HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ತಿರಸ್ಕಾರ ಹಿನ್ನೆಲೆಡಾ. ಯು.ಪಿ. ಶಿವಾನಂದರಿಂದ ಚುನಾವಣಾ ಆಯೋಗಕ್ಕೆ ಮೇಲ್ಮನವಿ

ಅಮೇಠಿಯಲ್ಲಿ ಬಿಜೆಪಿ ಸಭೆಯಲ್ಲಿ ಭಾಗವಹಿಸಿ , ಅಲ್ಲಿದ್ದ ಕೆಲವರೊಂದಿಗೆ  ಮಾತನಾಡಿ ಹೊರಬರುತ್ತಿರುವ ಡಾ| ಶಿವಾನಂದ ತಂಡ 

ಅಮೇಠಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಡಾ. ಯು.ಪಿ. ಶಿವಾನಂದ ತಂಡ

ಬೆಳ್ತಂಗಡಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪರ್ಧಿಸುತ್ತಿರುವ ಉತ್ತರಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿದ್ದ ತನ್ನ ನಾಮಪತ್ರವನ್ನು ತಿರಸ್ಕೃತಗೊಳಿಸಿರುವ ಚುನಾವಣಾಧಿಕಾರಿಯವರ ಕ್ರಮವನ್ನು ಪ್ರಶ್ನಿಸಿ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕ ಡಾ. ಯು.ಪಿ. ಶಿವಾನಂದರವರು ರಾಷ್ಟ್ರೀಯ ಚುನಾವಣಾ ಆಯೋಗ ಮತ್ತು ವಾರಣಾಸಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯವರಿಗೆ ಮೇಲ್ಮನವಿ ಸಲ್ಲಿಸಿದ್ದಾರೆ.
`ಆಡಳಿತವು ದೆಲ್ಲಿಯಿಂದ ಹಳ್ಳಿಗೆ ಅಲ್ಲ, ಹಳ್ಳಿಯಿಂದ ದೆಲ್ಲಿಗೆ ಆಡಳಿತ’ ಎಂಬಂತಾಗಬೇಕೆಂಬುದೂ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆಯ ಕಣಕ್ಕಿಳಿದಿರುವ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರೂ ಆಗಿರುವ ಡಾ.ಯು.ಪಿ. ಶಿವಾನಂದರವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸ್ಪರ್ಧಿಸುತ್ತಿರುವ ಅಮೇಠಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪರ್ಧಿಸುತ್ತಿರುವ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಅಮೇಠಿಯಲ್ಲಿ ಡಾ. ಯು.ಪಿ. ಶಿವಾನಂದರವರ ನಾಮಪತ್ರ ಅಂಗೀಕೃತವಾಗಿದ್ದು ವಾರಣಾಸಿಯಲ್ಲಿ ಇವರ ನಾಮಪತ್ರವನ್ನು ತಿರಸ್ಕೃತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡಾ. ಯು.ಪಿ. ಶಿವಾನಂದರವರು ದೆಹಲಿಯಲ್ಲಿರುವ ರಾಷ್ಟ್ರೀಯ ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಮತ್ತು ವಾರಣಾಸಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯವರಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. `ತಾನು ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಸಲ್ಲಿಸಿರುವ ನಾಮಪತ್ರ ಅಂಗೀಕೃತಗೊಂಡಿದೆ. ಅದೇ ಮಾನದಂಡವನ್ನು ಅನುಸರಿಸಿ ಸಲ್ಲಿಕೆ ಮಾಡಿರುವ ನಾಮಪತ್ರವನ್ನು ವಾರಣಾಸಿ ಕ್ಷೇತ್ರದ ಚುನಾವಣಾಧಿಕಾರಿಯವರು ತಿರಸ್ಕೃತಗೊಳಿಸಿದ್ದಾರೆ. ಚುನಾವಣಾಧಿಕಾರಿಯವರು ನಾಮಪತ್ರ ತಿರಸ್ಕರಿಸಲು ಕೈಗೊಂಡ ಕ್ರಮ ಸರಿಯಾದುದಲ್ಲ, ಆದ್ದರಿಂದ ಈ ಬಗ್ಗೆ ಪರಿಶೀಲನೆ ನಡೆಸಿ ನ್ಯಾಯ ಒದಗಿಸಿಕೊಡಬೇಕು’ ಎಂದು ಮೇಲ್ಮನವಿಯಲ್ಲಿ ಒತ್ತಾಯಿಸಲಾಗಿದೆ.

102 ನಾಮಪತ್ರಗಳ ಪೈಕಿ 71 ತಿರಸ್ಕೃತ!
ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಸಲ್ಲಿಕೆಯಾಗಿದ್ದ 102 ಅಭ್ಯರ್ಥಿಗಳ ನಾಮಪತ್ರಗಳ ಪೈಕಿ ಚುನಾವಣಾಧಿಕಾರಿಯವರು 71 ನಾಮಪತ್ರಗಳನ್ನು ತಿರಸ್ಕೃತಗೊಳಿಸಿದ್ದಾರೆ. ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಸೈನಿಕ ತೇಜ್ ಬಹದ್ದರೂ, ಪ್ರಮುಖ ಮಠಗಳ ಮಠಾಧೀಶರು ಸೇರಿದಂತೆ ಬರೋಬ್ಬರಿ 71 ನಾಮಪತ್ರಗಳನ್ನು ತಿರಸ್ಕೃತಗೊಳಿಸಿರುವ ಚುನಾವಣಾಧಿಕಾರಿಯವರ ಕ್ರಮ ಅಚ್ಚರಿಗೊಳಿಸಿದೆ.

ಡಾ. ಶಿವಾನಂದರ ತಂಡ ಅಮೇಠಿಯಲ್ಲಿ ಪ್ರಚಾರ
ಬಲಾತ್ಕಾರದ ಬಂದ್, ಭ್ರಷ್ಟಾಚಾರ, ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧ ಮತ್ತು ಮಹಾತ್ಮಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕಲ್ಪನೆಯಂತೆ `ಆಡಳಿತವು ದೆಲ್ಲಿಯಿಂದ ಹಳ್ಳಿಗೆ ಎಂಬಂತಾಗದೆ ಹಳ್ಳಿಯಿಂದ ದೆಲ್ಲಿಗೆ ಆಡಳಿತ ಎಂಬಂತಾಗಬೇಕು’ ಎಂಬ ವಿಚಾರಧಾರೆಗಳನ್ನು ಮುಂದಿಟ್ಟುಕೊಂಡು ರಾಷ್ಟ್ರೀಯ ನಾಯಕರ ಎದುರು ಸ್ಪರ್ಧೆಗಿಳಿದಿರುವ ಡಾ.ಯು.ಪಿ. ಶಿವಾನಂದರವರ ತಂಡ ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸ್ಪರ್ಧಿಸುತ್ತಿರುವ ಅಮೇಠಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.