ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕೊಕ್ರಾಡಿಯ ಶೀನ ರವರಿಗೆ ಚಿಕಿತ್ಸೆಗೆ  ನೆರವಾಗಿ

ವೇಣೂರು: ಮನೆಗೆ ಆಧಾರಸ್ತಂಭವಾಗಿದ್ದ ವ್ಯಕ್ತಿಯೊಬ್ಬರು ಇದೀಗ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಆರ್ಥಿಕವಾಗಿ ಬಳಲಿರುವ ಕುಟುಂಬ ಚಿಕಿತ್ಸೆಗೆ ನೆರವಾಗುವಂತೆ ದಾನಿಗಳಲ್ಲಿ ಮನವಿ ಮಾಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾ.ಪಂ. ವ್ಯಾಪ್ತಿಯ ಕೊಕ್ರಾಡಿ ಅಂಬಲಪಲ್ಕೆ ನಿವಾಸಿ ಶೀನ ಮೇರ (56 ವ.) ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರು. ಇವರಿಗೆ ಮೂವರು ಪುತ್ರರು ಇದ್ದು, ಇಬ್ಬರು ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಕೊನೆಯ ಪುತ್ರ ಈಗಾಗಲೇ ದ್ವಿತೀಯ ಪಿಯುಸಿ ಮುಗಿಸಿದ್ದಾನೆ. ಇವರ ಪತ್ನಿ ವಸಂತಿ ಮನೆಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಇವರು ಸರಿಸುಮಾರು 2 ತಿಂಗಳ ಹಿಂದೆ ಹೊಟ್ಟೆನೋವೆಂದು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ರೋಗ ವಾಸಿಯಾಗಲಿಲ್ಲ. ಆ ಬಳಿಕ ಕಾರ್ಕಳದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಪಡೆದಿದ್ದರು. ರೋಗ ಗುಣಮುಖವಾಗದೇ ಇದ್ದಾಗ ಮಂಗಳೂರು ಸರಕಾರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ತೀವ್ರ ನಿಗಾ ಘಟಕ ಸೌಲಭ್ಯದ ಕೊರತೆಯಿಂದ ದಾಖಲು ಮಾಡಲು ಅಸಾಧ್ಯವಾಗುತ್ತಿದ್ದು, ಬೇರೆಡೆಗೆ ಕೊಂಡೊಯ್ಯುವಂತೆ ಸೂಚಿಸಿದ್ದಾರೆ. ಈಗಾಗಿ ಮಂಗಳೂರು ದೇರಳಕಟ್ಟೆಯಲ್ಲಿರುವ ಕನಚೂರು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದಾಗ ಕಿಡ್ನಿ ವೈಫಲ್ಯಕ್ಕೀಡಾಗಿರುವುದು ಗೊತ್ತಾಗಿದೆ. ಇದನ್ನು ತಿಳಿದ ಕುಟುಂಬಕ್ಕೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಸರಿಸುಮಾರು ಒಂದೂವರೆ ತಿಂಗಳ ಚಿಕಿತ್ಸೆಯ ಬಳಿಕ ಶೀನ ಮೇರ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಲೇಬೇಕೆಂದು ಸೂಚಿಸಿದ್ದಾರೆ. ಸಾಲಸೂಲ ಮಾಡಿ ಈವರೆಗೆ ಚಿಕಿತ್ಸೆ ಕುಟುಂಬ ಚಿಕಿತ್ಸೆ ನೀಡಿದೆ. ಪುತ್ರರಿಬ್ಬರ ಕೂಲಿ ವೇತನದಿಂದ ಇಡೀ ಕುಟುಂಬದ ಖರ್ಚು ವೆಚ್ಚವನ್ನು ನಿರ್ವಹಿಸಬೇಕಿದ್ದು, ಇವರ ಚಿಕಿತ್ಸಾ ವೆಚ್ಚವನ್ನು ಭರಿಸುವುದು ಕಷ್ಟವಾಗಿದೆ. ಆಯುಷ್ಮಾನ್ ಭಾರತ ಯೋಜನೆಯ ಕಾರ್ಡನ್ನು ಹೊಂದಿದ್ದರೂ ನಮಗೆ ಚಿಕಿತ್ಸಾ ವೆಚ್ಚ ದೊರೆಯಲಿಲ್ಲ ಎಂದು ಕುಟುಂಬ ಅವಲತ್ತುಕೊಂಡಿದೆ.
ಕೊಕ್ರಾಡಿ ರಸ್ತೆ ಬದಿಯಲ್ಲಿ ಕೇವಲ 5 ಸೆಂಟ್ಸ್ ವಿಸ್ತೀರ್ಣದ ಜಾಗದಲ್ಲಿ ವಾಸವಾಗಿರುವ ಕುಟುಂಬಕ್ಕೆ ಬೇರೆ ಆದಾಯವೇ ಇಲ್ಲವಾಗಿದೆ. ಈಗಾಗಿ ಶೀನ ಮೇರರ ಚಿಕಿತ್ಸಾ ವೆಚ್ಚಕ್ಕಾಗಿ ದಾನಿಗಳ ಮೊರೆ ಹೋಗಿದ್ದಾರೆ. ಶೀನ ಮೇರರಿಗೆ ಆರ್ಥಿಕ ಧನಸಹಾಯ ನೀಡಲಿಚ್ಚಿಸುವವರು ವೇಣೂರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಉಳಿತಾಯ ಖಾತೆ ಸಂಖ್ಯೆ : 17102523884  (ಐಎಫ್‌ಎಸ್‌ಸಿ ಕೋಡ್: ಕೆವಿಜಿಬಿ 0005103 ) ಗೆ ಕಳುಹಿಸಿಕೊಡಬಹುದು ಅಥವಾ ಶೀನ ಮೇರರ ಪುತ್ರ ಯೋಗೀಶ್‌ನ ಮೊಬೈಲ್ ಸಂಖ್ಯೆ 9480013844  ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.