ಅಕ್ಷಯ ತೃತೀಯ: ಆಭರಣ ಖರೀದಿಯ ಸಂಭ್ರಮ

ಬೆಳ್ತಂಗಡಿ: ಅಕ್ಷಯ ತೃತೀಯ ದಿನವಾದ ಮೇ 7 ರಂದು ಬೆಳ್ತಂಗಡಿ ತಾಲೂಕಿನ ವಿವಿಧ ಚಿನ್ನಾಭರಣ ಮಳಿಗೆಗಳಲ್ಲಿ ಚಿನ್ನಾಭರಣ ವ್ಯಾಪಾರ ಬಿರುಸಿನಲ್ಲಿ ನಡೆಯಿತು.
ಅಕ್ಷಯ ತೃತೀಯದಂದು ಚಿನ್ನಾಭರಣ ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಇದರಿಂದಾಗಿ ತಲಾಂತರದಿಂದ ಈ ದಿನದಂದು ಚಿನ್ನ, ವಜ್ರಾಭರಣ ಖರೀದಿ ಮಾಡುವ ಸಂಪ್ರದಾಯ ಬೆಳೆದು ಬಂದಿದೆ.
ಬೆಳ್ತಂಗಡಿ ತಾಲೂಕಿನ ಚಿನ್ನಾಭರಣ ಮಳಿಗೆಗಳಾದ ರಕ್ಷಾ ಆರ್ಕೇಡ್‌ನಲ್ಲಿರುವ `ಮುಳಿಯ ಕೇಶವ ಭಟ್ಟ & ಸನ್ಸ್‘, ವಿವಾ ಕಾಂಪ್ಲೆಕ್ಸ್‌ನಲ್ಲಿರುವ `ದೀಪಾ ಗೋಲ್ಡ್‘, `ಮೆ| ಬಿ. ಪುಂಡಲೀಕ ಬಾಳಿಗಾ ಎಂಡ್ ಸನ್ಸ್ ಜ್ಯುವೆಲ್ಲರ್‍ಸ್’ ಪುಂಜಾಲಕಟ್ಟೆ, `ಮೆ| ಬಿ. ಪುಂಡಲೀಕ ಬಾಳಿಗಾ ಜ್ಯುವೆಲ್ಲರ್‍ಸ್’ ಶ್ರೀ ಕ್ಷೇತ್ರ ವಾಣಿಜ್ಯ ಸಂಕೀರ್ಣ ಬೆಳ್ತಂಗಡಿ, ಬೆಳ್ತಂಗಡಿ ಸಂತೆಕಟ್ಟೆಯಲ್ಲಿರುವ `ಪಾರಸ್ ಪೃಥ್ವಿ ಜ್ಯುವೆಲ್ಸ್’, ಬೆಳ್ತಂಗಡಿ ಗೋಕುಲ್ ಆರ್ಕೆಡ್‌ನಲ್ಲಿರುವ `ಶೃಂಗಾರ್ ಜ್ಯುವೆಲ್ಲರ್‍ಸ್’, ಬೆಳ್ತಂಗಡಿ ಮಾರಿಗುಡಿ ಬಳಿಯ ನೂತನ ಮಳಿಗೆ `ಅಭರಣ’, ಧನಲಕ್ಷ್ಮೀ ಜ್ಯುವೆಲ್ಲರ್‍ಸ್ ಮುಖ್ಯ ರಸ್ತೆ ಉಜಿರೆ ಸೇರಿದಂತೆ ಬೆಳ್ತಂಗಡಿ ತಾಲೂಕಿನ ಪಟ್ಟಣ ಹಾಗೂ ಗ್ರಾಮಾಂತರದಲ್ಲೂ ಜನರು ಚಿನ್ನ ಖರೀದಿಯನ್ನು ನಡೆಸಿದರು.
ಅಕ್ಷಯ ತೃತೀಯ ಹಿನ್ನಲೆಯಲ್ಲಿ ಕೆಲ ಚಿನ್ನಾಭರಣ ಮಳಿಗೆಗಳು ವಿಶೇಷ ದರ ಕಡಿತ, ಉಡುಗೊರೆ, ಚಿನ್ನ-ಬೆಳ್ಳಿಯ ನಾಣ್ಯಗಳನ್ನು ಪ್ರಕಟಿಸಿ ಗ್ರಾಹಕರನ್ನು ಆಕರ್ಷಿಸಿದರು. ಚಿನ್ನಾಭರಣ ಮಳಿಗೆಗಳು ಬೆಳಿಗ್ಗೆಯಿಂದ ರಾತ್ರಿ ವೇಳೆಯಲ್ಲೂ ತೆರೆದುಕೊಂಡಿದ್ದವು. ಸಾಮಾನ್ಯವಾಗಿ ಅಕ್ಷಯ ತೃತೀಯದ ಅಸುಪಾಸಿನಲ್ಲಿ ಚಿನ್ನಾಭರಣ ಖರೀದಿಸಲು ಹೋಗುವ ಗ್ರಾಹಕರು ಮುಂಗಡ ಕಾದಿರಿಸಿ ಅಕ್ಷಯ ತೃತೀಯದಂದು ಮನೆಗೊಯ್ಯುವ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.