ಹಿಂದಿ ಪರೀಕ್ಷೆ: ಬೆಳಾಲು ಸರಸ್ವತಿ ಶಾಲೆಗೆ 3ನೇ ರ್‍ಯಾಂಕ್‌ನೊಂದಿಗೆ ಶೇ.100 ಫಲಿತಾಂಶ

ಶ್ರೀಮತಿ ಮಮತಾ

ಬೆಳಾಲು: ಮೈಸೂರು ಹಿಂದಿ ಪ್ರಚಾರ ಪರಿಷತ್ ಬೆಂಗಳೂರು ಇವರಿಂದ ನಡೆಸಲ್ಪಡುವ ಹಿಂದಿ ಪ್ರಥಮದಿಂದ, ಹಿಂದಿ ರತ್ನದವರೆಗಿನ ಎಲ್ಲಾ ಪರೀಕ್ಷೆಯಲ್ಲಿ ಬೆಳಾಲು ಶ್ರೀ ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಿಂದ ಹಾಜರಾದ  ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಶೇ.100 ಫಲಿತಾಂಶ ಪಡೆದಿದೆ ಹಾಗೂ  ಓರ್ವ ವಿದ್ಯಾರ್ಥಿನಿ ಮಮತಾ ರವರು 3ನೇ ರ್‍ಯಾಂಕ್ ಗಳಿಸಿದ್ದಾರೆ .
ಹಿಂದಿ ಉತ್ತಮ ಪ್ರಥಮ ಖಂಡದಲ್ಲಿ ಹಾಜರಾದ 56 ವಿದ್ಯಾರ್ಥಿಗಳಲ್ಲಿ 53 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಹಿಂದಿ ಉತ್ತಮ ದ್ವಿತೀಯ ಖಂಡದಲ್ಲಿ ಹಾಜರಾದ 74 ವಿದ್ಯಾರ್ಥಿಗಳಲ್ಲಿ 64 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 10 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಹಿಂದಿ ರತ್ನ ಪ್ರಥಮ ಖಂಡದಲ್ಲಿ ಹಾಜರಾದ 47 ವಿದ್ಯಾರ್ಥಿಗಳಲ್ಲಿ 38 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಿಂದಿ ದ್ವಿತೀಯ ಖಂಡದಲ್ಲಿ ಹಾಜರಾದ 92 ವಿದ್ಯಾರ್ಥಿಗಳಲ್ಲಿ 76 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದು, ಪುತ್ತೂರು ತಾಲೂಕಿನ ಕೃಷ್ಣಪ್ಪ ರವರ ಪುತ್ರಿ ಶ್ರೀಮತಿ ಮಮತಾರವರು 3ನೇ ರ್‍ಯಾಂಕ್ ಪಡೆದಿರುತ್ತಾರೆ.
ಹಿಂದಿ ಪರೀಕ್ಷೆಗೆ ಹಾಜರಾಗುವ ಎಲ್ಲಾ ಮಕ್ಕಳಿಗೆ ಪುಸ್ತಕಗಳನ್ನು ಹಿಂದಿ ಪರಿಷತ್‌ನಿಂದಲೇ ನೀಡುತ್ತಿದ್ದು, ಉಚಿತ ತರಗತಿಗಳನ್ನು ನಡೆಸಲಾಗುತ್ತದೆ. ಮುಂದಿನ ಪರೀಕ್ಷೆಗೆ ಆವೇದನಾ ಪತ್ರವನ್ನು ನೀಡಲು ಜುಲೈ.10 ರಂದು ಕೊನೆಯ ದಿನವಾಗಿರುತ್ತದೆ ಎಂದು ಹಿಂದಿ ಪ್ರಬಂಧಕ ಚಿದಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.