ಬಳ್ಳಮಂಜ: ಮೂಡುಗೋಪುರ ಸಮರ್ಪಣಾ ಸಮಾರಂಭ

ಮಚ್ಚಿನ: ಇಲ್ಲಿಯ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಕಲಶ ವಾರ್ಷಿಕ ದಿನಾಚರಣೆ ಹಾಗೂ ಮೂಡುಗೋಪುರ ಸಮರ್ಪಣಾ ಸಮಾರಂಭವು ಇಂದು( ಎ.29) ಜರುಗಿತು.
ಮೂಡುಗೋಪುರದ ಉದ್ಘಾಟನೆಯನ್ನು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ ಮೋಹನ ಆಳ್ವ ನೆರವೇರಿಸಿದರು.
ಇಂದು ಬೆಳಿಗ್ಗೆ ಮೂಡುಗೋಪುರ ಸಮರ್ಪಣೆಯ ಪ್ರಯುಕ್ತ ಪಂಚ ವಿಂಶತಿ ದ್ರವ್ಯಕಲಶ ಪ್ರತಿಷ್ಠೆ, ೮ ಜನ ವೇದಜ್ಞರಿಂದ ಋಗ್ವೇದದ ೮ ಅಷ್ಟಕಗಳ ಪಾರಾಯಣ, ಪೂರ್ವಕ ಸಂಹಿತಾಕಲಶ, ಆದಿವಾಸ ಹೋಮ, ಪವಮಾನ ಹೋಮ, ಅಷ್ಟದ್ರವ್ಯ ಹೋಮ, ಈಶ್ವರದೇವರಿಗೆ ಏಕದಶಾ ರುದ್ರಾಭಿಷೇಕ, ಆಶ್ಲೇಷ ಪೂಜೆ, ಬ್ರಹ್ಮಚಾರಿ ಆರಾಧನೆ, ನೂತನ ಮೂಡುಗೋಪುರ ಸಮರ್ಪಣೆ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಡಾ| ಯಂ. ಹರ್ಷ ಸಂಪಿಗೆತ್ತಾಯ, ಪ್ರಧಾನ ಅರ್ಚಕರು, ಮತ್ತಿತರ ಗಣ್ಯರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.