ಸ್ಥಾನಗಳು ಖಾಲಿಯಾಗಿದ್ದು, ಇದಕ್ಕೆ ಸದಸ್ಯರ ಆಯ್ಕೆ ನಡೆಯಲಿದೆ.
ಮೇ.13ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮೇ.16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮೇ. 17 ನಾಮಪತ್ರಗಳ ಪರಿಶೀಲನೆ, ಮೇ 20 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮೇ.29ರಂದು ಬೆಳಿಗ್ಗೆ 7ರಿಂದ ಸಂಜೆ 5ರ ತನಕ ಮತದಾನ ನಡೆಯಲಿದೆ. ಮೇ 31ರಂದು ಬೆಳಗ್ಗೆ8ರಿಂದ ಮತಗಳ ಏಣಿಕೆ ತಾಲೂಕು ಕೇಂದ್ರದಲ್ಲಿ ನಡೆಯಲಿದೆ.

ಚುನಾವಣಾಧಿಕಾರಿಗಳು: ಉಜಿರೆ ಗ್ರಾ.ಪಂ ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣ ಸಂಯೋಜಕ ಸುಭಾಶ್ ಜಾದವ್ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಉಜಿರೆ ಗ್ರಾ.ಪಂ ಕಾರ್ಯದರ್ಶಿ ಯಲ್ಲವ್ವ ಹಂಡಿ, ಕೊಯ್ಯೂರು ಗ್ರಾ.ಪಂ ಚುನಾವಣಾಧಿಕಾರಿಯಾಗಿ ಸುಧಾಕರ ಪಿಡಿಒ ಗ್ರಾ.ಪಂ ಪಡಂಗಡಿ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ನಾರಾವಿ ಗ್ರಾ.ಪಂ ಕಾಯದರ್ಶಿ ನಿರ್ಮಲ್ ಕುಮಾರ್ ನೇಮಕಗೊಂಡಿದ್ದಾರೆ.
ನೀತಿ ಸಂಹಿತೆ: ಚುನಾವಣೆ ನಡೆಯುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಮೇ.13 ರಿಂದ ಮೇ 31ರವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಳ ಪ್ರಕಟಣೆ ತಿಳಿಸಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.