ಎಸ್ಸೆಸ್ಸೆಲ್ಸಿ ತಾಲೂಕಿಗೆ ಶೇ.91.67: ದ.ಕ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕಿಗೆ ಪ್ರಥಮ ಸ್ಥಾನ,

Advt_NewsUnder_1
Advt_NewsUnder_1
Advt_NewsUnder_1

21 ಶಾಲೆಗಳಿಗೆ ಶೇ 100, 288 ವಿದ್ಯಾರ್ಥಿಗಳಿಗೆ ಎ+, 21 ಶಾಲೆಗಳಿಗೆ ಶೇ.100 ಫಲಿತಾಂಶ

ಈ ಬಾರಿಯ ಪಬ್ಲೀಕ್ ಪರೀಕ್ಷೆಯಲ್ಲಿ 5 ಸರಕಾರಿ ಶಾಲೆಗಳು ಶೇ. 100 ಫಲಿತಾಂಶ ಪಡೆದು ದಾಖಲೆಯನ್ನು ನಿರ್ಮಿಸಿದರೆ, 1 ಅನುದಾನಿತ ಹಾಗೂ 15 ಅನುದಾನ ರಹಿತ ಪ್ರೌಢ ಶಾಲೆಗಳು ಶೇ. 100 ಫಲಿತಾಂಶ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.

288ವಿದ್ಯಾರ್ಥಿಗಳಿಗೆ ಎ+ ಶ್ರೇಣಿ
ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ 3180ವಿದ್ಯಾರ್ಥಿಗಳಲ್ಲಿ 288 ವಿದ್ಯಾರ್ಥಿಗಳು ಎ+ ಶ್ರೇಣಿ,788ವಿದ್ಯಾರ್ಥಿಗಳು ಎ ಶ್ರೇಣಿ ಪಡೆದುಕೊಂಡಿದ್ದಾರೆ. 899 ವಿದ್ಯಾರ್ಥಿಗಳು ಬಿ+, 785 ಬಿ ಶ್ರೇಣಿ ಪಡೆದಿದ್ದಾರೆ. 369 ವಿದ್ಯಾರ್ಥಿಗಳು ಸಿ+ ಮತ್ತು 51 ವಿದ್ಯಾರ್ಥಿಗಳು ಸಿ ಗ್ರೇಡ್‌ನಲ್ಲಿ ಉತ್ತೀರ್ಣರಾಗಿದ್ದಾರೆ.

ಬೆಳ್ತಂಗಡಿ : 2018-19ನೇ ಸಾಲಿನ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಮೇ 1 ರಂದು ಎಲ್ಲಾ ಶಾಲೆಗಳಲ್ಲಿ ಪ್ರಕಟಗೊಂಡಿದ್ದು, ಬೆಳ್ತಂಗಡಿ ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸೇರಿದಂತೆ ಒಟ್ಟು 69 ಪ್ರೌಢ ಶಾಲೆಗಳಿಂದ ಪರೀಕ್ಷೆಗೆ ಹಾಜರಾದ 3469 ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ 3180 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಬೆಳ್ತಂಗಡಿ ತಾಲೂಕು ಶೇ. 91.67 ದಾಖಲೆಯ ಫಲಿತಾಂಶ ಪಡೆಯುವುದರೊಂದಿಗೆ ದ.ಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಕಳೆದ ಸಾಲಿನಲ್ಲಿ ತಾಲೂಕಿಗೆ ಶೇ 88.81 ಫಲಿತಾಂಶ ದೊರಕಿದ್ದು, ದ.ಕ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿತ್ತು. ಕಳೆದ ಸಾಲಿಗೆ ಹೋಲಿಸಿದರೆ, ಫಲಿತಾಂಶದಲ್ಲಿ ಶೇ 2.83 ಏರಿಕೆಯಾಗುವುದರೊಂದಿಗೆ ದ.ಕ ಜಿಲ್ಲೆಯಲ್ಲಿ ಫಲಿತಾಂಶದಲ್ಲಿ ಪ್ರಥಮ ಸ್ಥಾನಕ್ಕೆ ಏರಿದೆ. ಪರಿಕ್ಷೆಗೆ 1709 ವಿದ್ಯಾರ್ಥಿಗಳು ಹಾಗೂ 1760 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 3469 ವಿದ್ಯಾರ್ಥಿಗಳು ಹಾಜರಾಗಿ ದ್ದರು. ಇವರಲ್ಲಿ 1548  ವಿದ್ಯಾರ್ಥಿಗಳು ಹಾಗೂ 1632 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 3180 ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದಾರೆ.

ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. 21 ಶಾಲೆಗಳಿಗೆ ಶೇ. 100 ಫಲಿತಾಂಶ ತಾಲೂಕಿನ ಸರಕಾರಿ ಪ್ರೌಢ ಶಾಲೆ ನಮ್ಮೂರ ಪ್ರೌಢ ಶಾಲೆ ಗುರುವಾಯನಕೆರೆ ಸತತ 8ನೇ ಬಾರಿಗೆ ಶೇ 100 ಫಲಿತಾಂಶ ಪಡೆದ ದಾಖಲೆಯನ್ನು ನಿರ್ಮಿಸಿದೆ. ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸತತ 9ನೇ ಬಾರಿಗೆ ಶೇ 100 ಫಲಿತಾಂಶ ಪಡೆದು ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದೆ. ಉಳಿದಂತೆ ಸರಕಾರಿ ಪ್ರೌಢ ಶಾಲೆ ನೇಲ್ಯಡ್ಕ ರೆಖ್ಯ, ಸರಕಾರಿ ಪ್ರೌಢ ಶಾಲೆ ಕಾಜೂರು ಮಿತ್ತಬಾಗಿಲು, ಸರಕಾರಿ ಪ್ರೌಢ ಶಾಲೆ ಸರಳಿಕಟ್ಟೆ ತೆಕ್ಕಾರು ಶೇ. 100 ಫಲಿತಾಂಶ ಪಡೆದ ಸರಕಾರಿ ಶಾಲೆಗಳಾಗಿವೆ. ಅನುದಾನಿತ ಶಾಲೆಯಲ್ಲಿ ಸಂತ ತೋಮಸ್ ಪ್ರೌಢ ಶಾಲೆ ನೆರಿಯ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಕುಂಭ ಶ್ರೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ನಿಟ್ಟಡೆ, ಗುಡ್‌ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಪಿಲ್ಯ, ಸೈಂಟ್ ಮೇರಿಸ್ ಆಂ. ಮಾ. ಶಾಲೆ ಲಾಲ, ವಾಣಿ ಆಂ. ಮಾಧ್ಯಮ ಶಾಲೆ ಹಳೆಕೋಟೆ ಬೆಳ್ತಂಗಡಿ, ಸೈಂಟ್ ಸಾವಿಯೋ ಆಂ. ಮಾ. ಶಾಲೆ ಬೆಂದ್ರಾಳ ತೋಟತ್ತಾಡಿ, ಸೇ.ಹಾ. ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಮಡಂತ್ಯಾರು, ರಹ್ಮಾನಿಯ ಪ್ರೌಢ ಶಾಲೆ ಕಾಜೂರು, ಎಸ್.ಡಿ.ಎಂ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಧರ್ಮಸ್ಥಳ, ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕಾಯರ್ತಡ್ಕ, ಕಾರುಣ್ಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಚಿಬಿದ್ರೆ, ಸೈಂಟ್ ಪೌಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ನಾರಾವಿ, ವಿದ್ಯೋದಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವೇಣೂರು, ಎಸ್.ಡಿ.ಎಂ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬೆಳ್ತಂಗಡಿ, ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಉರುವಾಲು, ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕೊಕ್ಕಡ ಶೇ. 100 ಫಲಿತಾಂಶ ಪಡೆದುಕೊಂಡು ದಾಖಲೆ ಬರೆದಿದೆ.

ಜ್ಯೋತಿಕಾ ಪ್ರಥಮ-ನೀತು ಮೆರಿನ್ ಸಜಿತ್ ದ್ವಿತೀಯ :ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಜ್ಯೋತಿಕಾ ಎನ್. ಪೂಜಾರಿ ಅವರು 622ಅಂಕಗಳನ್ನು ಪಡೆದು ಈ ಬಾರಿ ಅಂಕಗಳಿಸುವಿಕೆಯಲ್ಲಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದು ದಾಖಲೆಯನ್ನು ನಿರ್ಮಿಸಿದ್ದಾರೆ. ಇದೇ ಶಾಲೆಯ ವಿದ್ಯಾರ್ಥಿನಿ ನೀತು ಮೆರಿನ್ ಸಜಿತ್ 621 ಅಂಕ ಹಾಗೂ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಉಜಿರೆಯ ವಿದ್ಯಾರ್ಥಿ ವಿಕ್ರಮ್ ಶೆಟ್ಟಿ621 ಅಂಕ ಗಳಿಸಿ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ. ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದ ಆದಿತ್ಯ ಕುಮಾರ್620 ಅಂಕಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಾಣಿ ಆಂಗ್ಲ ಮಾಧ್ಯಮ ಶಾಲೆ ಶ್ರುತ ಜೆ. ಶೆಟ್ಟಿ 619 ತೃತೀಯ, ಇದೇ ಶಾಲೆಯ ರಕ್ಷಿತಾ ಎಂ 618 ಚತುರ್ಥ ಹಾಗೂ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ ಉಜಿರೆಯ ಕೃಷ್ಣ ತೇಜಸ್ವಿ 617 ಅಂಕ ಗಳಿಸಿ ಐದನೇ ಸ್ಥಾನ ಗಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.