ನಾವೂರಿನಲ್ಲಿ ತಾಜುಲ್ ಹುದಾ ಎಜುಕೇಶನ್ ಟ್ರಸ್ಟ್‌ನಿಂದ ವುಮೆನ್ಸ್ ಶರೀಅತ್ ಕಾಲೇಜು ಉದ್ಘಾಟನೆ

ನಾವೂರು: ತಾಜುಲ್ ಹುದಾ ಎಜುಕೇಶನ್ ಸೆಂಟರ್ ನಾವೂರು ಇದರ ವತಿಯಿಂದ ನೂತನವಾಗಿ ಪ್ರಾರಂಭಿಸಲಾದ ಮಹಿಳಾ ಶರೀಅತ್ ಕಾಲೇಜು ಇದರ ಉದ್ಘಾಟನೆ ಕಾರ್ಯಕ್ರಮ ಮೇ. 2 ರಂದು ನಾವೂರು ತಾಜುಲ್ ಹುದಾ ಕ್ಯಾಂಪಸ್‌ನಲ್ಲಿ ನಡೆಯಿತು.
ನೂತನ ವುಮೆನ್ಸ್ ಶರೀಅತ್ ಕಾಲೇಜನ್ನು ಉಡುಪಿ ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಖಾಝಿ ಬೇಕಲ್ ಉಸ್ತಾದ್ ಉದ್ಘಾಟನೆ ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರ. ಕಾರ್ಯದರ್ಶಿ ಪಿ.ಯ ಆಲಿಕುಂಞಿ ಸಖಾಫಿ ವಹಿಸಿದ್ದರು. ಮುಖ್ಯ ಪ್ರಭಾಷಣವನ್ನು ಡಾ. ಎಂ.ಎಸ್.ಎಂ ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ನಡೆಸಿದರು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮುರ ಜಮಾಅತ್ ಖತೀಬ್ ಸಯ್ಯಿದ್ ಮುಹಮ್ಮದ್ ಇಂಬಿಚ್ಚಿಕ್ಕೋಯ ತಂಙಳ್ ಅಲ್‌ಬುಖಾರಿ ಮುರ ನಾವೂರು ನಡೆಸಿದರು. ವೇದಿಕೆಯಲ್ಲಿ ಅಯ್ಯೂಬ್ ಮಹ್‌ಳರಿ, ಯಾಕೂಬ್ ಮುಸ್ಲಿಯಾರ್ ಪಣಕಜೆ, ಸಿ.ಎಂ ಇಬ್ರಾಹಿಂ ಮುರ, ಎಮ್.ವೈ ಮುಹಮ್ಮದ್, ಡಿ.ಎಂ ಕಮಾಲ್ ಮುಸ್ಲಿಯಾರ್, ಇಬ್ರಾಹಿಂ ಕಕ್ಕಿಂಜೆ, ಇಬ್ರಾಹಿಂ ನಾವೂರು, ಅಶ್ರಫ್ ಆಲಿಕುಂಞಿ, ಶಾಫಿ ಸಖಾಫಿ ಪಟ್ಟೂರು, ಶರೀಫ್ ಸಅದಿ ಕಿಲ್ಲೂರು ಮೊದಲಾದ ಗಣ್ಯರು ಭಾಗಿಯಾಗಿದ್ದರು.
ಯಾಕೂಬ್ ಸಅದಿ ಸ್ವಾಗತಿಸಿದರು. ಅಬ್ದುಲ್ ರಝಾಕ್ ನಾವೂರು ಕಾರ್ಯಕ್ರಮ ನಿರೂಪಿಸಿದರು.
ಇಂದು ಸಂಜೆ (ಮೇ. 2)ಏರ್ವಾಡಿ ಶುಹದಾ ನೇರ್ಚೆ, ಬುರ್ದಾ ಮಜ್ಲಿಸ್
ಉದ್ಘಾಟನೆ ಪ್ರಯುಕ್ತ ಮೇ.2ರಂದು ಮಗ್‌ರಿಬ್ ನಮಾಝ್ ಬಳಿಕ ವೇದಿಕೆಯಲ್ಲಿ ಏರ್ವಾಡಿ ಶುಹದಾ ನೇರ್ಚೆ, ಏರ್ವಾಡಿ ಸಂಘದವರಿಂದ ಬೃಹತ್ ಬುರ್ದಾ ಮಜ್ಲಿಸ್ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.