ಬಳಂಜ: ಬಿ.ವಿ.ಎಲ್ ಕ್ಯಾಂಪಸ್ ವಾರಿಯರ್‍ಸ್ ವತಿಯಿಂದ ವಾಲಿಬಾಲ್ ಪಂದ್ಯಾಟ

ಕೋಟ್ಯಾನ್ ರಾಕರ್‍ಸ್ ತಂಡ ಚಾಂಪಿಯನ್

ಬಳಂಜ: ಬಳಂಜ ವಾಲಿಬಾಲ್ ಕ್ಲಬ್ ಇದರ ಸಹಯೋಗದೊಂದಿಗೆ ಕ್ಯಾಂಪಸ್ ವಾರಿಯರ್‍ಸ್ ತಂಡದ ವತಿಯಿಂದ ನಡೆದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ಉದ್ಘಾಟನೆಯು ಮೇ.4 ರಂದು ಬಳಂಜ ಶ್ರೀ ದೈವ ಕೊಡಮಣಿತ್ತಾಯ ಅವರಣದಲ್ಲಿ ನಡೆಯಿತ್ತು.
ಪಂದ್ಯಾಟದ ಉದ್ಘಾಟನೆಯನ್ನು ಬಳಂಜ ವಾಲಿಬಾಲ್ ಕ್ಲಬ್‌ನ ಅಧ್ಯಕ್ಷ ರಾಕೇಶ್ ಹೆಗ್ಡೆ ದೀಪ ಬೆಳಗಿಸುವುದರೊಂದಿಗೆ ನೇರವೇರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ವಾರಿಯರ್‍ಸ್ ತಂಡದ ಮಾಲಕ ಸಚಿನ್ ಶೆಟ್ಟಿ ಕುರೆಲ್ಯ ನಾಲ್ಕೂರು, ಸುವರ್ಣ ಸ್ಟೈಕರ್‍ಸ್ ತಂಡದ ಮಾಲಕ ರಂಜಿತ್ ಹೆಚ್.ಡಿ, ಬಿ.ವಿ.ಎಲ್ ಕ್ಲಬ್‌ನ ಕಾರ್ಯದರ್ಶಿ ಯೋಗೀಶ್ ಪೂಜಾರಿ, ಉಪಾದ್ಯಕ್ಷ ಸುರೇಶ್ ಪೂಜಾರಿ ಹೇವ, ರಕ್ಷೀತ್ ಬಗ್ಯೋಟ್ಟು, ಸುಭಾಷ್ ಹೇವ, ಲತೇಶ್ ಪೆರಾಜೆ, ಕಾರ್ತೀಕ್ ಬಳಂಜ, ಚಿತ್ತರಂಜನ್, ನಿಜಾಮುದ್ದಿನ್, ಸುಕೇಶ್, ಪ್ರವೀಣ್ ಲಾಂತ್ಯಾರು, ಸ್ವಜನ್, ನಿಶಾಂತ್, ಸದಾನಂದ ಶೆಟ್ಟಿ ನಂದ್ರಟ್ಟ , ದೈಹಿಕ ಶಿಕ್ಷಕ ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.
ಕೋಟ್ಯಾನ್ ರಾಕರ್‍ಸ್ ತಂಡದ ಸಂತೋಷ್ ಪಿ ಕೋಟ್ಯಾನ್ ಬಳಂಜ ಸ್ವಾಗತಿಸಿ, ವಂದಿಸಿದರು. ಜಾಹಿದ್ ಕಾರ್ಯಕ್ರಮ ನಿರೂಪಿಸಿದರು.

ಪ್ರಶಸ್ತಿ ಪಡೆದ ತಂಡಗಳು
ಕ್ಯಾಂಪಸ್ ವಾರಿಯರ್‍ಸ್ ವತಿಯಿಂದ ಬಿ.ವಿ.ಎಲ್ ವಾಲಿಬಾಲ್ ಪಂದ್ಯಾಟದಲ್ಲಿ ಸಂತೋಷ್ ಪಿ ಕೋಟ್ಯಾನ್ ರವರ ಕೋಟ್ಯಾನ್ ರಾಕರ್‍ಸ್ ತಂಡ ಚಾಂಪಿಯನ್, ರಂಜಿತ್ ಹೆಚ್.ಡಿ ಯವರ ಸುವರ್ಣ ಸ್ಟೈಕರ್‍ಸ್ ತಂಡ ರನ್ನರ್‍ಸ್, ವಿಶ್ವನಾಥ ಹೊಳ್ಳರವರ ಮಜ್ಜೇನಿಬೈಲ್ ಬ್ರದರ್‍ಸ್ ತಂಡ ತೃತೀಯ, ಸಚಿನ್ ಶೆಟ್ಟಿ ಯವರ ಕ್ಯಾಂಪಸ್ ವಾರಿಯರ್‍ಸ್ ತಂಡ ಚತುರ್ಥ ಸ್ಥಾನವನ್ನು ಪಡೆಯಿತು. ಹಾಗೂ ಬೆಸ್ಟ್ ಅಲ್‌ರೌಂಡರ್‌ರಾಗಿ ಕೋಟ್ಯಾನ್ ರಾಕರ್‍ಸ್ ತಂಡದ ದೀಪಕ್ ಹೆಚ್.ಡಿ, ಬೆಸ್ಟ್ ಅಟೆಕ್ಕರ್‌ರಾಗಿ ಸುವರ್ಣ ಸ್ಟೈಕರ್‍ಸ್ ತಂಡದ ಜೀವನ್, ಬೆಸ್ಟ್ ಪಾಸರ್‌ರಾಗಿ ಕೋಟ್ಯಾನ್ ರಾಕರ್‍ಸ್ ತಂಡದ ಯೋಗೀಶ್ ಪೂಜಾರಿ ವೈಯಕ್ತಿಕ ಪ್ರಶಸ್ತಿ ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.