ಧರ್ಮಸ್ಥಳದಲ್ಲಿ 48ನೇ ವರ್ಷದ ಉಚಿತ ಸಾಮೂಹಿಕ ವಿವಾಹ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

102 ಜೋಡಿ ಸತಿ-ಪತಿಗಳಾಗಿ ಗೃಹಸ್ಥಾಶ್ರಮಕ್ಕೆ

 

ಧರ್ಮಸ್ಥಳ: ನಾಡಿನ ಪುಣ್ಯ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ. 1 ರಂದು ಸಂಜೆ6.48ರ ಗೋಧೂಳಿ ಲಗ್ನ ಸುಮೂಹೂರ್ತದಲ್ಲಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ವೇದಘೋಷ ಮಂತ್ರ ಪಠಣದೊಂದಿಗೆ ನಡೆದ 48ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 102  ಜೋಡಿ ಸತಿ-ಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ಬೆಳಿಗ್ಗೆ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಕಣ ವಿತರಿಸಿದರು. ಸಂಜೆ ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾ ಭವನಕ್ಕೆ ಭವ್ಯ ಮೆರವಣಿಗೆಯಲ್ಲಿ ಆಗಮಿಸಿದರು.

ಅಲ್ಲಿ ಡಾ. ಹೆಗ್ಗಡೆ ದಂಪತಿ, ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಕೆ ಹರೀಶ್ ಕುಮಾರ್, ಕನ್ನಡದ ಖ್ಯಾತ ಚಲನ ಚಿತ್ರನಟ ಡಾ. ಶಿವರಾಜ್‌ಕುಮಾರ್, ಹೇಮಾವತಿ ವಿ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಡಿ. ಸುರೇಂದ್ರ ಕುಮಾರ್ ಮತ್ತು ಅತಿಥಿಗಣ್ಯರು ವಧುವಿಗೆ ಮಂಗಳ ಸೂತ್ರ ವಿತರಿಸಿದರು. ವಿಭಿನ್ನ ಸಂಸ್ಕೃತಿ ಸಂಸ್ಕಾರ, ಕಟ್ಟುಕಟ್ಟಳೆ ಇರುವ ಬೇರೆ ಬೇರೆ ಜೋಡಿಗಳಿಗೆ ಅವರವರ ಧರ್ಮ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ಪೂರೈಸಲು ಅವಕಾಶ ಮಾಡಿಕೊಡಲಾಗಿದ್ದು ಅಂತೆಯೇ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಧು-ವರರು ಗೃಹಸ್ಥಾಶ್ರಮಕ್ಕೆ ಪ್ರವೇಶಿಸಿದರು. ಆ ಬಳಿಕ ವಧುವರರು ಶ್ರೀ ಮಂಜುನಾಥ ಸ್ವಾಮಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮತ್ತು ದಾಂಪತ್ಯ ದೀಕ್ಷೆ ಸ್ವೀಕರಿಸಿದರು. ಈ ವರ್ಷ 102 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುವುದರ ಜೊತೆಗೆ ಶ್ರೀ ಕ್ಷೇತ್ರದ ಧರ್ಮೋತ್ಥಾನ ಟ್ರಸ್ಟ್ ಮೂಲಕ ಆಯೋಜನೆಯಾಗುವ ಈ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಇದುವರೆಗೆ ಒಟ್ಟು 12262 ಜೋಡಿಗಳು ಸರಳ ಸಾಮೂಹಿಕ ವಿವಾಹವಾದಂತಾಗಿದೆ.

ಉಪಸ್ಥಿತಿ: ಶಾಸಕ ಹರೀಶ್ ಪೂಂಜ ಶುಭಹಾರೈಸಿದರು. ವೇದಿಕೆಯಲ್ಲಿ ಅತಿಥಿಗಳ ಜೊತೆಗೆ ಸಮಾರಂಭದಲ್ಲಿ ಮಾಜಿ ಸಚಿವ ಅಭಯ ಚಂದ್ರ ಜೈನ್, ಚಲನಚಿತ್ರ ನಿರ್ದೇಶಕ ಚೆನ್ನೇಗೌಡ ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್,ಕರ್ನಾಟಕ ಮುಸ್ಲಿಂ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ಕರ್ನಾಟಕ ಸರಕಾರದ ಜಲಸಂಪನ್ಮೂಲ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಆಂದ್ರಪ್ರದೇಶ ಸರಕಾರದ ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಿರಿಜಾ ಶಂಕರ್ ಮೊದಲಾದವರು ಉಪಸ್ಥಿತರಿದ್ದರು. ಕು. ಶಮಿತಾ ಇವರ ಪ್ರಾರ್ಥನೆ ಬಳಿಕ ಜಯಶಂಕರ್ ಶರ್ಮ ಸ್ವಾಗತಿಸಿದರು. ದೀಕ್ಷಿತ್ ರೈ ಕಾರ್ಯಕ್ರಮ ನಿರೂಪಿಸಿ, ಪಿ ಸುಬ್ರಹ್ಮಣ್ಯ ರಾವ್ ಧನ್ಯವಾದವಿತ್ತರು.

ವಿವಿಧ ಜಿಲ್ಲೆಯವರು: ಬೆಳ್ತಂಗಡಿ ತಾಲೂಕಿನಿಂದ 5, ಪುತ್ತೂರು 5, ಬಂಟ್ವಾಳ 5, ಸುಳ್ಯ 5, ಉಡುಪಿ ಜಿಲ್ಲೆಯಿಂದ 18, ಚಿಕ್ಕಮಗಳೂರು7, ಶಿವಮೊಗ್ಗ 11, ಹಾಸನ 6, ಬೆಂಗಳೂರು 4, ಮೈಸೂರು 5, ಹಾವೇರಿ 2, ದಾವಣಗೆರೆ 2, ಕೊಡಗು 4, ಧಾರವಾಡ1, ಉತ್ತರಕನ್ನಡ 6, ಚಿತ್ರದುರ್ಗ 3, ಮಂಡ್ಯ 4, ರಾಮನಗರ 2, ಚಾಮರಾಜನಗರ 3, ವಿಜಯಪುರ 1, ತುಮಕೂರು 6, ಗದಗ 1, ಕೋಲಾರ 1, ಬಾಗಲಕೋಟೆ 1, ಕೇರಳ ರಾಜ್ಯದಿಂದ 1 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಸತಿ ಪತಿಗಳಾಗಿದ್ದಾರೆ.

ವಿವಿಧ ವೃತ್ತಿಯವರು: ಈ ಬಾರಿ 35 ಮಂದಿ ಕೂಲಿ, 15 ಮಂದಿ ಬೇಸಾಯ, 10 ಮಂದಿ ವ್ಯಾಪಾರ, 8 ಮಂದಿ ಚಾಲಕರು, 27 ಮಂದಿ ಖಾಸಗಿ ಉದ್ಯೋಗ, 3 ಮಂದಿ ಮರದ ಕೆಲಸ, 2 ಮೀನುಗಾರಿಕೆ, 2 ವ್ಯಾಸಂಗ ಸೇರಿದಂತೆ ವಿವಿಧ ವೃತ್ತಿಯವರು ವಿವಾಹ ಬಂಧನಕ್ಕೆ ಒಳಗಾದರು.

19 ಜೋಡಿ ಅಂತರ್ಜಾತಿ ವಿವಾಹ:
ಮದುವೆಯಾದ 102 ಜೋಡಿಗಳಲ್ಲಿ 19 ಜೋಡಿ ಅಂತರ್ಜಾತಿ ವಿವಾಹಕ್ಕೆ ಇಡೀ ಸಭೆ ಸಾಕ್ಷಿಯಾಯಿತು.
ಉಳಿದಂತೆ ಪ.ಜಾತಿ 20, ಮರಾಠಿ ನಾಯ್ಕ 9, ಒಕ್ಕಲಿಗ ಗೌಡ 6, ಗೌಡರು5, ಪೂಜಾರಿ 5, ವೀರಶೈವ 5, ವಿಶ್ವಕರ್ಮರು 4, ಮಲೆಕುಡಿಯ 3, ಮೊಗೇರ, ಖಾರ್ವಿ, ತಿಗಲರು, ಕುಂಬಾರ, ಕೊರಗ ಮತ್ತು ಪರಿಶಿಷ್ಟ ವರ್ಗ ತಲಾ 2 ಜೋಡಿಗಳು, ವೈಷ್ಣವ, ಮಡಿವಾಳ, ಭಂಡಾರಿ, ವಾಲ್ಮೀಕಿ, ಮೊಗವೀರ, ಕುಡುಬಿ, ಲಂಬಾಣಿ, ಪರವ, ರಾಣೆ ಭೈರ, ನಾಯಕರು, ನಲಿಕೆಯವರು, ಬೋವಿ ಜನಾಂಗ ಇವಿಷ್ಟು ತಲಾ 1 ಜೊತೆ ವಿವಾಹ ನಡೆಯಿತು.

ಧರ್ಮಸ್ಥಳದಿಂದ ಧಾರ್ಮಿಕ ಪರಂಪರೆಗೇ ಹೊಸ ತಿರುವು: ಆರೋಗ್ಯ ಸಚಿವ ಶಿವಾನಂದ

ಪಾಟೀಲ್ ಇಂದು ಎಲ್ಲಾ ಕಾರ್ಯಕ್ರಮಗಳು ಒಂದು ಜಾತಿ ಧರ್ಮ, ಪಂಥಕ್ಕೆ ಸೀಮಿತವಾಗುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಎಲ್ಲಾ ಜಾತಿ, ಧರ್ಮ, ಮತದವರನ್ನು ಒಗ್ಗೂಡಿಸುವ ಡಾ. ಹೆಗ್ಗಡೆಯವರು ಧಾರ್ಮಿಕ ಪರಂಪರೆಗೇ ಹೊಸ ತಿರುವು ನೀಡುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಮದುವೆಯಲ್ಲಿ ದುಂದುವೆಚ್ಚ ಕಡಿಮೆ ಮಾಡಬೇಕು ಎಂಬುದು ಸರಕಾರದ ಉದ್ದೇಶವಾಗಿದೆ. ಧಾರ್ಮಿಕ ಪರಂಪರೆಯನ್ನು ಕಾಪಾಡುವುದು ಮದುವೆಯಲ್ಲಿ ಕಡಿಮೆಯಾಗಿದೆ. ಆದರೆ ಧರ್ಮಸ್ಥಳ ಸಾಮೂಹಿಕ ವಿವಾಹದಲ್ಲಿ ಧಾರ್ಮಿಕ ಪರಂಪರೆಯನ್ನು ಕಾಣಬಹುದು. 47 ವರ್ಷ ವಿವಾಹ ಸಮಾರಂಭದಲ್ಲಿ ಹೊಸಗತವೈಭವ ಮೇಳೈಸಿದೆ ಎಂದು ತಿಳಿಸಿದರು.

ಚಿಗುರು ಚಿತ್ರದ ಚಿತ್ರೀಕರಣಕ್ಕಾಗಿ 39 ದಿನ ಶ್ರೀ ಕ್ಷೇತ್ರದಲ್ಲಿದ್ದೆ: ಶಿವರಾಜ್ ಕುಮಾರ್
ಹಿಂದೆ ಸಾಮೂಹಿಕ ವಿವಾಹ ಮಹಾಕಾರ್ಯದಲ್ಲಿ ನನ್ನ ಅಪ್ಪಾಜಿ ಡಾ. ರಾಜ್‌ಕುಮಾರ್ ಅವರು ಶ್ರೀ ಕ್ಷೇತ್ರದಿಂದ ಆಹ್ವಾನಿಸಲ್ಪಟ್ಟಿದ್ದರು. ಇದೀಗ 48 ನೆ ವರ್ಷದ ಸಾಮೂಹಿಕ ವಿವಾಹ ಸಮಾರಂಭಕ್ಕೆ ಬರುವ ಆ ಮಹಾಭಾಗ್ಯ ನನ್ನ ಪಾಲಿಗೂ ದೊರೆತಿದೆ. ಶ್ರೀ ಕ್ಷೇತ್ರದಿಂದ ನಡೆಯುತ್ತಿರುವ ಧಾರ್ಮಿಕ ಸಾಮಾಜಿಕ ಸೇವೆ ಅನನ್ಯವಾದುದು. ಹಿಂದೆ ಚಿಗುರು ಚಲನಚಿತ್ರ ಚಿತ್ರೀಕರಣದ ವೇಳೆ 39 ದಿನ ಶ್ರೀ ಕ್ಷೇತ್ರದಲ್ಲಿದ್ದೆ.

12261 ನೇ ವಿಶೇಷ ಜೋಡಿ ಗ್ರಾ. ಯೋಜನೆ ಸಿಬ್ಬಂದಿ ಜೋಡಿ
ಈ ಬಾರಿಯ ವಿವಾಹ ಸಮಾರಂಭದಲ್ಲಿ 12261 ನೇ ವಿಶೇಷ ಜೋಡಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾ. ಯೋಜನೆಯ ಚಾಮರಾಜನಗರ ಮೇಲ್ವಿಚಾರಕ, ಮೈಸೂರಿನ ಟಿ ನರಸೀಪುರ ನಿವಾಸಿ ಸತೀಶ್ ಆರ್ ಮತ್ತು ಚಾಮರಾಜನಗರ ಕಚೇರಿಯ ನಗದು ಸಹಾಯಕಿ ಸಿಂಧು ಜಿ ಅವರು ವಿಶೇಷ ಮನ್ನಣೆಗೆ ಪಾತ್ರರಾಗಿದ್ದರು. ಅವರನ್ನು ವೇದಿಕೆಯ ಕೆಳಭಾಗದಲ್ಲಿ ಪ್ರತ್ಯೇಕ ವೇದಿಕೆ ನಿರ್ಮಿಸಿ ಅದರಲ್ಲಿ ಆಸೀನರಾಗುವಂತೆ ವ್ಯವಸ್ಥೆ ಮಾಡಲಾಗಿದ್ದು ಅವರು ಅಪೂರ್ವ ಜೋಡಿಗಳಾಗಿ ಎಲ್ಲರ ಗಮನಸೆಳೆದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.