HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮರೋಡಿ ಸಂತೃಪ್ತಿ ಫರ್ನಿಚರ್‍ಸ್ ಮತ್ತು ಟಿಂಬರ್ ಶುಭಾರಂಭ

ಮರೋಡಿ: ಇಲ್ಲಿಯ ಸಂತೃಪ್ತಿ ಪಂಬೆಟ್ಟು ರತ್ನಾಕರ ಬುಣ್ಣಾನ್ ಮಾಲಕತ್ವದ ಸಂತೃಪ್ತಿ ಫರ್ನಿಚರ್‍ಸ್ ಮತ್ತು ಟಿಂಬರ್ ಇದರ ಶುಭಾರಂಭವು ಶಿರ್ತಾಡಿ ಹೈಸ್ಕೂಲ್ ರಸ್ತೆ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಎ.14ರಂದು ನಡೆಯಿತು.
ಮಾಲಕರ ಮಾತಾಪಿತರಾದ ಶ್ರೀಮತಿ ರಾಜಮ್ಮ ಮತ್ತು ಶೀನ ಪೂಜಾರಿ ದಂಪತಿ ಸಂಸ್ಥೆಯನ್ನು ದೀಪಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಎಸ್ ಕೋಟ್ಯಾನ್ ಮರೋಡಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮೀ ಸೇವಾ ಸಂಘದ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಮರೋಡಿ, ಬಿಜೆಪಿ ಮೂಡಬಿದ್ರೆ ಮಂಡಲ ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಭಜರಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ ಆರ್, ಭಜರಂಗದಳ ವೇಣೂರು ಪ್ರಖಂಡ ಸಂಚಾಲಕ ರಾಮ್‌ಪ್ರಸಾದ್ ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದು, ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಬಂದಂತಹ ಅತಿಥಿಗಳನ್ನು ಮಾಲಕ ರತ್ನಾಕರ ಬುಣ್ಣಾನ್ ಸ್ವಾಗತಿಸಿ, ಸತ್ಕರಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.