ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭಕ್ತರಿಂದ ಹಸಿರುವಾಣಿ ಹೊರೆಕಾಣಿಕೆ ಭವ್ಯ ಮೆರವಣಿಗೆ

ಲಾಯಿಲ: ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಲಾಯಿಲ-ನಡ ಗ್ರಾಮಸ್ಥರ ಹಾಗೂ ಊರ ಪರವೂರ ಭಕ್ತಾಧಿಗಳ ಒಗ್ಗೂಡುವಿಕೆಯಲ್ಲಿ ಸುಮಾರು ರೂ. 2 ಕೋಟಿ ವೆಚ್ಚದಲ್ಲಿ ಜೀಣೋದ್ಧಾರಗೊಂಡಿದ್ದು, ಇದರ ಪುನಃಪ್ರತಿಷ್ಠೆ, ಅಷ್ಟಬಂಧ- ಬ್ರಹ್ಮಕಲಶೋತ್ಸವ ಮೇ8ರಿಂದ 13 ರವರೆಗೆ ನಡೆಯಲಿದ್ದು, ಇಂದು(ಮೇ.8) ಭಕ್ತರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಜರುಗಿತು. ಬೆಳ್ತಂಗಡಿ  ಸಂತೆಕಟ್ಟೆ  ಕುತ್ಯಾರು ದೇವಸ್ಥಾನದಿಂದ ಲಾಯಿಲ-ನಡ ಗ್ರಾಮಸ್ಥರ ಹಾಗೂ ಊರ ಪರವೂರ ಭಕ್ತಾಧಿಗಳ ಹಸಿರುವಾಣಿ ಹೊರೆಕಾಣಿಕೆ ಭವ್ಯ ಮೆರವಣಿಗೆ ಸಾಗಿತು.

ಈ  ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಧನಂಜಯ ಅಜ್ರಿ , ಶಾಸಕ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಪೂಂಜ,  ಪ್ರಧಾನ ಕಾರ್ಯದರ್ಶಿ ಬಿ.ಕೆ ಧನಂಜಯ ರಾವ್, ಕಾರ್ಯಾರ್ಧಕ್ಷ ಬಿ. ವಿಠಲ ಶೆಟ್ಟಿ ಲಾಯಿಲ , ಪ್ರಧಾನ ಕಾರ್ಯದರ್ಶಿ ಗಿರೀಶ್ ಡೋಂಗ್ರೆ, ಕೋಶಾಧಿಕಾರಿ ಸುಬ್ರಾಯ ಡೋಂಗ್ರೆ, ಕಾರ್ಯದರ್ಶಿಗಳಾದ ವಸಂತ ಸುವರ್ಣ, ರಾಜೇಶ್ ಶೆಟ್ಟಿ, ಅಲೋಕ್ ಅಜ್ರಿ, ಪ್ರಚಾರ ಸಮಿತಿ ಸಂಚಾಲಕ ಪ್ರಸಾದ್ ಶೆಟ್ಟಿ ಎಣಿಂಜೆ, ಸ್ವಾಗತ ಸಮಿತಿ ಸಹ ಸಂಚಾಲಕ ವಸಂತ ಶೆಟ್ಟಿ ಶ್ರದ್ಧಾ, ವೈದಿಕ ಸಮಿತಿಯ ಸಂಚಾಲಕ ಗಣೇಶ್ ಐತಾಳ್, ಜೊತೆ ಕೋಶಾಧಿಕಾರಿ ಮುನಿರಾಜ ಅಜ್ರಿ,  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯಕರ ಶೆಟ್ಟಿ, ಮತ್ತಿತರ ಗಣ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.