HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

“ಮಿಸ್ಟರ್ ಏಂಡ್ ಮಿಸ್ ಸೌತ್ ಇಂಡಿಯಾ” ಸ್ಪರ್ಧೆಯಲ್ಲಿ ಅಣಿಯೂರಿನ ಲಾವಣ್ಯ  ಎನ್ ರಿಗೆ 3 ವಿಭಾಗಗಳಲ್ಲಿ ವಿಶೇಷ ಮನ್ನಣೆ

ನೆರಿಯ: ರನೈ ಕಂಪೆನಿ ಹಮ್ಮಿಕೊಂಡಿರುವ ದಕ್ಷಿಣ ಭಾರತ ಮಟ್ಟದ ಮಿಸ್ಟರ್ ಏಂಡ್ ಮಿಸ್ ಸೌತ್ ಇಂಡಿಯಾ-2019ಗ್ರಾಂಡ್ ಫಿನಾಲೆಯಲ್ಲಿ ಬೆಳ್ತಂಗಡಿ ತಾಲೂಕು ಅಣಿಯೂರಿನ ಲಾವಣ್ಯ ಎನ್ ಅವರು 3ವಿಭಾಗಗಳಲ್ಲಿ 3 ಟೈಟಲ್‌ಗಳನ್ನು ತಮ್ಮದಾಗಿಸಿಕೊಂಡು, ವಿಶೇಷ ಮನ್ನಣೆಗೆ ಪಾತ್ರರಾಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ರನೈ ಕಂಪೆನಿ ಏ. 20 ರಂದು ಹಾಸನದಲ್ಲಿ ಹಮ್ಮಿಕೊಂಡಿದ್ದ3 ಹಂತದ ಮಿಸ್ಟರ್ ಏಂಡ್ ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ರಾಜ್ಯಗಳಿಂದ ಭಾಗಿಯಾಗಿದ್ದ 35 ಸ್ಪರ್ಧಿಗಳಲ್ಲಿ ಲಾವಣ್ಯಾ ಎನ್ ಅತ್ಯುತ್ಕೃಷ್ಟ ಸ್ಪರ್ಧೆ ನೀಡಿದ್ದಾರೆ.
ಇದಕ್ಕೂ ಮುನ್ನ ಅವರು ಏ. 18 ಮತ್ತು 19 ರಂದು ಕಂಪೆನಿ ನಡೆಸಿದ ವಿವಿಧ ಮಟ್ಟದ ಪೂರ್ವ ಸಿದ್ಧತಾ ಸುತ್ತಿನಲ್ಲಿ ಅಂತಾರಾಷ್ಟ್ರೀಯ ತೀರ್ಪುಗಾರರ ವಿಶೇಷ ಆಕರ್ಷಣೆಗೆ ಪಾತ್ರರಾಗಿದ್ದರು. ಕೊನೆಯದಾಗಿ ಲಾವಣ್ಯಾ ಅವರು ಈ ಸ್ಪರ್ಧೆಯಲ್ಲಿ “ರನೈ ಮಿಸ್ ಬೆಸ್ಟ್ ಗ್ಲಾಮರಸ್ ಲುಕ್ ಆಫ್ ಸೌತ್ ಇಂಡಿಯಾ-2019”, “ರನೈ ಮಿಸ್ ಫ್ಯಾಶನ್ ಐಕೋನ್ ಸೌತ್ ಇಂಡಿಯಾ-2019” ಮತ್ತು “ರನೈ ಮಿಸ್ ರೈಸಿಂಗ್ ಸ್ಟಾರ್ ಸೌತ್ ಇಂಡಿಯಾ-2019” ಎಂಬ 3 ಟೈಟಲ್‌ಗಳನ್ನು ಪಡೆದುಕೊಂಡಿದ್ದಾರೆ.
ಲಾವಣ್ಯ  ಅವರು ನೆರಿಯ ಗ್ರಾಮದ ಮಾಜಿ ಮಂಡಲ ಪ್ರಧಾನ, ಪ್ರಗತಿಪರ ಕೃಷಿಕ ನಂದಕುಮಾರ್ ಮತ್ತು ಎಸ್‌ಕೆಡಿಆರ್‌ಡಿಪಿ ನೆರಿಯ ವಿಭಾಗದ ಸೇವಾ ಪ್ರತಿನಿಧಿಯಾಗಿರುವ ಸುನಂದಾ ದಂಪತಿ ಪುತ್ರಿಯಾಗಿದ್ದಾರೆ. ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಬಿಬಿಎಮ್ ಪದವಿ ಮುಗಿಸಿರುವ ಅವರು ಪ್ರಸ್ತುತ ಬೆಂಗಳೂರಿನಲ್ಲಿ ಗಗನಸಖಿ ತರಬೇತಿ ಸಂಸ್ಥೆಯಲ್ಲಿ ಅಭ್ಯಾಸ ಮುಂದುವರಿಸಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.