ಸೂಜಿದಾರ ಕನ್ನಡ ಸಿನೆಮಾ ಮೇ 10ರಂದು ರಾಜ್ಯಾದ್ಯಂತ ತೆರೆಗೆ

ಮುಗ್ಧ ಹೆಣ್ಣಿನ ಸುಂದರ ಕಥೆ

ಬಾಲ್ಯ ಸ್ನೇಹಿತರಾದ ಬೆಳ್ತಂಗಡಿಯ ಯುವ ಚಿತ್ರ ನಿರ್ಮಾಪಕ ಸಚ್ಚೀಂದ್ರನಾಥ್ ನಾಯಕ್ ಮತ್ತು ಉಡುಪಿಯ ಅಭಿಜಿತ್ ಕೋಟೆಗಾರ್ ಅವರು ನಿರ್ಮಿಸಿರುವ ಕನ್ನಡ ಚಲನಚಿತ್ರ ಸೂಜಿದಾರ ಮೇ. 10ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.
ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರೀಯರಾಗಿರುವ, ಹಲವು ಚಿತ್ರಗಳಲ್ಲಿ ಸಹನಟನಾಗಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿದ ಅನುಭವ ಇರುವ ನಟ ಯಶವಂತ್ ಶೆಟ್ಟಿ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇವರಿಗೆ ನಾಯಕಿಯಾಗಿ ಹರಿಪ್ರಿಯಾ ಜೋಡಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಹರಿಪ್ರಿಯಾ ಉತ್ತರ ಕರ್ನಾಟಕ ಶೈಲಿಯಲ್ಲಿ ಪಾರಂಪರಿಕ ಉಡುಗೆ ತೊಟ್ಟು ಗಮನ ಸೆಳೆದಿದ್ದಾರೆ. ಸದ್ಯ ಸಿನೆಮಾದ ಜಾರುತ್ತಿದೆ…..| ಹಾಡು ರಿಲೀಸ್ ಆಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸಿನಿ ಸ್ನೇಹ ಟಾಕಿಸ್ ಬ್ಯಾನರ್‌ನಡಿ ನಿರ್ಮಾಣ ಆಗಿರುವ ಸೂಜಿದಾರ ಚಿತ್ರವು ಶಿರ್ಷಿಕೆಯ ಮೂಲಕ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಬಹುತೇಕ ರಂಗಭೂಮಿ ಪ್ರತಿಭೆಗಳ ಕೈಯಲ್ಲಿ ಮೂಡಿರುವ ಸೂಜಿದಾರ ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಸಂಶಯ ಇಲ್ಲ. ಮೈ ಮನ ಪೋಣಿಸೊ ಸೂಜಿದಾರದಲ್ಲಿ ಒಟ್ಟು ಐದು ಹಾಡುಗಳಿವೆ. ಇವತ್ತಿನ ಕಾಲಘಟ್ಟದಲ್ಲಿ ಏನೂ ಅಲ್ಲದ ಹೆಣ್ಣುಮಗಳೊಬ್ಬಳು ದೊಡ್ಡಮಟ್ಟದಲ್ಲಿ ಹೆಸರು ಮಾಡಿ ಗುರುತಿಸಿಕೊಂಡು ಸಾಧನೆ ಮಾಡಿರುವ ಕಥೆಯನ್ನು ಚಿತ್ರದಲ್ಲಿ ಅಳವಡಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.