ಉಜಿರೆ: ಕಾರಿನ ಮೇಲೆ ಮರಬಿದ್ದು ಇಬ್ಬರು ಯುವಕರು ಧಾರುಣ ಸಾವು: ಇಬ್ಬರಿಗೆ ಗಾಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಉಜಿರೆ ಧರ್ಮಸ್ಥಳ ಹೆದ್ದಾರಿ ಮಧ್ಯೆ ಸಿದ್ಧವನ ಗುರುಕುಲದ ಬಳಿ ಉಜಿರೆ ಕಡೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಯುವಕರು ಸಾವನ್ನಪ್ಪಿ ಕಾರು ಸಂಪೂರ್ಣ ಜಖಂಗೊಂಡ ಘಟನೆ ಮೇ.4 ರಂದು ಸಂಜೆ ನಡೆದಿದೆ.
ಘಟನೆಯಿಂದ ಉಜಿರೆ ನಿನ್ನಿಕಲ್ಲು ನಿವಾಸಿ, ಉಜಿರೆ ಎಚ್ ಪಿ ಗ್ಯಾಸ್ ಕಂಪೆನಿಯ ಚಾಲಕ, ಮೂಲತಃ ಪುದುವೆಟ್ಟು ನಿವಾಸಿ ಮುಕುಂದ ಅವರ ಪುತ್ರ ವಿಘ್ನೇಶ್(21ವ.) ಅವರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮಡಂತ್ಯಾರು ಸನಿಹದ ಮಾಲಾಡಿ ನವುಂಡ ದೇವಸ್ಥಾನದ ಪಕ್ಕದ ಮನೆಯ ಜಗದೀಶ್ ಜೈನ್ ಅವರ ಪುತ್ರ ಕ್ಷಿತಿಜ್ ಜೈನ್(24ವ.) ಅವರು ಅಸುನೀಗಿದರು. ಘಟನೆಯಿಂದ ಇನ್ನಿಬ್ಬರು ಸಹ ಪ್ರಯಾಣಿಕರಾಗಿದ್ದ ಸುಶಾಂತ್ ಮತ್ತು ಹರ್ಷಿತ್ ಎಂಬವರು ಅಲ್ಪ ಪ್ರಮಾಣದ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಧರ್ಮಸ್ಥಳ ಕಡೆಯಿಂದ ಬರುತ್ತಿದ್ದರು:
ಕಾರಿನಲ್ಲಿರುವವರೆಲ್ಲರೂ ಮಿತ್ರರಾಗಿದ್ದು ಜೊತೆಯಾಗಿ ಧರ್ಮಸ್ಥಳಕ್ಕೆ ತೆರಳಿ ವಾಪಾಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಅಪಘಾತದ ವೇಳೆ ಎದುರು ಸೀಟಿನಲ್ಲಿ ಕುಳಿತಿದ್ದ ಇಬ್ಬರೂ ಏರ್ ಬೇಗ್ ಓಪನ್ ಆಗಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆನ್ನಲಾಗಿದ್ದು ಹಿಂಬದಿ ಕುಳಿತಿದ್ದವರು ಸಾವನ್ನಪ್ಪಿದ್ದೆಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅಪಘಾತದ ವೇಳೆ ವಿಘ್ನೇಶ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕ್ಷಿತಿಜ್ ಜೈನ್ ಅವರ ತಲೆಗೆ ಗಂಭೀರ ಗಾಯವಾಗಿ ಜೀವನ್ಮರಣ ಹೋರಾಟದಲ್ಲಿದ್ದರು. ಈ ಮಧ್ಯೆ ಗಾಯಾಳುಗಳನ್ನು ಸಾರ್ವಜನಿಕರು ತಕ್ಷಣ ಕಾರಿನೊಳಗಿನಿಂದ ಹೊರ ತೆಗೆದು ವಿಘ್ನೇಶ್ ಅವರನ್ನು ಉಜಿರೆ ಎಸ್‌ಡಿಎಂ ಆಸ್ಪತ್ರೆಗೆ, ಕ್ಷಿತಿಜ್ ಅವರನ್ನು ಉಜಿರೆ ಬೆನಕ ಆಸ್ಪತ್ರೆಗೆ ಸಾಗಿಸಿದರು. ಅತ್ತ ವಿಘ್ನೇಶ್ ಅವರು ಅದಾಗಲೇ ಮೃತಪಟ್ಟಿದ್ದರು.

ಕ್ಷಿತಿಜ್ ಅವರಿಗೆ ಬೆನಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ತಕ್ಷಣ ಜೀವ ರಕ್ಷಕ ಆಂಬುಲೆನ್ಸ್ ಮೂಲಕ ಚಾಲಕ ಹಮೀದ್ ಅವರು ಮಂಗಳೂರು ಕರೆದುಕೊಂಡು ಹೋದರು. ಆದರೆ ಮಡಂತ್ಯಾರು ತಲುಪುತ್ತಿರುವಂತೆ ಚಲನವಲನ ಸ್ಥಗಿತಗೊಂಡಿದ್ದರಿಂದ ಪುಂಜಾಲಕಟ್ಟೆ ಸರಕಾರಿ ವೈದ್ಯರಿಗೆ ತೋರಿಸಿದಾಗ ಕ್ಷಿತಿಜ್ ಅವರೂ ಮೃತಪಟ್ಟಿರುವುದು ಖಚಿತಪಡಿಸಿಕೊಂಡು ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ತಂದಿರಿಸಿದರು ಕ್ಷಿತಿಜ್ ಜೈನ್ ಪಾರ್ಥಿವ ಶರೀರವನ್ನು ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕುಂಬ್ರುಗ ತರವಾಡು ಮನೆಗೆ ಕೊಂಡುಹೋಗಿ ಮೇ. 5 ರಂದು ಅಂತ್ಯಸಂಸ್ಕಾರ ವಿಧಿ ಪೂರೈಸಲಾಗಿದೆ.

ಮೃತರ ತಂದೆ ಜಗದೀಶ್ ಜೈನ್ ಅವರು ಮೂಲತಃ ಪುತ್ತೂರು ತಾಲೂಕಿನವರಾಗಿದ್ದು, ಬೆಳ್ತಂಗಡಿ ತಾಲೂಕಿನಲ್ಲಿ ಜಾಗ ಖರೀದಿಸಿ ಕೃಷಿ ಚಟುವಟಿಕೆಯೊಂದಿಗೆ ನೆಲೆಸಿದ್ದರು. ಕ್ಷಿತಿಜ್ ಉಜಿರೆ ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ಅಂತಿಮವರ್ಷದಲ್ಲಿ ಕಲಿಯುತ್ತಿದ್ದರು.ಮೃತರು ತಂದೆ ಸಹಿತ, ತಾಯಿ ವೃಂದಾ, ಸಹೋದರ ಕೃತಕ್, ದೊಡ್ಡಪ್ಪಂದಿರಾದ ಕಾರ್ಪೋರೇಶನ್ ಬ್ಯಾಂಕ್ ನಿವೃತ ಅಧಿಕಾರಿ ಕೃಷ್ಣ ನಗರ ನಿವಾಸಿ ಸುಭಾಶ್ಚಂದ್ರ, ಪ್ರಕಾಶ್ ಕೊಲ್ಯ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.