ಪಟ್ಟೂರು ಶ್ರೀರಾಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿ ಚಂದ್ರಶೇಖರ ಶೇಟ್

ಪಟ್ಟೂರು : ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಂಗ ಸಂಸ್ಥೆ ಆಗಿರುವ ಶ್ರೀ ವಿಷ್ಣುಮೂರ್ತಿ ಅ ಹಿ ಪ್ರಾ. ಶಾಲೆ ಪಟ್ಟೂರು ಇದರ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದ  ಚಂದ್ರಶೇಖರ ಶೇಟ್ ಇವರನ್ನು ಶ್ರೀರಾಮ ಪ್ರೌಢ ಶಾಲೆ ಪಟ್ಟೂರು ಇದರ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡಿದ್ದು, ಇವರ  ಅಧಿಕಾರ ಸ್ವೀಕಾರ‌ ಕಾರ್ಯಕ್ರಮವು  ‌ ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರು ಇಲ್ಲಿ ನಡೆಯಿತು. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ  ಕೆ. ಕೃಷ್ಣ ಭಟ್, ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರ್ ನ ಅಧ್ಯಕ್ಷ  ಎನ್. ಅರವಿಂದ ಕುಡ್ವ ಹಾಗೂ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ದೇರಾಜೆ ಇವರು ದೀಪ ಪ್ರಧಾನ ಮಾಡುವುದರ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಈ  ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಭಾಸ್ಕರ ಬಿ., ಶೈಕ್ಷಣಿಕ ಪರಿವೀಕ್ಷಕರಾದ   ರಘುರಾಜ್ ಉಬರಡ್ಕ, ವಿದ್ಯಾಸಂಸ್ಥೆ ಆಡಳಿತ ಸಮಿತಿ ಸದಸ್ಯರು, ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.