ರಾಜಕೇಸರಿ ನೂತನ ಶಾಖೆ ಉದ್ಘಾಟನೆ

ಬೆಳ್ತಂಗಡಿ : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಎ.28 ರಂದು ರಾಜಕೇಸರಿ ಸಂಘಟನೆಯ ನೂತನ ಶಾಖೆಯನ್ನು ಪ್ರಶಾಂತ್ ಮೊಗವೀರ ಬೈಂದೂರು ನೇತೃತ್ವದಲ್ಲಿ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಚೈತ್ರ ಕುಂದಾಪುರ, ರಾಜಕೇಸರಿ ಸಂಸ್ಥಾಪಕ ದೀಪಕ್.ಜಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವ ಅಧ್ಯಕ್ಷ ಅರ್ಪಣ್ ಶೆಟ್ಟಿ ಪೂಂಜಶ್ರೀ, ಜಿಲ್ಲಾ ಸಹ ಸಂಚಾಲಕ ಲೋಕೇಶ್ ಶಬರಬೈಲು, ಡಾ|| ಸುಬ್ರಹ್ಮಣ್ಯ ಭಟ್ ಬಜರಂಗದಳ ಬಿಜೂರು ಅಧ್ಯಕ್ಷ, ಶ್ರೀಧರ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಲೋಕೇಶ್ ಕುತ್ಲೂರು, ತಾಲೂಕು ಮಹಿಳಾ ಅಧ್ಯಕ್ಷೆ ರತ್ನಾಗಣೇಶ್, ಗುರು ಶೆಟ್ಟಿ ಗಂಟೆಹೊಳೆ, ಇವರುಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕುಮಾರಿ ಚೈತ್ರ ಕುಂದಾಪುರ ಹಾಗೂ ಡಾ|| ಸುಬ್ರಹ್ಮಣ್ಯ ಭಟ್ ಹಾಗೂ ಸಂಸ್ಥಾಪಕ ದೀಪಕ್.ಜಿ ಅವರನ್ನು ಸನ್ಮಾನಿಸಲಾಯಿತು.ಉಡುಪಿ ಜಿಲ್ಲೆ ಅಧ್ಯಕ್ಷರಾಗಿ ಆಯ್ಕೆ ಗೊಂಡ ಪ್ರಶಾಂತ್ ಬೈಂದೂರು ಹಾಗೂ ನೂರಾರು ಕಾರ್ಯಕರ್ತರನ್ನು ಸಂಸ್ಥಾಪಕರಾದ ದೀಪಕ್.ಜಿ ಅವರು ಸಾಲು ಹೊದಿಸಿ ರಾಜಕೇಸರಿ ಸಂಘಟನೆಗೆ ಬರ ಮಾಡಿ ಕೊಳ್ಳಲಾಯಿತು. ಸಂಘದ ಧ್ಯೇಯಗಳು ಹಾಗೂ ಕಾರ್ಯ ವೈಖರಿಯ ಬಗ್ಗೆ ವಿವರಗಳನ್ನು ನೀಡುತ್ತಾ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ರಾಜ ಕೇಸರಿ ಘಟಕಗಳನ್ನು ನಿರ್ಮಿಸಿ ರಾರಾಜಿಸಬೇಕು ಎಂದು ತೀರ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.