ಮೇ.5 : ಕೋಟಿ-ಚೆನ್ನಯ ಟ್ರೋಫಿ ಅಂತರ್‌ಜಿಲ್ಲಾ ಮಟ್ಟದ ಲೀಗ್ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾಸಂಘ ಇದರ ಆಶ್ರಯದಲ್ಲಿ ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ಇದರ ಸಹಯೋಗದೊಂದಿಗೆ ಪ್ರಥಮ ವರ್ಷದ ಕೋಟಿ-ಚೆನ್ನಯ’ ಟ್ರೋಫಿ ಅಂತರ್ ಜಿಲ್ಲಾ ಮಟ್ಟದ ಲೀಗ್ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟ ಮೇ.5 ರಂದು ನಡೆಯಲಿದೆ ಎಂದು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ ತಿಳಿಸಿದರು.
ಅವರು ಎ.27 ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆಯಲಾದ ಪತ್ರಿಕಾಗೊಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿರುವ ಹೊನಲು ಬೆಳಕಿನ ಈ ಕಬಡ್ಡಿ ಪಂದ್ಯಾಟದಲ್ಲಿ ರಾಷ್ಟ್ರ- ರಾಜ್ಯ ಮತ್ತು ವಿವಿಧ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ದ.ಕ, ಉಡುಪಿ, ಉತ್ತರ ಕನ್ನಡ, ಕಾಸರಗೋಡು ಜಿಲ್ಲೆಗಳ ಪ್ರತಿಭಾನ್ವಿತ ಬಿಲ್ಲವ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಸಂತೋಷ್ ಕುಮಾರ್ ಉಪ್ಪಾರು, ಸಂಘದ ಕೋಶಾಧಿಕಾರಿ ಶೇಖರ ಬಂಗೇರ ಹೇರಾಜೆ, ಸಂಘಟನಾ ಕಾರ್ಯದರ್ಶಿ ಸಚಿನ್ ಕುಮಾರ್ ನೂಜೋಡಿ, ನಿರ್ದೇಶಕರುಗಳಾದ ನಿತ್ಯಾನಂದ ನಾವರ, ಮಹೇಶ್ ಬಂದಾರು, ಕೃಷ್ಣಪ್ಪ ಪೂಜಾರಿ ಲಾಯಿಲ, ನಾರಾಯಣ ಪೂಜಾರಿ ಮಚ್ಚಿನ, ಚಂದ್ರಶೇಖರ ಇಂದಬೆಟ್ಟು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.