ಯಕ್ಷಗಾನ ಕಲಾವಿದ ಪಕೀರರ ಸಂಸ್ಮರಣೆ

ಗೇರುಕಟ್ಟೆ: ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಮತ್ತು ನಾಟ್ಯ ಗುರುವಾಗಿ ಅಪಾರ ಸೇವೆ ಮಾಡಿರುವ ಪಕೀರರ ಕಲಾಸೇವೆ ಸ್ಮರಣೀಯ. ಅತ್ಯಂತ ಕೆಳಸ್ತರದ ಕುಟುಂಬದಿಂದ ಬಂದಿದ್ದರೂ ಸಾಧನೆಯಿಂದ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಹಾಗೂ ಮಂಗಳೂರು ವಿ.ವಿ ಕರಾವಳಿ ಯಕ್ಷಗಾನ ಸಮ್ಮೇಳನದಲ್ಲಿ ಗೌರವಕ್ಕೆ ಪಾತ್ರರಾದ ಪಕೀರರು ಶಿಕ್ಷಣ ಇಲಾಖೆಯಲ್ಲಿ ನಾಲ್ಕು ದಶಕಗಳ ಸೇವೆಯೊಂದಿಗೆ ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ಮಾದರಿಯಾಗಿದ್ದರೆಂದು ಉಪ್ಪಿನಂಗಡಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ ತಿಳಿಸಿದರು.
ನಾಳ ಶ್ರೀ ದುರ್ಗಾ ಪರಮೇಶ್ವರೀ ಬಯಲಾಟ ಸೇವಾ ಸಮಿತಿಯ ವತಿಯಿಂದ ಗೇರುಕಟ್ಟೆಯಲ್ಲಿ ಆಯೋಜಿಸಲಾಗಿದ್ದ ಸುಂಕದಕಟ್ಟೆ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಜರಗಿದ ನುಡಿನಮನಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೇದಿಕೆಯಲ್ಲಿ ಕಳಿಯ ಗ್ರಾಮ ಪಂಚಾಯತ್ ಸದಸ್ಯ ಬಿ.ತುಕರಾಮ, ರಾಘವೇಂದ್ರ ಭಾಂಗಿನ್ನಾಯ ಕುಂಟಿನಿ, ಮೇಳದ ಸಂಚಾಲಕ ಯೋಗೀಶ ಸುವರ್ಣ ಉಪಸ್ಥಿತರಿದ್ದರು. ಸಂಘಟಕರಾದ ರಾಘವ.ಎಚ್ ಗೇರುಕಟ್ಟೆ ಸ್ವಾಗತಿಸಿ ವಂದಿಸಿದರು. ಕಲಾವಿದ ದಿನೇಶ ರೈ ಕಡಬ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಾಗರ ಪಂಚಮಿ ಯಕ್ಷಗಾನ ಪ್ರದರ್ಶನ ಜರಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.