ಪ್ಲಾನೆಟ್ ಮೊಬೈಲ್ & ಮ್ಯೂಸಿಕ್ ಶುಭಾರಂಭ

ಉಜಿರೆ: ಇಲ್ಲಿನ ಕಾಲೇಜು ರಸ್ತೆ ಬಳಿ ವಿಸ್ತೃತಗೊಂಡು ಶುಭಾರಂಭವಾಗಿರುವಪ್ಲಾನೆಟ್ ಮೊಬೈಲ್ & ಮ್ಯೂಸಿಕ್’ ಎ.19 ರಂದು ಉದ್ಘಾಟನೆಗೊಂಡಿತು.
ನೂತನ ಮಳಿಗೆಯನ್ನು ಉಜಿರೆ ಎಸ್.ಡಿ.ಎಂ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಪ್ರೊ| ಪ್ರಭಾಕರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಉಜಿರೆ ರಬ್ಬರ್ ಸೊಸೈಟಿ ಕಾರ್ಯದರ್ಶಿ ರಾಜು ಶೆಟ್ಟಿ, ಉಜಿರೆ ಗಣೇಶ್ ಕಾಂಪ್ಲೆಕ್ಸ್ ಮಾಲಕ ರಾಜೇಂದ್ರ ಶೆಣೈ, ಬೆಳ್ತಂಗಡಿ ಬಿ.ಎ ಮೊಬೈಲ್ ಮಾಲಕ ಅಬ್ಸಾಲಿ, ಲ| ಎಂ.ಜಿ ಶೆಟ್ಟಿ, ಸಪ್ನಾ ಹೊಟೇಲ್ ಮಾಲಕ ಚಿತ್ರೇಶ್ ಶೆಟ್ಟಿ, ಉದ್ಯಮಿ ಹರೀಶ್ ರಾವ್, ಏರ್‌ಟೆಲ್ ಏರಿಯ ಮ್ಯಾನೇಜರ್ ಕಿರಣ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಬಂದಂತಹ ಅತಿಥಿಗಳನ್ನು ಮಾಲಕರಾದ ಚಿದಾನಂದ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
ನಮ್ಮಲ್ಲಿ ಎಲ್ಲಾ ಕಂಪನಿಯ ಮೊಬೈಲ್‌ಗಳು, ಮಾರಾಟ ಹಾಗೂ ಬಿಡಿಭಾಗಗಳ ರಿಪೇರಿ ಹಾಗೂ ಎಲ್ಲಾ ಕಂಪೆನಿಯ ರೀಚಾರ್ಜ್ ನಮ್ಮಲ್ಲಿ ಲಭ್ಯ. ಗ್ರಾಹಕರ ಅನುಕೂಲಕ್ಕಾಗಿ ನಮ್ಮಲ್ಲಿ ಟಿ.ವಿ.ಎಸ್, ಬಜಾಜ್, ಹೆಚ್.ಡಿ.ಎಫ್.ಸಿ ಕಂಪೆನಿಯ ೦% ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯವಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.