ಬೆಳ್ತಂಗಡಿ: ಜಮೀಯತುಲ್ ಫಲಾಹ್‌ನಿಂದ 263 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

263 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ:

ಬೆಳ್ತಂಗಡಿ: ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ವತಿಯಿಂದ ತಾಲೂಕಿನ ಅರ್ಹ ಕುಟುಂಬಗಳಿಗೆ ರಂಝಾನ್ ಸ್ಪೆಷಲ್ ಕಿಟ್ ವಿತರಣೆ ಮೇ 4 ರಂದು ಘಟಕದ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ, ನಿವೃತ ಪೊಲೀಸ್ ಎಂ. ಎ ಕಾಸಿಂ ಮಲ್ಲಿಗೆಮನೆ ವಹಿಸಿದ್ದರು. ಉದ್ಘಾಟನೆಯನ್ನು ಘಟಕದ ಮಾಜಿ ಜಿಲ್ಲಾಧ್ಯಕ್ಷ ಹಾಜಿ ಅಬ್ದುಲ್ ಲೆತೀಫ್ ಸಾಹೇಬ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿದ್ದ ಶಿರ್ಲಾಲು ಜುಮ್ಮಾ ಮಸ್ಜಿದ್ ಖತೀಬ್ ಶಂಶುದ್ದೀನ್ ದಾರಿಮಿ ಮಾತನಾಡಿ, ದಾನವಾಗಿ ಸಿಕ್ಕಿರುವ ಈ ವಸ್ತುಗಳ ಬಗ್ಗೆ ತಾತ್ಸಾರ ಭಾವನೆ ಬೇಡ. ಇದು ಅರ್ಹರನ್ನು ಆಯ್ಕೆ ಮಾಡಿ ಕೊಡುವ ವಸ್ತುಗಳಾಗಿದ್ದು ಇದನ್ನು ಮಾರಾಟ ಅಥವಾ ದುರುಪಯೋಗಪಡಿಸಿದರೆ ಅದಕ್ಕೆ ಅಲ್ಲಾಹನ ಮುಂದೆ ಉತ್ತರ ನೀಡಬೇಕಾದ ಹೊಣೆಗಾರಿಕೆ ನಮ್ಮ ಮೇಲೆ ಬರಲಿದೆ ಎಂದರು.
ಸಮಾರಂಭದಲ್ಲಿ ಪದಾಧಿಕಾರಿಗಳಾದ ಎಸ್.ಎಂ ಕೋಯ ತಂಙಳ್ ಉಜಿರೆ, ಶೇಕುಂಞಿ, ಅಕ್ಬರ್ ಬೆಳ್ತಂಗಡಿ, ಎ.ಕೆ ಬಶೀರ್ ವಗ್ಗ, ಅಬ್ಬೋನು ಮದ್ದಡ್ಕ, ಕಾಸಿಂ ಪದ್ಮುಂಜ, ಕೆ.ಎಸ್ ಅಬ್ದುಲ್ಲ ಕರಾಯ, ಹಮೀದ್ ಅಂಗರಕರಿಯ, ಅಬೂಬಕ್ಕರ್ ಕಾಶಿಪಟ್ಣ, ಖಾಲಿದ್ ಪುಲಾಬೆ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಆಲಿಯಬ್ಬ ಪುಲಾಬೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಮರ್‌ಕುಂಞಿ ನಾಡ್ಜೆ ವಂದಿಸಿದರು.

ಐಎಎಸ್, ಕೆಎಎಸ್ ತರಬೇತಿ, ಹಾಗೂ ಉನ್ನತ ಶಿಕ್ಷಣ ಪಡೆಯಲು ಬಯಸುವ ಸಮಾಜದ ಗಂಡು ಮಕ್ಕಳಿಗಾಗಿ ಮಾತ್ರ ಈ ವರ್ಷ ಜಮೀಯತುಲ್ ಫಲಾಹ್ ಉಚಿತವಾಗಿ ಶಿಕ್ಷಣ ನೀಡಲು ಉದ್ಧೇಶಿಸಿದ್ದು, ತಾಲೂಕಿನ ಅರ್ಹ ಇಬ್ಬರು ಫಲಾನುಭವಿಗಳಿಗೆ ಅವಕಾಶ ದೊರೆಯಲಿದೆ. ಕಲಿಕೆಯಲ್ಲಿ ಅಸಕ್ತಿ ಇದ್ದು ಸೂಕ್ತ ವ್ಯವಸ್ಥೆ ಇಲ್ಲದಿರುವವರು ಪ್ರಯೋಜನ ಪಡೆಯಬಹದು: ಆಲಿಯಬ್ಬ ಪುಲಾಬೆ, ಕಾರ್ಯದರ್ಶಿ ಜಮೀಯತುಲ್ ಫಲಾಹ್ ಬೆಳ್ತಂಗಡಿ.

ಇಸ್ಲಾಂ ಕಲ್ಪಸಿರುವ ಮಾರ್ಗದಲ್ಲಿ ನಮ್ಮ ಸೊತ್ತಿನಲ್ಲಿ ನಿರ್ಧಿಷ್ಟ ಅಂಶ ಸಮಾಜದ ಬಡವರಿಗೆ ನೀಡುವುದು ಕಡ್ಡಾಯವಾಗಿದೆ. ಇದೇ ನೀತಿ ಪಾಲಿಸಿ ನಮ್ಮ ಫ್ಯಾಮಿಲಿ ಕಡೆಯಿಂದಲೂ ಕಿಟ್‌ಗಳನ್ನು ಜಮೀಯತುಲ್ ಫಲಾಹ್ ಮೂಲಕ ನೀಡಲಾಗುತ್ತಿದೆ: ಹಾಜಿ ಅಬ್ದುಲ್ ಲೆತೀಫ್ ಸಾಹೇಬ್ ಮಾಜಿ ಜಿಲ್ಲಾಧ್ಯಕ್ಷರು ಜಮೀಯತುಲ್ ಫಲಾಹ್

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.